ಗಂಡನ ಮನೆ ಬಿಟ್ಟು ಮಕ್ಕಳ ಜೊತೆ ಬೇರೆ ಇರುವ ನಿರ್ಧಾರ ಮಾಡಿದ್ರಾ ಶಿಲ್ಪಾ ಶೆಟ್ಟಿ?

First Published | Aug 31, 2021, 4:53 PM IST

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಪ್ರಸ್ತುತ ಪೋರ್ನ್ ವಿಡಿಯೋಗಳನ್ನು ತಯಾರಿಸಿ ಪ್ರಸಾರ ಮಾಡಿದ ಅರೋಪದಡಿಯಲ್ಲಿ ಕಂಬಿ ಎಣಿಸುತ್ತಿದ್ದಾರೆ. ಮುಂಬೈ ಪೊಲೀಸ್  ಜುಲೈ 19 ರಂದು ಕುಂದ್ರಾ ಅವರನ್ನು ಬಂಧಿಸಿತು. ಅಂದಿನಿಂದ ಅವರು ಹಲವು ಬಾರಿ ಹೈಕೋರ್ಟ್‌ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಪ್ರತಿ ಮೇಲ್ಮನವಿಯನ್ನು ತಿರಸ್ಕರಿಸಲಾಗುತ್ತಿದೆ. ಈ ನಡುವೆ ಪತ್ನಿ ಶಿಲ್ಪಾ ಶೆಟ್ಟಿ  ತನ್ನ ಮಕ್ಕಳೊಂದಿಗೆ ತನ್ನ ಗಂಡನ ಮನೆ ಬಿಟ್ಟು ಪ್ರತ್ಯೇಕವಾಗಿ ವಾಸಿಸಲು ಯೋಜಿಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ವಿವರ ಇಲ್ಲಿದೆ. 
 

ಬಾಲಿವುಡ್ ಹಂಗಾಮದ ವರದಿಯ ಪ್ರಕಾರ, ಶಿಲ್ಪಾ ತನ್ನ ಮಕ್ಕಳೊಂದಿಗೆ ತಮ್ಮ ಗಂಡನ ಮನೆ ಬಿಟ್ಟು ಪ್ರತ್ಯೇಕವಾಗಿ ವಾಸಿಸಲು ಯೋಜಿಸುತ್ತಿದ್ದಾರಂತೆ. ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ವರದಿ ಹೊರ ಬಂದಿಲ್ಲ. ಇದು ಕೇವಲ ವಂದತಿಯಾ ಅಥವಾ ನಟಿ ನಿಜವಾಗಲೂ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆಯೇ ಎಂದು ಕಾದು ನೋಡಬೇಕಾಗಿದೆ.

ಶಿಲ್ಪಾ ಶೆಟ್ಟಿಯ ಆಪ್ತ ಸ್ನೇಹಿತರ ಪ್ರಕಾರ, ರಾಜ್ ಕುಂದ್ರಾ ಅಶ್ಲೀಲ ವೀಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಸಿಕ್ಹಾಕಿಕೊಂಡ ನಂತರ ಆಕೆ ತುಂಬಾ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರು ಇನ್ನೂ ಆಘಾತದಲ್ಲಿದ್ದಾರೆ. ಅದೇ ಸಮಯದಲ್ಲಿ, ಕುಂದ್ರಾ ಅವರ ಸಮಸ್ಯೆಗಳೂ ಹೆಚ್ಚುತ್ತಿವೆ. ಪೊಲೀಸರು ಇನ್ನೂ ಈ ವಿಷಯವನ್ನು ಆಳವಾಗಿ ತನಿಖೆ ಮಾಡುತ್ತಿದ್ದಾರೆ.

Tap to resize

ರಾಜ್‌ ಕುಂದ್ರಾರ ಬಂಧನ ನಂತರ ತಮ್ಮ ಕೆಲಸದಿಂದ ಕೆಲವು ದಿನ ದೂರ ಉಳಿದಿದ್ದ ಶಿಲ್ಪಾ ಈಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ವರದಿಗಳ ಪ್ರಕಾರ, ಶಿಲ್ಪಾ ಶೆಟ್ಟಿ ಅವರು ಯಾವುದೇ ವಿವಾದಾತ್ಮಕ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂಬ ಷರತ್ತಿನ ಮೇಲೆ  ಸೂಪರ್ ಡ್ಯಾನ್ಸರ್ 4 ಕ್ಕೆ ಮರಳಲು ಒಪ್ಪಿಕೊಂಡಿದ್ದಾರೆ. ಈ ದಿನಗಳಲ್ಲಿ ಅವರು ತಮ್ಮನ್ನು ಶೋನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಸ್ಟೈಲ್ ಮತ್ತು ಲುಕ್‌ ಎಲ್ಲರ ಗಮನ ಸೆಳೆಯುತ್ತಿದೆ.  

ಶಿಲ್ಪಾಗೆ ತಾನು ಉಡುಗೊರೆಯಾಗಿ ಪಡೆದ ವಜ್ರದ ಉಂಗುರ ಮತ್ತು ಡ್ಯುಪ್ಲೆಕ್ಸ್ ಹೌಸ್‌ ಇಂತಹ ತಪ್ಪು ಕೆಲಸಗಳಿಂದ ಗಳಿಸಿದ ಹಣದಿಂದ ತರಲಾಗಿದೆ ಎಂದು ತಿಳಿದಿರಲಿಲ್ಲ ಎಂದು ಶಿಲ್ಪಾಳ ಸ್ನೇಹಿತೆ ಬಹಿರಂಗಪಡಿಸಿದ್ದಾರೆ ಎಂದು ವರದಿಗಳು ಹೇಳುತ್ತವೆ. 

ವರದಿಗಳ ಪ್ರಕಾರ ಶಿಲ್ಪಾ ತನ್ನ ಗಂಡನ ಆಸ್ತಿಯಿಂದ ಯಾವುದೇ ಹಣವನ್ನು ಮುಟ್ಟಲು ಬಯಸುವುದಿಲ್ಲ. ಅವಳು ಕೆಲಸ ಮಾಡುತ್ತಿದ್ದಾಳೆ ಮತ್ತು ಅವಳನ್ನು ಅವಳು ನೋಡಿಕೊಳ್ಳಬಹುದು. ಹಂಗಾಮ 2 ಮತ್ತು ನಿಕಮ್ಮ ನಂತರ ಶಿಲ್ಪಾ ಮತ್ತಷ್ಟು ಚಿತ್ರಗಳಲ್ಲಿ ಮಾಡಲು ಸಿದ್ಧವಾಗಿದ್ದಾಳೆ ಎಂದು ನಟಿಯ ಫ್ರೆಂಡ್‌ ಹೇಳಿದ್ದಾರೆ. 

ಅನುರಾಗ್ ಬಸು ಮತ್ತು ಪ್ರಿಯದರ್ಶನ್ ಅವರು ಈಗಾಗಲೇ ಆ ಪಾತ್ರವನ್ನು ಆಫರ್ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಇತ್ತೀಚೆನ ಇನ್‌ಸ್ಟಾಗ್ರಾಮ್ ಪೋಸ್ಟ್‌ ಸಾಕಷ್ಟು ಚರ್ಚೆಯಾಗಿದೆ. ಅವರು ತಪ್ಪುಗಳನ್ನು ಮಾಡುವ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನಾನು ಪ್ರತಿ ಕ್ಷಣವೂ ಇಷ್ಟದಂತೆ ಬದುಕುವ ಭರವಸೆ ನೀಡಿ ಕೊಳ್ಳುತ್ತೇನೆ ಎಂದು ಅದರಲ್ಲಿ ಅವರು  ಬರೆದು ಕೊಂಡಿದ್ದಾರೆ.

ಅದೇ ಸಮಯದಲ್ಲಿ, ಅವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮೊದಲಿಗಿಂತ ಹೆಚ್ಚು ಸಕ್ರಿಯರಾಗಿದ್ದಾರೆ. ಶಿಲ್ಪಾ ಶೆಟ್ಟಿ 1993 ರಲ್ಲಿ ಬಾಜಿಗರ್ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದರು.  

ಶಿಲ್ಪಾ ಮೇನ್ ಕಿಲಾಡಿ ತು ಅನಾರಿ, ಆವೋ ಪ್ಯಾರ್ ಕರೇನ್, ಹಿಮ್ಮತ್, ಇನ್ಸಾಫ್, ಧಡ್ಕನ್, ಜಂಗ್, ಇಂಡಿಯನ್, ರಿಶ್ಟೇ, ವೆಪನ್, ಫಾರೆಬ್, ಲೈಫ್ ಇನ್ ಮೆಟ್ರೋ, ಅಪ್ನೆ, ದೋಸ್ತಾನ, ಡಸ್, ಗರ್ವ್. ಆದರೂ ಅವರು ನಟನಾ ಕೆರಿಯರ್‌ನಲ್ಲಿ ಹೆಚ್ಚು ಸಾಧನೆ ಮಾಡಲಿಲ್ಲ. 

ಇದರ ನಂತರ ಶಿಲ್ಪಾ ಶೆಟ್ಟಿ ಚಲನಚಿತ್ರಗಳಿಗೆ ವಿದಾಯ ಹೇಳಿದರು ಮತ್ತು ನವೆಂಬರ್ 2009 ರಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳು ವಿಯಾನ್ ಮತ್ತು ಮಗಳು ಸಮೀಷಾ ಇದ್ದಾರೆ.

ಬಹಳ ದಿನಗಳ ನಂತರ ಅವರು ಹಂಗಾಮ 2 ಚಿತ್ರದ ಮೂಲಕ ಬಾಲಿವುಡ್‌ಗೆ ಮರಳಿದರು. ಈ ಚಿತ್ರವನ್ನು ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆ ಮಾಡಲಾಯಿತು. 

Latest Videos

click me!