ಯಶಸ್ಸಿನ ಮೆಟ್ಟಿಲೇರುತ್ತಿದ್ದಂತೆ, ಪ್ರೇಮಿಗಳಿಗೆ ಕೈ ಕೊಟ್ಟ ಸೆಲೆಬ್ರಿಟಿಗಳು!

Suvarna News   | Asianet News
Published : Aug 31, 2021, 04:43 PM IST

ಬಾಲಿವುಡ್‌ನಲ್ಲಿ ಆಫೇರ್‌, ಬ್ರೇಕಪ್‌, ಮದುವೆಗಳು, ವಿಚ್ಛೇದನಗಳು ಮತ್ತು ಪ್ಯಾಚ್-ಅಪ್‌ಗಳು ನಡೆಯುತ್ತಿರುತ್ತವೆ. ಈ ವಿಷಯಗಳು ಯಾವಾಗಲೂ ಸುದ್ದಿಯಾಗುತ್ತಿರುತ್ತವೆ. ಇದೇ ರೀತಿ ಬಾಲಿವುಡ್‌ನ ಕೆಲವರು ಸ್ಟಾರ್ ಅಥವಾ ಫೇಮಸ್ ಆಗುವ ಮೊದಲು, ಡೇಟಿಂಗ್ ಮಾಡುತ್ತಿದ್ದರು. ಆದರೆ ಕೆರಿಯರ್‌ನಲ್ಲಿ ಮುಂದುವರೆದಾಗ ಹಳೆಯ ಪ್ರೇಮಿಯೊಂದಿಗಿನ ಸಂಬಂಧವನ್ನು ಕಾರಣವಿಲ್ಲದೇ ಕೊನೆಗೊಳಿಸಿದರು. ಅವರನ್ನು ಬಿಟ್ಟು ಹೊಸ ಪಾರ್ಟನರ್‌ಗಳ ಜೊತೆ ತಮ್ಮ ಜೀವನದಲ್ಲಿ ಮುಂದುವರೆದಿದ್ದಾರೆ. 

PREV
17
ಯಶಸ್ಸಿನ ಮೆಟ್ಟಿಲೇರುತ್ತಿದ್ದಂತೆ, ಪ್ರೇಮಿಗಳಿಗೆ ಕೈ ಕೊಟ್ಟ ಸೆಲೆಬ್ರಿಟಿಗಳು!

ಬಾಲಿವುಡ್‌ನ ಕೆಲವರು ಸ್ಟಾರ್ ಅಥವಾ ಫೇಮಸ್ ಆಗುವ ಮೊದಲು, ಡೇಟಿಂಗ್ ಮಾಡುತ್ತಿದ್ದರು. ಆದರೆ ಕೆರಿಯರ್‌ನಲ್ಲಿ ಮುಂದುವರೆದಾಗ ಹಳೆಯ ಪ್ರೇಮಿಯೊಂದಿಗಿನ ಸಂಬಂಧವನ್ನು ಥಟ್ಟನೆ ಕೊನೆಗೊಳಿಸಿದರು. ಅವರನ್ನು ಬಿಟ್ಟು ಹೊಸ ಪಾರ್ಟನರ್‌ಗಳ ಜೊತೆ ತಮ್ಮ ಜೀವನದಲ್ಲಿ ಮುಂದುವರೆದಿದ್ದಾರೆ. 

27

ದೀಪಿಕಾ ಪಡುಕೋಣೆ ಮತ್ತು ನಿಹಾರ್ ಪಾಂಡ್ಯ:
ದೀಪಿಕಾ ಪಡುಕೋಣೆ ನಿಹಾರ್ ಪಾಂಡ್ಯರನ್ನು ಮುಂಬೈನಲ್ಲಿ ತನ್ನ ಮಾಡೆಲಿಂಗ್ ದಿನಗಳಲ್ಲಿ ಭೇಟಿಯಾದರು. ನಿಹಾರ್ ಪಾಂಡ್ಯ ಹಿಮೇಶ್ ರೇಶಮಿಯಾರ ಎರಡು ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಮತ್ತು ನಿಹಾರ್ ಬೇರೆಯಾಗುವ ಮುನ್ನ ಲಿವ್ ಇನ್ ಸಂಬಂಧದಲ್ಲಿ ಸಹ ಇದ್ದರು ಎಂದು ಹೇಳಲಾಗಿದೆ.

37

ಅನುಷ್ಕಾ ಶರ್ಮಾ ಮತ್ತು ಜೊಹೇಬ್ ಯೂಸುಫ್:
ಇಬ್ಬರೂ ಬೆಂಗಳೂರಿನಲ್ಲಿ ತಮ್ಮ ಮಾಡೆಲಿಂಗ್ ದಿನಗಳಲ್ಲಿ ಭೇಟಿಯಾದರು ಮತ್ತು ಡೇಟಿಂಗ್ ಆರಂಭಿಸಿದರು. ಅನುಷ್ಕಾ ಮತ್ತು ಜೊಹೇಬ್ ಇಬ್ಬರೂ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷಿಸಲು ಮುಂಬೈಗೆ ಬಂದರು. ಅನುಷ್ಕಾಗೆ ಅದೃಷ್ಟ ಒಲಿಯಿತು. ಆದರೆ ಜೊಹೆಬ್‌ಗೆ ಲಕ್‌ ಕೆಲಸ ಮಾಡಲಿಲ್ಲ ಮತ್ತು ಬೆಂಗಳೂರಿಗೆ ವಾಪಸ್ ಹೋದರು. ಹಾಗೇ  ಅವರ ಸಂಬಂಧವೂ ಕೊನೆಗೊಂಡಿತು.

47

ಐಶ್ವರ್ಯಾ ರೈ ಮತ್ತು ರಾಜೀವ್ ಮುಲ್ಚಂದಾನಿ:
ಐಶ್ವರ್ಯಾ ರೈ ಮತ್ತು ರಾಜೀವ್ ಮುಲ್ಚಂದಾನಿ ಸಹ ಮಾಡೆಲಿಂಗ್ ಮೂಲಕ ಭೇಟಿಯಾದರು ಮತ್ತು ಡೇಟಿಂಗ್ ಮಾಡಿದರು. ಐಶ್ವರ್ಯಾ ಮತ್ತು ರಾಜೀವ್ ಜೊತೆಯಾಗಿ ತಮ್ಮ ಮಾಡೆಲಿಂಗ್ ವೃತ್ತಿಯನ್ನು ಆರಂಭಿಸಿದರು. ಆದರೆ ಐಶ್ವರ್ಯಾ 1994 ರಲ್ಲಿ ಮಿಸ್ ವರ್ಲ್ಡ್ ಕಿರೀಟವನ್ನು ಗೆದ್ದರು ಮತ್ತು ಬಾಲಿವುಡ್ ಪ್ರವೇಶಿಸಿದರು. ಅಲ್ಲಿಗೆ ಅವರ ಸಂಬಂಧವೂ ಮುಕ್ತಾಯವಾಯಿತು.

57

ರಣಬೀರ್ ಕಪೂರ್ ಮತ್ತು ಅವಂತಿಕಾ ಮಲಿಕ್: 
ನಟ ಇಮ್ರಾನ್ ಖಾನ್ ಅವರ ವಿಚ್ಛೇದಿತ ಪತ್ನಿ ಅವಂತಿಕಾ ಮಲಿಕ್ ಅವರ ಕಾಲೇಜು ದಿನಗಳಲ್ಲಿ ಅವರ ಮತ್ತು ರಣಬೀರ್‌ ನಡುವೆ ಭಾರೀ ಪ್ರೀತಿ ಇತ್ತು ಎಂಬುದು ಹಲವರಿಗೆ ತಿಳಿದಿದೆ. ಜಸ್ಟ್ ಮೊಹಬ್ಬತ್ ಎಂಬ ಜನಪ್ರಿಯ ಧಾರಾವಾಹಿ ಸೆಟ್‌ನಲ್ಲಿ ರಣಬೀರ್ ಆಕೆಯನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ. ನಂತರ, ಕೆಲವು ಕಾರಣಗಳಿಗಾಗಿ, ಇಬ್ಬರೂ ಬೇರ್ಪಟ್ಟರು.

67

ಜಾಕ್ವೆಲಿನ್ ಫೆರ್ನಾಂಡೀಸ್ ಮತ್ತು ಹಸನ್ ಬಿನ್ ರಶೀದ್ ಅಲ್ ಖಲೀಫಾ: 
ಜಾಕ್ವೆಲಿನ್ ಫೆರ್ನಾಂಡೀಸ್ ಮತ್ತು ಹಸನ್ ಬಿನ್ ರಶೀದ್ ಅಲ್ ಖಲೀಫಾ ಎರಡು ವರ್ಷಗಳ ಸುದೀರ್ಘ ಸಂಬಂಧವನ್ನು ಹೊಂದಿದ್ದರು. ಅದು ಜಾಕ್ವೆಲಿನ್ ಬಾಲಿವುಡ್ ಸೇರಿದ ತಕ್ಷಣ ಕೊನೆಗೊಂಡಿತು. ಹಸನ್‌ ಬಹ್ರೇನ್‌ನ ರಾಜಕುಮಾರ. 

77

ಆಲಿಯಾ ಭಟ್ ಮತ್ತು ಅಲಿ ದಡಾರ್ಕರ್:
ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದಿ ಇಯರ್‌ನೊಂದಿಗೆ ಬಾಲಿವುಡ್‌ಗೆ ಪ್ರವೇಶಿಸುವ ಮೊದಲು, ಆಲಿಯಾ ಭಟ್ ಅಲಿ ದಡಾರ್ಕರ್ ಜೊತೆ ಡೇಟಿಂಗ್ ಮಾಡಿದ್ದರು. ಶಾಲೆಯಲ್ಲಿ ಒಟ್ಟಿಗೆ ಇದ್ದ ಇಬ್ಬರ ನಡುವೆ ಪ್ರೀತಿ ಬೆಳೆಯಿತು. ಆದರೆ ಇವರ ಬ್ರೇಕಪ್‌ಗೆ ಯಾವುದೇ ಕಾರಣ ಮಾತ್ರ ಬಹಿರಂಗವಾಗಿಲ್ಲ.

click me!

Recommended Stories