ಕಪ್ಪು ಗೌನ್‌ನಲ್ಲಿ ಶಿಲ್ಪಾ ಶೆಟ್ಟಿ; ನೀಳ ಸೊಂಟಕ್ಕೆ ಸರಿಸಾಟಿ ಯಾವ ನಾಯಕಿನೂ ಇಲ್ಲ ಎಂದ್ರು ಫ್ಯಾನ್ಸ್, ಆದ್ರೂ ಟ್ರೋಲ್ ಆಗಿದ್ದೇಕೆ?

First Published | Mar 19, 2024, 4:06 PM IST

ಸೊಂಟ ಅಂದ್ರೆ ಶಿಲ್ಪಾ ಶೆಟ್ಟಿಯ ಸೊಂಟದಂತಿರಬೇಕೆಂಬುದು ಬಹುತೇಕ ಹುಡುಗಿಯರ ಆಸೆ. 48 ವರ್ಷದ ಶಿಲ್ಪಾ ಶೆಟ್ಟಿ ಇಂದಿಗೂ ತಮ್ಮ ಸೊಂಟವನ್ನು 18ರಲ್ಲಿದ್ದಂತೆಯೇ ಕಾಪಾಡಿಕೊಂಡು ಬಂದಿದ್ದಾರೆ. ಅವರು ಸೋಮವಾರದ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದರೂ ಈ ಒಂದು ಕಾರಣಕ್ಕಾಗಿ ಟ್ರೋಲ್ ಆಗುತ್ತಿದ್ದಾರೆ. 

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಎಷ್ಟು ಜನಪ್ರಿಯವೋ, ಆಕೆಯ ಸೊಂಟವೂ ಅಷ್ಟೇ ಫೇಮಸ್. ಅಂಥಾ ನೀಳವಾದ, ಸರಿಯಾದ ಆಕಾರದ ಸೊಂಟಕ್ಕೆ ಸರಿಸಾಟಿ ಇಲ್ಲ.

48 ವರ್ಷದ ಶಿಲ್ಪಾ ಶೆಟ್ಟಿ, ಎರಡು ಮಕ್ಕಳ ತಾಯಾದರೂ ಇನ್ನೂ ತನ್ನ ಸೌಂದರ್ಯದ ಕಿರೀಟಪ್ರಾಯದಂತಿರುವ ಸೊಂಟದ ಸೌಂದರ್ಯ ಮಾಸಲು ಬಿಟ್ಟಿಲ್ಲ. 

Tap to resize

ಸೋಮವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿ, ಬಹಳ ಸುಂದರವಾಗಿ ಕಾಣಿಸುತ್ತಾ ಎಲ್ಲರನ್ನೂ ಬೆರಗುಗೊಳಿಸಿದರು. 

ಸೈಡ್ ಕಟ್‌ಗಳೊಂದಿಗೆ ಕಪ್ಪು ದೇಹವನ್ನು ಅಪ್ಪಿಕೊಳ್ಳುವ ಉಡುಗೆಯನ್ನು ಧರಿಸಿದ್ದ ಶಿಲ್ಪಾ ಬಹಳ ಆತ್ಮವಿಶ್ವಾಸದಿಂದ ಪಾಪಾರಾಜಿಗಳಿಗೆ ಪೋಸ್ ನೀಡಿದರು. 

ಆದರೆ, ಅವರ ಸೊಂಟವನ್ನು ಆವರಿಸಿದ್ದ ಪಾರದರ್ಶಕ ಮಾಸ್ಕೊಂದರ ಕಾರಣಕ್ಕಾಗಿ ಈ ಫೋಟೋಗಳು ಭಾರೀ ಟ್ರೋಲ್‌ಗೆ ಒಳಗಾದವು. ಎಲ್ಲ ಓಕೆ, ಆದರೆ, ಸೊಂಟಕ್ಕೆ ಹೆಲ್ಮೆಟ್ ಯಾಕೆ ಎಂದು ಬಹಳಷ್ಟು ಜನ ಕಾಲೆಳೆಯುತ್ತಿದ್ದಾರೆ. 

ಬಹುಷಃ ತನ್ನ ಪತಿಯ ಮಾಸ್ಕ್‌ಗಳನ್ನು ತಯಾರಿಸುವ ಉಳಿದ ಭಾಗ ಬಳಸಿ ಫ್ಯಾಶನ್ ಎಂದು ಶಿಲ್ಪಾ ಸುತ್ತಿಕೊಂಡಿರಬೇಕು ಎಂದು ಒಬ್ಬರೆಂದರೆ, ಯಾಕೋ ಈ ಫ್ಯಾಶನ್ ಸೆನ್ಸ್ ಉರ್ಫಿಯನ್ನು ನೆನಪಿಸಿತು ಎಂದು ಮತ್ತೊಬ್ಬ ಸೋಷ್ಯಲ್ ಮೀಡಿಯಾ ಬಳಕೆದಾರರು ಹೇಳಿದ್ದಾರೆ. 

'ಅರೆ, ಮರೆತೇನಾದರೂ ಹ್ಯಾಂಗರನ್ನೂ ಕೂಡಾ ಡ್ರೆಸ್ ಜೊತೆ ಧರಿಸಿದರಾ' ಎಂದು ಇನ್ನೊಬ್ಬರು ವ್ಯಂಗ್ಯವಾಡಿದರೆ, ಮಗದೊಬ್ಬರು, 'ಆಕ್ಸಿಜನ್ ಮಾಸ್ಕನ್ನು ತಪ್ಪಾಗಿ ಸೊಂಟಕ್ಕೆ ಧರಿಸಿದಿರಾ' ಎಂದು ಪ್ರಶ್ನಿಸಿದ್ದಾರೆ. 

ಅದೇನೇ ಇರಲಿ, ಕಪ್ಪು ಗೌನ್‌ನಲ್ಲಿ ಶಿಲ್ಪಾ ಯಾವತ್ತಿಗಿಂತ ಒಂದು ಕೈ ಹೆಚ್ಚೇ ಸುಂದರವಾಗಿ ಕಾಣುತ್ತಿದ್ದಿದ್ದಂತೂ ನಿಜ. ಅವರ ಹೇರ್‌ಸ್ಟೈಲ್, ನ್ಯೂಡ್ ಮೇಕಪ್ ಎಲ್ಲವೂ ಒಂದಕ್ಕೊಂದು ಹೊಂದಾಣಿಕೆಯಲ್ಲಿದ್ದವು. 

ಈ ಮಧ್ಯೆ ಕೆಲ ನೆಟ್ಟಿಗರು ಶಿಲ್ಪಾ, ಮತ್ತೊಂದು ಪ್ರಶಸ್ತಿ ಕಾರ್ಯಕ್ರಮದಲ್ಲಿ ಬ್ರೆಜಿಲಿಯನ್ ಗಾಯಕಿ ಮತ್ತು ಗೀತರಚನೆಕಾರ್ತಿ ಅನಿತ್ತಾ ಧರಿಸಿದ್ದ ಉಡುಗೆಯನ್ನೇ ಕಾಪಿ ಮಾಡಿದ್ದು, ಸಾಲದೆಂಬಂತೆ ಹೇರ್‌ಸ್ಟೈಲ್ ಮೇಕಪ್ ಲುಕ್ಕನ್ನು ಕೂಡಾ ಕಾಪಿ ಮಾಡಿದ್ದಾರೆ ಎಂಬುದನ್ನು ಹೆಕ್ಕಿ ತೆಗೆದಿದ್ದಾರೆ. 

Latest Videos

click me!