1 ಲೋಟ ಹಾಲು ಒಂದು ಖರ್ಜೂರ ತಿಂದು 26 ಕೆಜಿ ಕಳೆದುಕೊಂಡ ನಟ; ಫೋಟೋ ವೈರಲ್

Published : Mar 19, 2024, 03:33 PM IST

ಬಾಲಿವುಡ್ ಅಂಗಳದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಲು ಸಜ್ಜಾಗಿದ್ದಾರೆ ರಣದೀಪ್. ಫಿಟ್ ಆಗಿ ಕಾಣಿಸಲು ತೂಕ ಕಳೆದುಕೊಂಡಿದ್ದಾರೆ.   

PREV
16
1 ಲೋಟ ಹಾಲು ಒಂದು ಖರ್ಜೂರ ತಿಂದು 26 ಕೆಜಿ ಕಳೆದುಕೊಂಡ ನಟ; ಫೋಟೋ ವೈರಲ್

ಸ್ವಾತಂತ್ರ್ಯ ವೀರ ಸಾವರ್ಕರ್‌ ಸಿನಿಮಾ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿರುವ ರಣದೀಪ್ ಹೂಡಾ ಸುಮಾರು 26 ಕೆಜಿ ಸಣ್ಣಗಾಗಿದ್ದಾರೆ.
 

26

ಎಂದೂ ಕಾಣಿಸಿಕೊಳ್ಳದ ರಣದೀಪ್ ಅವತಾರ ನೋಡಿ ಸಿನಿ ರಸಿಕರು ಶಾಕ್ ಆಗಿದ್ದಾರೆ.  ನಾಲ್ಕು ತಿಂಗಳುಗಳ ಕಾಲ ಒಂದು ಚೂರು ಬದಲಾಗದೆ ಹೇಗೆ ರಣದೀಪ್ ಈ ರೀತಿ ಕಾಣಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನೆ ಮಾಡುವವರಿಗೆ ನಿರ್ಮಾಪಕರು ಉತ್ತರ ಕೊಟ್ಟಿದ್ದಾರೆ. 
 

36

ರಣದೀಪ್ ಹೂಡಾ ಮೊದಲು ಸಂದೀಪ್ ಸಿಂಗ್‌ ಜೊತೆ ನನ್ನ ಆಫೀಸ್‌ಗೆ ಭೇಟಿ ನೀಡಿದ್ದರು ಆಗ 86 ಕೆಜಿ ತೂಕ ಇದ್ದರು. ಪಾತ್ರದಲ್ಲಿ ಎಷ್ಟು ಮುಳುಗಿದರು ಅಂದ್ರೆ ಈ ಕ್ಷಣದವರೆಗೂ ಸ್ಕ್ರೀನ್‌ ಮೇಲೆ ಹೇಗೆ ಕಾಣಿಸಿಕೊಳ್ಳಬೇಕು ಎಂದು ಪಕ್ಕಾ ಲೆಕ್ಕಾಚಾರ ಮಾಡಿ ತಯಾರಿ ಮಾಡಿಕೊಳ್ಳುತ್ತಿದ್ದರು. 
 

46

ಯಾವ ಕಾರಣಕ್ಕೂ ಯಾವ ದೃಶ್ಯ ಕೂಡ ವೀಕ್ಷಕರಿಗೆ ಕಡಿಮೆ ಅನಿಸಬಾರದು ಎನ್ನುತ್ತಿದ್ದರು. ದೇಹ ತೂಕ ಕಾಪಾಡಿಕೊಳ್ಳಲು ನಾಲ್ಕು ತಿಂಗಳುಗಳ ಕಾಲ ಒಂದು ಖರ್ಜೂರ ಮತ್ತು ಒಂದು ಗ್ಲಾಸ್ ಹಾಲು ಕುಡಿಯುತ್ತಿದ್ದರು.

56

ಚಿತ್ರೀಕರಣ ಮುಗಿಯುವ ಕೊನೆ ದಿನದವರೆಗೂ ಹೀಗೆ ಮಾಡುತ್ತಿದ್ದರು ಎಂದಿದ್ದಾರೆ ಆನಂದ್.ನಟನೆ ಮಾತ್ರವಲ್ಲ ನಿರ್ದೇಶಕನಾಗಿಯೂ ನಾನು ಸೈ ಎಂದು ಸ್ವಾತಂತ್ರ್ಯ ವೀರ ಸಾವರ್ಕರ್ ಚಿತ್ರದ ಮೂಲಕ ರಣದೀಪ್ ಬಿ-ಟೌನ್‌ಗೆ ತೋರಿಸಿಕೊಟ್ಟಿದ್ದಾರೆ. ಚಿತ್ರಕಥೆ ಬರಹಗಾರ ಉತ್ಕರ್ಷ್ ನೈತಾನಿ ಜೊತೆ ರಣದೀಪ್ ಕೂಡ ಸಿನಿಮಾ ಕಥೆ ಬರೆದಿದ್ದಾರೆ.

66

ನಮಗೆ ಸ್ವಾತಂತ್ರ ದೊರಕಿಸಿಕೊಡುವಲ್ಲಿ ಅನೇಕ ವೀರರು ಕಾರಣರಾಗಿದ್ದಾರೆ. ಆದರೆ ಅವರಲ್ಲಿ ಎಲ್ಲರು ಅಷ್ಟಾಗಿ ಗುರುತಿಸಲ್ಪಟ್ಟಿಲ್ಲ. ಆದರೆ ಸಾವರ್ಕರ್ ಅವರ ಬಗ್ಗೆ ಸಾಕಷ್ಟು ತಪ್ಪಾದ ಚರ್ಚೆ ನಡೆಯುತ್ತಿದೆ. ಅವರ ಬಗ್ಗೆ ಜನರಿಗೆ ಹೇಳಬೇಕು. ತುಂಬಾ ಪ್ರಭಾವಶಾಲಿ ವ್ಯಕ್ತಿ ಎಂದಿದ್ದಾರೆ ರಣದೀಪ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories