Kareenaರಿಂದ ಮಕ್ಕಳಿಗೆ ಸಿನಿಮಾ ನೋಡದಂತೆ ನಿರ್ಬಂಧ ಬಹಿರಂಗ ಪಡಿಸಿದ Sharmila Tagore!

First Published | May 15, 2022, 5:02 PM IST

ಕರೀನಾ ಕಪೂರ್  (Kareena Kapoor) ತನ್ನ ಇಬ್ಬರು ಮಕ್ಕಳಾದ ತೈಮೂರ್ ಅಲಿ ಖಾನ್ (Taimur Ali Khan)  ಮತ್ತು ಜೆಹ್ ಅಲಿ ಖಾನ್  (Jeh Ali Khan) ಬಗ್ಗೆ ತುಂಬಾ ಪೋಸಿಸ್ಸಿವ್‌  ಎಂದು ಎಲ್ಲರಿಗೂ ತಿಳಿದಿದೆ. ಕರೀನಾ ತನ್ನ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆದರೆ  ಕರೀನಾ ಕಪೂರ್ ತನ್ನ ಇಬ್ಬರು ಪುತ್ರರಿಗೂ  ಒಂದು  ವಿಶೇಷ ನಿರ್ಬಂಧವನ್ನು ವಿಧಿಸಿದ್ದಾರೆ. ಈ ವಿಷಯವನ್ನು ನಟಿಯ ಅತ್ತೆ ಶರ್ಮಿಳಾ ಟ್ಯಾಗೋರ್ (Sharmila Tagore) ರಿವೀಲ್‌ ಮಾಡಿದ್ದಾರೆ. 

ಕರೀನಾ ಅವರ ಅತ್ತೆ ಶಶರ್ಮಿಳಾ ಟ್ಯಾಗೋರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸೊಸೆ ಕರೀನಾ ಕಪೂರ್ ಮತ್ತು ಅವರ ಮೊಮ್ಮಕ್ಕಳಾದ ತೈಮೂರ್ ಅಲಿ ಖಾನ್ ಮತ್ತು ಜೆಹ್ ಅಲಿ ಖಾನ್ ಬಗ್ಗೆ ಆಘಾತಕಾರಿ  ವಿಷಯವನ್ನು ಬಹಿರಂಗಪಡಿಸಿದ್ದಾರೆ.

ವಾಸ್ತವವಾಗಿ, ಶರ್ಮಿಳಾ ಸಂದರ್ಶನವೊಂದರಲ್ಲಿ ತನ್ನ ಇಬ್ಬರು ಮೊಮ್ಮಕ್ಕಳಿಗೆ ಚಿತ್ರ ವೀಕ್ಷಿಸಲು ಅವಕಾಶವಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಇದೀಗ ಕರೀನಾ ಪುತ್ರರು ಸಿನಿಮಾ ನೋಡದಂತೆ ಬ್ಯಾನ್ ಮಾಡಿದ್ದಾರೆ. ಹಾಗಾಗಿಯೇ ಕರೀನಾ ಕಪೂರ್ ಪುತ್ರರಿಗೆ ಚಿತ್ರ ವೀಕ್ಷಿಸಲು ಬಿಡುತ್ತಿಲ್ಲ ಎಂದಿದ್ದಾರೆ

Tap to resize

ಶರ್ಮಿಳಾ ಟ್ಯಾಗೋರ್ ಸುಮಾರು 11 ವರ್ಷಗಳ ನಂತರ ಬೆಳ್ಳಿತೆರೆಗೆ ಬರಲಿದ್ದಾರೆ. ಅವರು ಗುಲ್ಮೊಹರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಮೋಲ್ ಪಾಲೇಕರ್, ಮನೋಜ್ ಬಾಜ್ಪೇಯಿ, ಸಿಮ್ರಾನ್ ಬಗ್ಗಾ ಕೂಡ ಚಿತ್ರದಲ್ಲಿದ್ದಾರೆ. 

ಈ ಸಮಯದಲ್ಲಿ, ಅವರು ETimes ನೊಂದಿಗೆ ಮಾತನಾಡಿದರು ಮತ್ತು ಮೊಮ್ಮಕ್ಕಳ ಬಗ್ಗೆ ಬಹಳಷ್ಟು ಹೇಳಿದರು. ತಮ್ಮ ಕಮ್‌ ಬ್ಯಾಕ್‌ಗೆ, ಅವರ ಮಗಳು ಸೋಹಾ ಅಲಿ ಖಾನ್ ಅವರಿಗೆ ಅಭಿನಂದನೆಯ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಅವರು ಹೇಳಿದರು. 

ಸಂದರ್ಶನದಲ್ಲಿ, ಅವರು ತಮ್ಮ ಮೊಮ್ಮಕ್ಕಳಿಬ್ಬರೂ ಅಂದರೆ ತೈಮೂರ್ ಮತ್ತು ಜೆಹ್ ಈಗ ಚಲನಚಿತ್ರಗಳನ್ನು ವೀಕ್ಷಿಸಲು ಅನುಮತಿಸುವುದಿಲ್ಲ ಎಂದು ಹೇಳಿದರು. ಆದರೆ, ಆಕೆಯನ್ನು ತೆರೆಯ ಮೇಲೆ ನೋಡಿದಾಗ ಅದೊಂದು ವಿಭಿನ್ನ ಅನುಭವವಾಗಲಿದೆ ಎಂದೂ ಅವರು ಉತ್ಸಾಹದಿಂದ ಹೇಳಿದ್ದಾರೆ. 

ಇದೇ ವೇಳೆ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಅಲಿ ಖಾನ್ ಬಗ್ಗೆ ಮಾತನಾಡುತ್ತಾ ಇಬ್ಬರೂ ಈಗ ಬೆಳೆದು ದೊಡ್ಡವರಾಗಿದ್ದು, ಸಿನಿಮಾ ನೋಡಿದಾಗ ಇಷ್ಟವಾಗುತ್ತದೆ ಎಂದಿದ್ದಾರೆ. ಅದೇ ಸಮಯದಲ್ಲಿ, ಶರ್ಮಿಳಾ ತನ್ನ ಪುನರಾಗಮನ ಸಂಪೂರ್ಣವಾಗಿ ಖುಷಿಯಾಗಿದೆ. ಯಾವುದೇ ಒತ್ತಡವಿಲ್ಲದೆ ಶೂಟ್ ಮಾಡಿದ್ದು ಆಕೆಗೆ ರಜೆ ಇದ್ದಂತೆ ಭಾಸವಾಗುತ್ತಿದೆ ಎಂದು ಹೇಳಿದರು

ಕರೀನಾ ಕಪೂರ್ ಇಬ್ಬರು ಗಂಡು ಮಕ್ಕಳ ತಾಯಿಯಾದಾಗಿನಿಂದ ಅವರು ಚಲನಚಿತ್ರಗಳನ್ನು ಮಾಡುವುದನ್ನು ನಿಲ್ಲಿಸಿದ್ದಾರೆ. ಈಗ ವರ್ಷಕ್ಕೆ 1-2 ಚಿತ್ರಗಳನ್ನಷ್ಟೇ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಅವರು ವಾಣಿಜ್ಯ ಜಾಹೀರಾತುಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. 
 

ಕರೀನಾ ಈಗ OTT ನಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರು ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್ ಚಿತ್ರೀಕರಣವನ್ನು ಸಹ ಪ್ರಾರಂಭಿಸಿದ್ದಾರೆ. ನಿರ್ದೇಶಕ ಸುಜೋಯ್ ಘೋಷ್ ಅವರ ಚಿತ್ರದ ಚಿತ್ರೀಕರಣ ಕಾಲಿಂಪಾಂಗ್‌ನಲ್ಲಿ ನಡೆಯುತ್ತಿದೆ. 

ಶೂಟಿಂಗ್ ಸೆಟ್‌ಗೆ ಸಂಬಂಧಿಸಿದ ಅವರ ಕೆಲವು ಫೋಟೋಗಳು ಸಹ ಹೊರಬಂದಿವೆ. ಒಂದು ಫೋಟೋದಲ್ಲಿ, ಕರೀನಾ ಚಿತ್ರೀಕರಣಕ್ಕೆ ತಯಾರಾಗುತ್ತಿರುವುದನ್ನು ಮತ್ತು ಅವರ ಮಗ ಜೆಹ್ ಮುಂದೆ ಕುರ್ಚಿಯ ಮೇಲೆ ಕುಳಿತು ತಿನ್ನುತ್ತಿರುವುದನ್ನು ಕಾಣಬಹುದು. ಮೇಕಪ್ ಮಾಡುವಾಗಲೂ ಕರೀನಾ ಅವರ  ಸಂಪೂರ್ಣ ಗಮನ ಮಗನ ಮೇಲೆ ಇದೆ.

ಅದೇ ಸಮಯದಲ್ಲಿ, ಅವರ ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾ ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ತ್ರೀ ಇಡಿಯಟ್ಸ್‌ ನಂತರ ಮತ್ತೇ ಈಗ ಆಮೀರ್ ಖಾನ್‌ ಜೊತೆ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!