NCBಯಿಂದ ಮಗನ ಕಾಪಾಡಲು ವಾಟ್ಸಾಪ್ ಬ್ಲಾಕ್ ಮಾಡ್ಸಿದ್ರಾ ಶಾರೂಖ್ ?

Published : Oct 08, 2021, 09:18 AM ISTUpdated : Oct 08, 2021, 01:47 PM IST

ಶಾರೂಖ್ ಮಗ ಆರ್ಯನ್ ಖಾನ್ ವಾಟ್ಸಾಪ್ ಚೆಕ್ ಮಾಡಲಿತ್ತು ಎನ್‌ಸಿಬಿ ಮಗನ ಕಾಪಾಡಲು ವಾಟ್ಸಾಪ್ ಬ್ಲಾಕ್ ಮಾಡ್ಸಿದ್ರಾ ಶಾರೂಖ್ ಖಾನ್ ಇದು ಶಾರೂಖ್ ಪವರ್ ಎಂದು ಟ್ರೋಲ್ ಮಾಡ್ತಿದ್ದಾರೆ ನೆಟ್ಟಿಗರು

PREV
17
NCBಯಿಂದ ಮಗನ ಕಾಪಾಡಲು ವಾಟ್ಸಾಪ್ ಬ್ಲಾಕ್ ಮಾಡ್ಸಿದ್ರಾ ಶಾರೂಖ್ ?

ಮುಂಬೈ ಕರಾವಳಿ ತೀರದಲ್ಲಿ ಐಷರಾಮಿ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ ನಡೆಸಿ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ 10ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು ಎಲ್ಲರಿಗೂ ಗೊತ್ತು. ಈಗ ಈ ಕೇಸ್ ಕುರಿತಂತೆ ನೆಟ್ಟಿಗರು ಶಾರೂಖ್ ಪವರ್ ಕುರಿತು ಮಾತನಾಡುತ್ತಿದ್ದಾರೆ.

27

ಆರ್ಯನ್ ಖಾನ್‌ನನ್ನು ಮತ್ತೆ 14 ದಿನ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು ಸದ್ಯ ಜಾಮೀನಿನಲ್ಲಿ ಹೊರಬರುವ ಸಾಧ್ಯರತೆ ಇಲ್ಲ. ಇದರ ಮಧ್ಯೆ ಆರ್ಯನ್ ವಕೀಲರು ಮಧ್ಯಂತರ ಜಾಮೀನಿಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ.

37

ಕೆಲವು ದಿನಗಳ ಹಿಂದೆ ಆರ್ಯನ್‌ ಖಾನ್‌ನನ್ನು ಬಂಧಿಸಿದ ಎನ್‌ಸಿಬಿ ನಟನ ಪುತ್ರನ ವಿಚಾರಣೆ ನಡೆಸಿದ್ದು ಈ ವೇಳೆ ವಾಟ್ಸಾಪ್ ಪರಿಶೀಲನೆಯೂ ನಡೆದಿದೆ. ಅ.6ರಂದು ರಾತ್ರಿ ವಾಟ್ಸಾಪ್ ಸೇರಿ ಸೋಷಿಯಲ್ ಮೀಡಿಯಾ ಎಪ್ಲಿಕೇಷನ್‌ನಲ್ಲಿ ತೊಂದರೆ ಉಂಟಾಗಿತ್ತು.

47

ಇಂಟರ್‌ನೆಟ್ ಇದ್ದರೂ ಬಹಳಷ್ಟು ಬಳಕೆದಾರರಿರುವ ವಾಟ್ಸಾಪ್ ಸಂಪೂರ್ಣ ಕಾರ್ಯ ನಿರ್ವಹಣೆ ನಿಲ್ಲಿಸಿತ್ತು. ಮೆಸೇಜ್ ಕಳುಹಿಸುವುದೋ ಕಾಲ್ ಮಾಡುವುದೋ ಯಾವುದೂ ಸಾಧ್ಯವಾಗುತ್ತಿರಲಿಲ್ಲ. ಈ ನೆಟ್ಟಿಗರು ಇದನ್ನು ಡ್ರಗ್ಸ್ ಕೇಸ್‌ಗೆ ಲಿಂಕ್ ಮಾಡಿದ್ದಾರೆ.

57

ಬುಧವಾರ ಎನ್‌ಸಿಬಿ ಆರ್ಯನ್ ಖಾನ್ ವಾಟ್ಸಾಪ್ ಚೆಕ್ ಮಾಡುವುದರಲ್ಲಿತ್ತು. ಮೊಬೈಲ್ ಡಾಟಾ ಡ್ರಿಲ್ ಮಾಡಿರುತ್ತಿದ್ದರೆ ಡ್ರಗ್ಸ್ ಕೇಸ್ ಕುರಿತು ಬಹಳಷ್ಟು ಸಾಕ್ಷಿ ಮಾಹಿತಿಗಳು ಲಭ್ಯವಾಗುತ್ತಿತ್ತು.

67

ಇದನ್ನು ತಡೆದು ಮಗನನ್ನು ಕಾಪಾಡಲು, ಮಗನ ವಾಟ್ಸಾಪ್ ಎನ್‌ಸಿಬಿ ಚೆಕ್ ಮಾಡದೆ ಇರಲು ಶಾರೂಖ್ ಖಾನ್ ವಾಟ್ಸಾಪ್ ಸಮಸ್ಯೆಯಾಗುವಂತೆ ಮಾಡಿದ್ದಾರೆ. ಇದು ಶಾರೂಖ್ ಪವರ್ ಎಂದಿದ್ದಾರೆ ನೆಟ್ಟಿಗರು.

77

ಇದೇನೇ ಇದ್ದರೂ ನೆಟ್ಟಿಗರು ವಾಟ್ಸಾಪ್ ಬ್ಲಾಕ್ ಹಾಗೂ ಡ್ರಗ್ಸ್ ಕೇಸ್ ಲಿಂಕ್ ಮಾಡಿದ ಒಂದು ದೃಷ್ಟಿಕೋನವಷ್ಟೇ. ಅಸಲಿಗೆ ವಾಟ್ಸಾಪ್‌ನಲ್ಲಿ ಕೆಲವು ತಾಂತ್ರಿಕ ಅಡಚಣೆಗಳಾಗಿದ್ದವು.

click me!

Recommended Stories