CCTV ಚೆಕ್ ಮಾಡಿ: NCB ಬೇಕೆಂದೇ ಡ್ರಗ್ಸ್ ತಂದಿಟ್ಟರು ಎಂದ ಆರ್ಯನ್ ಗೆಳೆಯ

First Published | Oct 7, 2021, 5:52 PM IST
  • ಮುಂಬೈ ಡ್ರಗ್ಸ್ ಕೇಸ್‌ಗೆ ಮತ್ತೊಂದು ಟ್ವಿಸ್ಟ್
  • ಅರ್ಬಾಝ್ ಮರ್ಚೆಂಟ್ ಕಡೆಯಿಂದ ಎನ್‌ಸಿಬಿ ಮೇಲೆ ಆರೋಪ
  • ಸಿಸಿಟಿವಿ ಚೆಕ್ ಮಾಡಿ, ನಮ್ಮಲ್ಲಿ ಡ್ರಗ್ಸ್ ಇರಲಿಲ್ಲ

ಆರ್ಯನ್ ಖಾನ್ ಗೆಳೆಯ ಅರ್ಭಾಝ್ ಖಾನ್ ಮರ್ಚೆಂಟ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆರ್ಯನ್ ಖಾನ್, ಅರ್ಬಾಝ್ ಖಾನ್ ಹಾಗೂ ಮುನ್‌ಮುನ್ ಧಮೇಚಾನ್ನು ಅ.7ರ ತನಕ ಎನ್‌ಸಿಬಿ ಕಸ್ಟಡಿಗೆ ತೆಗೆದುಕೊಂಡಿತ್ತು.

ಮುಂಬೈ ಕರಾವಳಿ ತೀರದಲ್ಲಿ ಮುಂಬೈ ಟು ಗೋವಾ ಐಷರಾಮಿ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಎನ್‌ಸಿಬಿ ದಾಳಿ ನಡೆಸಿ ಈ ಮೂವರು ಸೇರಿದಂತೆ 10ಕ್ಕೂ ಹೆಚ್ಚು ಜನರನ್ನು ಬಂಧಿಸಿತ್ತು.

Latest Videos


ಅರ್ಬಾಜ್ ಅವರು ಅಕ್ಟೋಬರ್ 2 ರಂದು ಬೆಳಗ್ಗೆ 11:30 ರಿಂದ ರಾತ್ರಿ 8:30 ರವರೆಗೆ ಅಂತರಾಷ್ಟ್ರೀಯ ಟರ್ಮಿನಲ್, ಗ್ರೀನ್ ಗೇಟ್, ಮುಂಬೈ ಪೋರ್ಟ್ ಟ್ರಸ್ಟ್ ನಲ್ಲಿ ಸಿಸಿಟಿವಿ ಫೂಟೇಜ್ ಮತ್ತು ಸಿಐಎಸ್ಎಫ್ ಫೂಟೇಜ್ ಪ್ರತಿಯನ್ನು ಸಂರಕ್ಷಿಸಲು ಕೇಳಿಕೊಂಡಿದ್ದಾರೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್‌ಎಮ್ ನೆರ್ಲಿಕರ್ ಅವರು ಸಿಸಿಟಿವಿ ದೃಶ್ಯಾವಳಿ ಮನವಿಗೆ ಸಂಬಂಧಿಸಿದಂತೆ ಎನ್‌ಸಿಬಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅರ್ಬಾಜ್ ತನ್ನ ಮನವಿಯಲ್ಲಿ, ತನ್ನ ಬಳಿಯಿಂದ ಯಾವುದೇ ವಸ್ತುವನ್ನು ಹಿಂಪಡೆದಿಲ್ಲ, ಯಾವುದನ್ನೂ ಅಡಗಿಸರಲಿಲ್ಲ ಎಂದು ಫುಟೇಜ್ ತೋರಿಸುತ್ತದೆ. ಅದನ್ನು ಎನ್‌ಸಿಬಿ ಬೇಕೆಂದೇ ನಮ್ಮಲ್ಲಿ ಇಟ್ಟಿದೆ ಎಂದು ಹೇಳಿದ್ದಾನೆ.

ಕೊಕೇನ್ ಸೇರಿ ಹಲವು ಡ್ರಗ್ಸ್ ಬಳಸಿದ್ದ ಶಾರೂಖ್ ಪುತ್ರ ಆರ್ಯನ್

ಅರ್ಬಾಜ್ ತನ್ನ ಮನವಿಯಲ್ಲಿ ಸುಳ್ಳು ಕೇಸ್ ದಾಖಲಿಸಲಾಗಿದೆ ಎಂದು ಹೇಳಿದ್ದಾನೆ. ಈ ಕುರಿತು ಸಂಪರ್ಕಿಸಿದಾಗ, ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ, ನಾವು ನ್ಯಾಯಾಲಯಕ್ಕೆ ನಮ್ಮ ಉತ್ತರವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

click me!