ಕಪ್ಪು ಸೀರೆಯಲ್ಲಿ ಅಪ್ಸರೆಯಂತೆ ಮಿಂಚಿದ ಸಾರಾ : ಶುಭ್ಮನ್ ಗಿಲ್ ಕಾಲೆಳೆದ ನೆಟ್ಟಿಗರು

Published : Dec 28, 2023, 01:06 PM IST

ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ರ ಕಪ್ಪು ಸೀರೆಯುಟ್ಟ ಫೋಟೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕ್ರಿಕೆಟಿಗ ಶುಬ್ ಮನ್ ಗಿಲ್ ಕಾಲೆಳೆಯುತ್ತಿದ್ದಾರೆ.   

PREV
17
ಕಪ್ಪು ಸೀರೆಯಲ್ಲಿ ಅಪ್ಸರೆಯಂತೆ ಮಿಂಚಿದ ಸಾರಾ : ಶುಭ್ಮನ್ ಗಿಲ್ ಕಾಲೆಳೆದ ನೆಟ್ಟಿಗರು

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಸಿನಿಮಾ ಜಗತ್ತಿನಲ್ಲಿ ಇಲ್ಲದೇ ಇದ್ದರೂ ತಮ್ಮ ಸೌಂದರ್ಯ, ಪರ್ಸನಲ್ ಜೀವನದಿಂದ, ಲವ್ ರೂಮರ್ಸ್ ಗಳಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. 
 

27

ಯುವ ಕ್ರಿಕೆಟಿಗ ಶುಭ್ಮನ್ ಗಿಲ್ ಜೊತೆಗೆ ಸಾರಾ ಹೆಸರು ಸದಾ ತಳುಕು ಹಾಕಿಕೊಳ್ಳುತ್ತಿರುತ್ತೆ, ಸಾರಾ ಹಲವಾರು ಬಾರಿ ಗಿಲ್ ಆಟಕ್ಕೆ ಬೆಂಬಲ ನೀಡುತ್ತಾ, ಟ್ವೀಟ್ ಸಹ ಮಾಡಿದ್ದರು. ಅವರಿಬ್ಬರ ಮದುವೆ ಸುದ್ದಿ ಸಹ ಪದೇ ಪದೇ ಹರಿದಾಡುತ್ತಿರುತ್ತದೆ. 
 

37

ಇದೀಗ ಮತ್ತೆ ಸಾರಾ ತೆಂಡೂಲ್ಕರ್ ಸುದ್ದಿಯಾಗಿದ್ದಾರೆ. ಸಾರಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಕಪ್ಪು ಸೀರೆಯುಟ್ಟ ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದು, ಥೇಟ್ ಅಪ್ಸರೆಯಂತೆ ಕಾಣುತ್ತಿದ್ದಾರೆ. ಸಾರಾ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. 
 

47

ಸಾರಾ ಸೌಂದರ್ಯವನ್ನು ಹೊಗಳುವುದರ ಜೊತೆಗೆ ಅಭಿಮಾನಿಗಳು ಕ್ರಿಕೆಟಿಗ ಶುಭ್ಮನ್ ಗಿಲ್ (Shubman Gill) ಕಾಲೆಳೆಯುವುದೇ ಜಾಸ್ತಿಯಾದಂತೆ ಕಾಣಿಸುತ್ತಿದೆ.  ಫೋಟೊ ನೋಡಿ ಶುಭ್ಮನ್ ಗಿಲ್ ತಲೆತಿರುಗಿ ಬೀಳೋದು ಗ್ಯಾರಂಟಿ ಎಂದು ಕೆಲವರು ಹೇಳಿದ್ದಾರೆ. 
 

57

ಇನ್ನೂ ಕೆಲವರು ಶುಭ್ಮನ್ ಗಿಲ್ ತುಂಬಾನೆ ಲಕ್ಕಿ ಎಂದಿದ್ದಾರೆ. ಮತ್ತೆ ಕೆಲವರು ಶುಭ್ಮನ್ ಗಿಲ್ ಕ್ರಿಕೆಟ್ ಕಡೆಗೆ ಹೆಚ್ಚು ಫೋಕಸ್ ಮಾಡದೇ ಇರೋದಕ್ಕೆ ಇದೇ ಕಾರಣ ಎಂದು ಸಹ ಕಾಲೆಳೆದಿದ್ದಾರೆ. 
 

67

ಮತ್ತೆ ಕೆಲವರು ಹೊಸ ನ್ಯಾಷನಲ್ ಕ್ರಶ್ (National Crush) ಇವರೆ ಎಂದು ಹೇಳಿದ್ದಾರೆ. ನೀವು ನೋಡೋದಕ್ಕೆ ಸ್ವಲ್ಪ ಮಾಧುರಿ ದೀಕ್ಷಿತ್ ತರ ಕಾಣುತ್ತಿದ್ದೀರಿ. ಸೌಂದರ್ಯ ದೇವತೆ, ಗಾರ್ಜಿಯಸ್ ಎಂದೆಲ್ಲಾ ಕಾಮೆಂಟ್ ಸುರಿಮಳೆ ಹರಿಸಿದ್ದಾರೆ ನೆಟ್ಟಿಗರು. 
 

77

ವೃತ್ತಿಯಲ್ಲಿ ತಾಯಿಯಂತೆ ವೈದ್ಯೆಯಾಗಿರುವ ಸಾರಾ ತೆಂಡೂಲ್ಕರ್ ತಮ್ಮ ಇನ್ ಸ್ಟಾಗ್ರಾಂನಲ್ಲಿ (Instagram) 5 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ತಮ್ಮ ಫ್ಯಾಷನ್, ಸ್ಟೈಲ್ ನಿಂದ ಮನೆಮಾತಾಗಿರುವ ಸಾರಾ, ಈ ವರ್ಷ ತಮ್ಮ ಲವ್ ಲೈಫ್ ರೂಮರ್ಸ್ ನಿಂದಾಗಿಯೇ ಹೆಚ್ಚು ಸುದ್ದಿಯಲ್ಲಿದ್ದರು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories