ಸಾರಾ ಆಲಿ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಬೆಂಬಿಡದೇ ಫಾಲೋ ಮಾಡೋದು ಯಾರನ್ನ?
ಬಾಲಿವುಡ್‌ನ ಫೇಮಸ್ ಯುವ ನಟಿಯರಲ್ಲಿ ಸಾರಾ ಆಲಿ ಖಾನ್ ಒಬ್ಬರು. ಕೇದರನಾಥ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸೈಫ್ ಆಲಿ ಖಾನ್ ಹಾಗೂ ಅಮೃತಾ ಸಿಂಗ್ ಪುತ್ರಿ ತಮ್ಮ ಟ್ಯಾಲೆಂಟ್ ಮೂಲಕ ನಿಧಾನವಾಗಿ ಜನಪ್ರಿಯಗೊಳ್ಳುತ್ತಿದ್ದಾರೆ. ಸಿನಿಮಾ ಪ್ರಮೋಷನ್ ವೇಳೆಯಲ್ಲಿ ನಟಿ ಸಿಂಬಾ ಕೋಸ್ಟಾರ್ ರಣವೀರ್ ಸಿಂಗ್ ಪತ್ನಿ ದೀಪಿಕಾ ಪಡುಕೋಣೆ ಅವರನ್ನು ರೆಗ್ಯುಲರ್ ಆಗಿ ಸ್ಟಾಕ್ ಮಾಡುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ.