ಬಾಲಿವುಡ್ ನಟಿ ಸಾರಾ ಅಲಿ ಖಾನ್ ಆಗಾಗ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದು ರಿಲ್ಯಾಕ್ಸ್ ಮೂಡ್‌ಗೆ ಹೋಗುತ್ತಾರೆ. ದೇಶ-ವಿದೇಶ ಅಂತ ಸಾರಾ ಸುತ್ತಾಡುತ್ತಿರುತ್ತಾರೆ.
ಸದ್ಯ ಸಾರಾ ಅಲಿ ಖಾನ್ ಕೇದಾರನಾಥ್‍ಗೆ ಭೇಟಿ ನೀಡಿದ್ದಾರೆ. ಕೇದಾರನಾಥ್‍ಗೆ ತೆರಳುತ್ತಿದ್ದಂತೆ ಸಾರಾ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಅಂದಹಾಗೆ ಕೇದಾರನಾಥ್ ಸಾರಾ ಅಲಿ ಖಾನ್ ಅವರಿಗೆ ತುಂಬಾ ವಿಶೇಷ. ಇದೆ ಹೆಸರಿನ ಸಿನಿಮಾ ಮೂಲಕ ಸಾರಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಹಾಗಾಗಿ ಸಾರಾ ಆಗಾಗ ಕೇದಾರನಾಥ್‍ಗೆ ಭೇಟಿ ನೀಡುತ್ತಿರುತ್ತಾರೆ. ಮೊದಲ ಸಿನಿಮಾವನ್ನು ನೆನಪಿಸಿಕೊಳ್ಳುತ್ತಾರೆ.
2018 ರಲ್ಲಿ ಬಿಡುಗಡೆಯಾದ ಕೇದಾರನಾಥ ಸಿನಿಮಾ 2013 ರ ಉತ್ತರಾಖಂಡ ಪ್ರವಾಹದ ಹಿನ್ನೆಲೆಯಲ್ಲಿ ಬಂದ ಒಂದು ರೋಮ್ಯಾಂಟಿಕ್ ಸಿನಿಮಾವಾಗಿತ್ತು. ವಿಶೇಷ ಎಂದರೆ ಆ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ನಾಯಕನಾಗಿ ನಟಿಸಿದ್ದರು.
ಸಾರಾ ಅಲಿ ಖಾನ್ ಮತ್ತದೆ ಸ್ಥಳಕ್ಕೆ ಭೇಟಿ ನೀಡಿದ್ದು ಮೊದಲ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಫೋಟೋ ಶೇರ್ ಮಾಡಿ ಭಾವುಕ ಸಾಲು ಬರೆದುಕೊಂಡಿದ್ದಾರೆ. 'ನಾನು ಮೊದಲ ಬಾರಿಗೆ ಈ ಸ್ಥಳಕ್ಕೆ ಬಂದಾಗ ನಾನು ಕ್ಯಾಮರಾ ಎದುರಿಸಿರಲಿಲ್ಲ. ಇಂದು ನನ್ನ ಜೀವನವನ್ನು ನಾನು ಊಹಿಸಲು ಸಾಧ್ಯವಿಲ್ಲ. ನಾನು ಯಾರು ಎಂದು ಮಾಡಿದ ಹಾಗೂ ಎಲ್ಲವನ್ನೂ ನೀಡಿದ ಕೇದಾರಾನಾಥ್‌ಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.
'ಕೆಲವೇ ಜನರು ನಿಮ್ಮ ಬಳಿಗೆ ಬರುವ ಅದೃಷ್ಟವನ್ನು ಹೊಂದಿದ್ದಾರೆ ಮತ್ತು ನಾನು ನಿಮಗೆ ಧನ್ಯವಾದ ಹೇಳಲು ಹಿಂತಿರುಗಬಹುದು ಎಂಬ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ನಾನು ತುಂಬಿದ್ದೇನೆ. ಜೈ ಭೋಲೆನಾಥ್' ಎಂದು ಬರೆದುಕೊಂಡಿದ್ದಾರೆ.
ಸಾರಾ ಅಲಿ ಖಾನ್ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಅನೇಕರು ಸುಶಾಂತ್ ಸಿಂಗ್ ಅವರನ್ನು ನೆನಪಿಸಿಕೊಂಡರು. ಸುಶಾಂತ್ ಸಿಂಗ್ ನೆನಪು ಮರುಕಳಿಸಿತು ಎಂದು ಹೇಳುತ್ತಿದ್ದಾರೆ. 'ನಿಜವಾಗಿಯೂ ಮಿಸ್ ಸುಶಾಂತ್ ಸಿಂಗ್' ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ.
ಸಾರಾ ಅಲಿ ಖಾನ್ ದಿವಂಗತ ನಟ ಸುಶಾಂತ್ ಸಿಂಗ್ ಹುಟ್ಟುಹಬ್ಬವನ್ನು ಬಾಲ್ ಆಶಾ ಟ್ರಸ್ಟ್‌ನ ಎನ್‌ಜಿಒ ಮಕ್ಕಳೊಂದಿಗೆ ಆಚರಿಸಿದ್ದರು. ವಿಡಿಯೋ ಶೇರ್ ಮಾಡಿ ಹ್ಯಾಪಿ ಬರ್ತಡೇ ಸುಶಾಂತ್ ಎಂದು ಹೇಳಿದ್ದರು.
ಸಿನಿಮಾ ವಿಚಾರಕ್ಕೆ ಬರುವುದಾರೆ ಸಾರಾ ಬಳಿ ಅನೇಕ ಸಿನಿಮಾಗಳಿವೆ. ಕೊನೆಯದಾಗಿ ಗ್ಯಾಸ್‌ಲೈಟ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಜರಾ ಹತ್ಕೆ ಜರಾ ಬಚ್ ಕೆ, ಏ ವತನ್ ಮೇರೆ ವತನ್, ಮರ್ಡರ್ ಮುಬಾರಕ್ ಸಿನಿಮಾಗಳನ್ನು ಮುಗಿಸಿರುವ ಸಾರಾ ಸದ್ಯ ರಿಲೀಸ್‌ಗೆ ಕಾಯುತ್ತಿದ್ದಾರೆ.