ಅತಿ ಹೆಚ್ಚು ಸಂಭಾವನೆ ಪಡೆಯುವ 7 ಬಾಲಿವುಡ್ ನಟಿಯರು ಇವರು!

Published : May 10, 2023, 07:06 PM IST

ಈಗ ಸಿನಿಮಾದ ನಾಯಕಿಯರು ಸಹ ಉತ್ತಮ ಸಂಭಾವನೆ ಪಡೆಯುವುದು ಎಲ್ಲರಿಗೂ ತಿಳಿದೇ ಇದೆ.  ಅದೇ ರೀತಿ ಪ್ರತಿ ಸಿನಿಮಾಕ್ಕೆ ಪಡೆಯುವ ಫೀಸ್‌ ವಿಷಯದಲ್ಲಿ ಬಾಲಿವುಡ್‌ ನಟಿಯರು ಮುಂದಿದ್ದಾರೆ.  ಕೆಲವು ನಟಿಯರು ಚಿತ್ರದ ನಾಯಕನಿಗೆ ಸಮಾನಾಗಿ ಅಥವಾ ಹೆಚ್ಚೇ ಚಾರ್ಜ್‌ ಮಾಡುತ್ತಾರೆ  ದೀಪಿಕಾ ಪಡುಕೋಣೆಯಿಂದ ಹಿಡಿದು ವಿದ್ಯಾಬಾಲನ್‌ವರೆಗೆ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು  ಎಷ್ಟು ಶುಲ್ಕ ವಿಧಿಸುತ್ತಾರೆ  ಗೊತ್ತಾ?

PREV
17
ಅತಿ ಹೆಚ್ಚು ಸಂಭಾವನೆ ಪಡೆಯುವ  7 ಬಾಲಿವುಡ್ ನಟಿಯರು ಇವರು!

ದೀಪಿಕಾ ಪಡುಕೋಣೆ ಪದ್ಮಾವತ್ ಆಗಿರಲಿ ಅಥವಾ ಪಿಕು ಆಗಿರಲಿ ಅವರು ತಮ್ಮ ಪ್ರೇಕ್ಷಕರ ಮೇಲೆ ಉತ್ತಮ ಪ್ರಭಾವ ಬೀರಿದ್ದಾರೆ. ದೀಪಿಕಾ ಪಡುಕೋಣೆ ಪ್ರಸ್ತುತ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ. ಆಕೆ ಪ್ರತಿ ಚಿತ್ರಕ್ಕೆ 15- 30 ಕೋಟಿ ಚಾರ್ಜ್ ಮಾಡುತ್ತಾರೆ.

27

ಪ್ರಿಯಾಂಕಾ ಚೋಪ್ರಾ ಬರ್ಫಿ ನಟಿ ಮತ್ತು UNICEF ಗ್ಲೋಬಲ್ ಅಂಬಾಸಿಡರ್ ಈಗ ಅಂತರರಾಷ್ಟ್ರೀಯ ತಾರೆ. ದೇಸಿ ಹುಡುಗಿ ಪ್ರಿಯಾಂಕಾ ಚೋಪ್ರಾ ಪ್ರತಿ ಚಿತ್ರಕ್ಕೆ 14 ರಿಂದ 23 ಕೋಟಿ ಚಾರ್ಜ್ ಮಾಡುತ್ತಾರೆ.

37

4 ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕಂಗನಾ ರಣಾವತ್ ತಮ್ಮ ಅನ್‌ಫಿಲ್ಟರ್  ಅಭಿಪ್ರಾಯಕ್ಕೆ ಹೆಸರುವಾಸಿಯಾಗಿದ್ದಾರೆ. 15 ರಿಂದ 27 ಕೋಟಿ ಕಂಗನಾ ಅವರ ಶುಲ್ಕ.

47

ಕತ್ರಿನಾ ಕೈಫ್ ತಮ್ಮ ಡ್ಯಾನ್ಸ್‌ ನಂಬರ್‌ಗಳಿಗೆ  ಹೆಸರುವಾಸಿಯಾಗಿದ್ದಾರೆ ಮತ್ತು ಬಾಲಿವುಡ್‌ನ ಅತ್ಯುತ್ತಮ ಜನಪ್ರಿಯ ತಾರೆಗಳಲ್ಲಿ ಒಬ್ಬರು ಇವರು . ಒಂದು ಚಿತ್ರಕ್ಕೆ ಕತ್ರಿನಾರ ಶುಲ್ಕ 15 ರಿಂದ 21 ಕೋಟಿ ಎಂದು ವರದಿಗಳು ಹೇಳುತ್ತವೆ.

57

ಬೆಬೋ ಎಂದು ಜನಪ್ರಿಯವಾಗಿರುವ ಕರೀನಾ ಕಪೂರ್ ಖಾನ್ ಬಾಲಿವುಡ್‌ನಲ್ಲಿ ಉತ್ತಮ ವಂಶಾವಳಿಯನ್ನು ಹೊಂದಿರುವ ಕುಟುಂಬದಿಂದ ಬಂದವರು. 8 ರಿಂದ 10 18 ಕೋಟಿ ಒಂದು ಚಿತ್ರಕ್ಕೆ ಆಕೆಯ ಶುಲ್ಕ.

67

ಸಂಜಯ್ ಸಂಜಯ್ ಲೀಲಾ ಬನ್ಸಾಲಿ ಗಂಗೂಬಾಯಿ ಕಥಿವಾಡಿ ಚಿತ್ರದಲ್ಲಿ ಆಲಿಯಾ ಭಟ್ ಅವರ ಅಭಿನಯವು ಇತ್ತೀಚೆಗೆ ಹೆಚ್ಚು ಪ್ರಶಂಸೆಗೆ ಪಾತ್ರವಾಯಿತು. ಪ್ರತಿ ಚಿತ್ರಕ್ಕೆ 10 ರಿಂದ 20 ಕೋಟಿ ಆಲಿಯಾ ಸಂಭಾವನೆ

77

ಕಹಾನಿ ನಟಿ ವಿದ್ಯಾ ಬಾಲನ್ ಪದ್ಮಶ್ರೀ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದಾರೆ. ಪ್ರತಿ ಚಿತ್ರಕ್ಕೆ 8 ರಿಂದ 14 ಕೋಟಿ ರೂ ಫೀಸ್‌ ಪಡೆಯುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories