ಅಪ್ಪ ಮುಸ್ಲಿಂ ಆದ್ರೂ ಮೂರೂ ತಮ್ಮಂದಿರ ಹಣೆಗೆ ಸಿಂಧೂರ ಇಟ್ಟು ರಾಖಿ ಹಬ್ಬ ಆಚರಿಸಿದ ನಟಿ ಸಾರಾ

First Published | Aug 31, 2023, 12:46 PM IST

ಬಾಲಿವುಡ್ ನಟಿ ಸಾರಾ ಅಲಿಖಾನ್ ತಮ್ಮ ಮೂವರು ಸೋದರರು ಹಾಗೂ ಕುಟುಂಬದೊಂದಿಗೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕುಟುಂಬದೊಂದಿಗೆ ಸಾರಾ ಅಲಿ ಖಾನ್

ಬಾಲಿವುಡ್ ನಟಿ ಸಾರಾ ಅಲಿಖಾನ್ ತಮ್ಮ ಮೂವರು ಸೋದರರು ಹಾಗೂ ಕುಟುಂಬದೊಂದಿಗೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಪ್ಪ ಸೈಫ್ ಅಲಿ ಖಾನ್ ಮುಸ್ಲಿಂ ಆದರೂ ಸಾರಾ ಅಲಿಖಾನ್ ತನ್ನ ಮೂವರು ಸೋದರರಿಗೆ ಆರತಿ ಬೆಳಗಿ ತಿಲಕವಿಟ್ಟು ಅದ್ದೂರಿಯಾಗಿ ರಕ್ಷಾಬಂಧನ ಹಬ್ಬವನ್ನು ಆಚರಿಸಿದ್ದಾರೆ.

ಕುಟುಂಬದೊಂದಿಗೆ ಸಾರಾ ಅಲಿ ಖಾನ್

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ನಟಿ ಸಾರಾ ಅಲಿ ಖಾನ್ ಆಗಾಗ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಸೈಫ್ ಅಲಿ ಖಾನ್ ಹಾಗೂ ಬಾಲಿವುಡ್ ಹಿರಿಯ ನಟಿ ಅಮೃತಾ ಸಿಂಗ್ ಸೋದರಿಯಾಗಿರುವ ಸಾರಾ ಅಲಿ ಖಾನ್ ಹಿಂದೂ ಧರ್ಮವನ್ನು ಫಾಲೋ ಮಾಡುತ್ತಿದ್ದು, ದೇಗುಲಗಳಿಗೆ ಭೇಟಿ ನೀಡುವ ಮೂಲಕ ಅವರು ಆಗಾಗ ಸುದ್ದಿಯಾಗುತ್ತಿರುತ್ತಾರೆ. 

Tap to resize

ಕುಟುಂಬದೊಂದಿಗೆ ಸಾರಾ ಅಲಿ ಖಾನ್

ಇತ್ತೀಚೆಗೆ ತಂದೆ ಸೈಫ್ ಅಲಿ ಖಾನ್ ಹುಟ್ಟುಹಬ್ಬವನ್ನು ಆಚರಿಸಿದ ಫೋಟೋಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇನ್ನು ಸಾರಾ ಕುಟುಂಬದ ಬಗ್ಗೆ ಹೇಳುವುದಾದರೆ  ಹಿಂದೂ-ಮುಸ್ಲಿಂ ಧರ್ಮೀಯರಿಂದ ಮೇಳೈಸಿದ ಬಾಲಿವುಡ್ ಕುಟುಂಬವಿದು. ಇಲ್ಲಿ ಸಾರಾ ಅಲಿ ಖಾನ್​ ಅಜ್ಜ ಮತ್ತು ಅಪ್ಪ ಇಬ್ಬರೂ ಮುಸ್ಲಿಂ ಆದರೆ ಅಜ್ಜಿ ಮತ್ತು ತಾಯಿ ಹಿಂದೂ.

ಕುಟುಂಬದೊಂದಿಗೆ ಸಾರಾ ಅಲಿ ಖಾನ್

ಇತ್ತೀಚೆಗೆ ತಂದೆ ಸೈಫ್ ಅಲಿ ಖಾನ್ ಹುಟ್ಟುಹಬ್ಬವನ್ನು ಆಚರಿಸಿದ ಫೋಟೋಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇನ್ನು ಸಾರಾ ಕುಟುಂಬದ ಬಗ್ಗೆ ಹೇಳುವುದಾದರೆ  ಹಿಂದೂ-ಮುಸ್ಲಿಂ ಧರ್ಮೀಯರಿಂದ ಮೇಳೈಸಿದ ಬಾಲಿವುಡ್ ಕುಟುಂಬವಿದು. ಇಲ್ಲಿ ಸಾರಾ ಅಲಿ ಖಾನ್​ ಅಜ್ಜ ಮತ್ತು ಅಪ್ಪ ಇಬ್ಬರೂ ಮುಸ್ಲಿಂ ಆದರೆ ಅಜ್ಜಿ ಮತ್ತು ತಾಯಿ ಹಿಂದೂ.

ಕುಟುಂಬದೊಂದಿಗೆ ಸಾರಾ ಅಲಿ ಖಾನ್

ಇದೇ ಸೈಫ್​ ಅಲಿ ಖಾನ್​ ಮೊದಲು ಹಿಂದೂ ಧರ್ಮದ ಅಮೃತಾ ಸಿಂಗ್​ ಅವರನ್ನು ಮದುವೆಯಾಗಿದ್ದರು.  ಅಮೃತಾ ಸಿಂಗ್​ (Amruta Singh) ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ಕೇವಲ 21 ವರ್ಷ. ಆದರೆ ಅಮೃತಾ ಸಿಂಗ್‌ ಅವರಿಗೆ 32 ವರ್ಷ ವಯಸ್ಸಾಗಿತ್ತು!  ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು ಸೈಫ್. 

ಕುಟುಂಬದೊಂದಿಗೆ ಸಾರಾ ಅಲಿ ಖಾನ್

13 ವರ್ಷಗಳ  ದಾಂಪತ್ಯದ  ನಂತರ ವಿಚ್ಛೇದನ ಪಡೆದಿದ್ದರು ಈ ಜೋಡಿ. ಆ ಸಮಯದಲ್ಲಿ  ಸಾರಾ ಅಲಿ ಖಾನ್​ಗೆ 10 ಮತ್ತು ಇಬ್ರಾಹಿಂ ಅಲಿ ಖಾನ್​ಗೆ 4 ವರ್ಷ ವಯಸ್ಸಾಗಿತ್ತು. . ಇದಾದ ಬಳಿಕ ತಮಗಿಂತ 10 ವರ್ಷ ಚಿಕ್ಕವಳಾದ ಕರೀನಾ ಕಪೂರ್​ ಅವರನ್ನು ಮದುವೆಯಾಗಿದ್ದರು. ಇವರಿಗೆ ತೈಮೂರ್​ ಅಲಿ ಖಾನ್​ ಮತ್ತು ಜೆಹ್​ ಅಲಿ ಖಾನ್​ ಎನ್ನುವ ಇಬ್ಬರು ಮಕ್ಕಳಿದ್ದಾರೆ. 

ಕುಟುಂಬದೊಂದಿಗೆ ಸಾರಾ ಅಲಿ ಖಾನ್

ಯಾವುದೇ ಬೇಧವಿಲ್ಲದೇ ಮೂವರು ತಮ್ಮಂದಿರಿಗೆ ಸಾರಾ ಅಲಿ ಖಾನ್ ಆರತಿ ಬೆಳಗಿ ರಾಖಿ ಕಟ್ಟಿ ಶುಭ ಹಾರೈಸಿದ್ದು, ಕುಟುಂಬದೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ನಟಿ ಕರೀನಾ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಕುಟುಂಬದೊಂದಿಗೆ ಸಾರಾ ಅಲಿ ಖಾನ್

ಸೈಫ್ ಅಲಿ ಖಾನ್ ಸೋದರಿಯರಾದ ಸೋಹ ಅಲಿ ಖಾನ್,  ಸಬಾ ಅಲಿ ಖಾನ್, ಸೈಫ್ ಪತ್ನಿ ಸಾರಾ  ಚಿಕ್ಕಮ್ಮ ಕರೀನಾ ಕಪೂರ್ ಕೂಡ ಈ ರಕ್ಷಾ ಬಂಧನ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ. 

ಕುಟುಂಬದೊಂದಿಗೆ ಸಾರಾ ಅಲಿ ಖಾನ್

ಸೈಫ್ ಮಕ್ಕಳಾದ ಸಾರಾ , ಸಾರಾ ಸಹೋದರ ಇಬ್ರಾಹಿಂ ಅಲಿ ಖಾನ್ ಹಾಗೂ ಕರೀನಾ ಪುತ್ರರಾದ ತೈಮೂರ್ ಅಲಿಖಾನ್ ಪಟೌಡಿ ಹಾಗೂ ಜೆಹಾಂಗೀರ್ ಖಾನ್ ಪಟೌಡಿ  ಹಿರಿಯಕ್ಕ ಸಾರಾಳಿಂದ ಆರತಿ ಮಾಡಿಸಿಕೊಂಡು ರಾಕಿ ಕಟ್ಟಿಸಿಕೊಂಡಿದ್ದಾರೆ. 

ಕುಟುಂಬದೊಂದಿಗೆ ಸಾರಾ ಅಲಿ ಖಾನ್

ಜೊತೆಗೆ ಸೈಫ್ ಸಹೋದರಿ ಸೋಹ ಅಲಿಖಾನ್ ಪುತ್ರಿ ಕೂಡ ತನ್ನ ಸೋದರ ಸಂಬಂಧಿಗಳಿಗೆ ಆರತಿ ಬೆಳಗಿ ರಾಕಿ ಕಟ್ಟಿದ್ದಾಳೆ. ಸೋಹಾ ಪುತ್ರಿಯ ಕೈ ಹಿಡಿದು ಸಾರಾ ಸಹೋದರರಿಗೆ ಆರತಿ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಕುಟುಂಬದೊಂದಿಗೆ ಸಾರಾ ಅಲಿ ಖಾನ್

ಸಾರಾ ಸಿನಿಮಾಗಳ ಬಗ್ಗೆ ಹೇಳುವುದಾದರೆ ಕೇದರನಾಥ್ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಸಿನಿ ಜರ್ನಿ ಆರಂಭಿಸಿದ ಸಾರಾ ನಂತರ ಸಿಂಬಾ, ಲವ್ ಅಜ್‌ ಕಲ್, ಕೂಲಿ ನಂಬರ್ 2, ಅತ್ರಂಗಿ ರೇ,  ಗ್ಯಾಸ್‌ ಲೈಟ್ ಝರ ಹತ್ಕೆ ಝರ ಬತ್ಕೆ ಸಿನಿಮಾವೂ ಸೇರಿದಂತೆ 8 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಕೈಯಲ್ಲಿ ಇನ್ನು ಸಾಕಷ್ಟು ಸಿನಿಮಾಗಳಿವೆ. 

Latest Videos

click me!