ಜೈಲಲ್ಲಿದ್ದಾಗ ಮಕ್ಕಳಿಗೆ ಸುಳ್ಳು ಹೇಳುತ್ತಿದ್ದರಂತೆ ಸಂಜಯ್‌ ದತ್‌!

First Published Jul 30, 2021, 1:19 PM IST

ಸಂಜಯ್ ದತ್  ಜುಲೈ 29 ರಂದು ತಮ್ಮ 62 ನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಒಮ್ಮೆ ಸಂದರ್ಶನವೊಂದರಲ್ಲಿ, ಸಂಜಯ್ ದತ್‌ ಜೈಲಿನಲ್ಲಿದ್ದಾಗ ತಮ್ಮ ಮಕ್ಕಳಾದ ಶಹ್ರಾನ್ ಮತ್ತು ಇಕ್ರಾ ಅವರಿಗೆ  ಪರ್ವತಗಳಲ್ಲಿ ಶೂಟಿಂಗ್‌ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದರಂತೆ. ಇಲ್ಲಿದೆ ವಿವರ.

ಬಾಲಿವುಡ್ ನಟ ಸಂಜಯ್ ದತ್ ಅತ್ಯಂತ ವಿವಾದಾತ್ಮಕ ವ್ಯಕ್ತಿಗಳಲ್ಲಿ ಒಬ್ಬರು. ಅದೇ ಸಮಯದಲ್ಲಿ ಸಖತ್‌ ಫೇಮಸ್‌ ಸ್ಟಾರ್‌ ಕೂಡ ಹೌದು.

ಚಿತ್ರರಂಗದಲ್ಲಿ ಸುಮಾರು 4 ದಶಕಗಳ ವೃತ್ತಿಜೀವನವನ್ನು ಹೊಂದಿರುವ ಸಂಜಯ್‌ ಪರ್ಸನಲ್‌ ಲೈಫ್‌ ಯಾವಾಗಲೂ ಚರ್ಚೆಯ ವಿಷಯವಾಗಿದೆ.

2016 ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಜೀ ನ್ಯೂಸ್‌ಗೆ ನೀಡಿದ ಸಂದರ್ಶನದ ಈಗ ಮತ್ತೆ ವೈರಲ್‌ ಆಗಿದೆ.

ಅವರು ಜೈಲಿನಲ್ಲಿದ್ದ ಸಮಯ ಮತ್ತು ಮನೆಯಿಂದ ದೂರವಿದ್ದಾಗ ಮಕ್ಕಳಿಗೆ ಸುಳ್ಳು ಹೇಳಿದ ಬಗ್ಗೆ ಹಾಗೂ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು.

ನಾನು ಜೈಲಿಗೆ ಹೋದಾಗ ನನ್ನ ಮಕ್ಕಳಾದ ಶಹ್ರಾನ್ ಮತ್ತು ಇಕ್ರಾಗೆ ಕೇವಲ 2 ವರ್ಷ  ವಯಸ್ಸಾಗಿತ್ತು. ಆದ್ದರಿಂದ ಅವರಿಗೆ ಆ ಸಮಯ ಚೆನ್ನಾಗಿ ನೆನಪಿಲ್ಲ. ಅವರನ್ನು ಜೈಲಿಗೆ ಕರೆತರಲು ನನ್ನ ಹೆಂಡತಿಗೆ ಹೇಳಲಿಲ್ಲ. ಅವರು ನನ್ನನ್ನು ಜೈಲಿನ ಡ್ರೆಸ್‌ನಲ್ಲಿ ನೋಡುವುದು ಇಷ್ಟವಿರಲಿಲ್ಲ. ನಾನು ಎಲ್ಲಿದ್ದೇನೆ ಎಂದು ಅವರು ಕೇಳಿದರು. ನಾನು ಪರ್ವತಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದೇನೆ. ಯಾವುದೇ ನೆಟ್ವರ್ಕ್ ಇಲ್ಲ ಎಂದು ನನ್ನ ಹೆಂಡತಿ ಹೇಳುತ್ತಿದ್ದಳು ಎಂದು ಸಂಜಯ್‌ ದತ್‌ ಹೇಳಿದ್ದಾರೆ.

ಅದೃಷ್ಟವಶಾತ್, ನನಗೆ ತಿಂಗಳಲ್ಲಿ ಎರಡು ಬಾರಿ ಜೈಲಿನಿಂದ ಕರೆ ಮಾಡಲು ಅನುಮತಿ ನೀಡಲಾಯಿತು. ಅವರೊಂದಿಗೆ ಮಾತನಾಡುತ್ತಿದ್ದಾಗ, ಬೆಟ್ಟಗಳಿಂದ ಕೆಳಗೆ ಇಳಿದಿದ್ದೇನೆ ನೆಟ್ವರ್ಕ್ ಇರುವ ಸ್ಥಳದಲ್ಲಿದ್ದೇನೆ ಎಂದು ಅವರಿಗೆ ಹೇಳುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ ದತ್‌.

ನಾನು ನಿಧಾನವಾಗಿ ಅವರಿಗೆ ನಿಜ ವಿಷಯವನ್ನು ತಿಳಿಸುತ್ತೇನೆ. ತನ್ನ ಕುಟುಂಬದೊಂದಿಗೆ ಇರಲಿಲ್ಲ ಎಂದು ಪಶ್ಚಾತ್ತಾಪ ಪಡುತ್ತೇನೆ. ಮಗ ನನ್ನಂತೆ ಆಗಬಾರದು ಎಂದು ಹೇಳಿದ್ದಾರೆ ಸಂಜಯ್‌ ಬಾಬಾ.

ನನ್ನ ಕುಟುಂಬಕ್ಕೆ ನಾನು ಮಾಡಿರುವುದಕ್ಕೆ ಅಪರಾಧಿ ಭಾವ ಕಾಡುತ್ತದೆ. ಒಬ್ಬ ವ್ಯಕ್ತಿಯು ಹೃದಯದಿಂದ ಯೋಚಿಸಬಾರದು. ನನ್ನ ಹೃದಯದಿಂದ ಯೋಚಿಸಿ ನಾನು ಬಹಳಷ್ಟು ಅನುಭವಿಸಿದ್ದೇನೆ. ನನ್ನ ಮಗ ನನ್ನಂತೆ ಆಗಬಾರದು ಎಂದು ನಾನು ಬಯಸುತ್ತೇನೆ.

ಸಂಜಯ್ ದತ್ ಅವರ ಮುಂದಿನ ಬಿಗ್‌ ರಿಲಿಸ್‌ ಕೆಜಿಎಫ್ ಅಧ್ಯಾಯ 2ಗಾಗಿ ಫ್ಯಾನ್ಸ್‌ ಕಾತುರದಿಂದ ಕಾಯುತ್ತಿದ್ದಾರೆ.

click me!