ಇತ್ತೀಚೆಗಷ್ಟೇ ಹೊರಗೆ ಕಾಣಿಸಿಕೊಂಡಿದ್ದ ನಟ ಸಂಜಯ್ ದತ್‌ನ ಫೋಟೋ ತೆಗೆಯಲು ಮಾಧ್ಯಮದವರು ಮುಗಿಬಿದ್ದಿದ್ದರು.
ಫೊಟೋ ತೆಗೆಯೋ ಪತ್ರಕರ್ತರಿಗೆ ದೂರದಲ್ಲೇ ಪೋಸ್ ಕೊಡೋದು ಬಿಟ್ಟು ಸಂಜಯ್ ಹತ್ತಿರ ಬಂದಿದ್ದರು.
ಮಾಧ್ಯಮದವರ ತುಸು ಹತ್ತಿರವೇ ಬಂದು ಮಾಸ್ಕ್ ಹಾಕ್ಕೊಳ್ಳಿ ಎಂದು ಕ್ಲಾಸ್ ತಗೊಂಡಿದ್ದಾರೆ.
ಲಂಗ್ ಕ್ಯಾನ್ಸರ್‌ಗೆ ಡಯಾಗ್ನಿಸಿಸ್ ಮಾಡಿಕೊಂಡಿದ್ದ ನಟ ಇತ್ತೀಚೆಗೆ ಆಸ್ಪತ್ರೆಗೆ ಹೋಗುವುದಕ್ಕೇ ಮನೆಯಿಂದ ಹೊರ ಬರುತ್ತಿದ್ದರು.
ಸೋಮವಾರ ಸಂಜಯ್ ದತ್ ಪತ್ನಿ ಮಾನ್ಯತಾ ಜೊತೆ ಹೊರಗೆ ಕಾಣಿಸಿಕೊಂಡಿದ್ರು.
ಪತ್ನಿ ಮಕ್ಕಳ ಜೊತೆ ದುಬೈಗೆ ಹೊರಟಿದ್ದರು ನಟ ಸಂಜಯ್.
ಒಂದು ವಾರ ಅಥವಾ 10 ದಿನಗಳೊಳಗಾಗಿ ನಟ ಹಿಂದಿರುಗಲಿದ್ದಾರೆ ಎನ್ನಲಾಗಿದೆ.
Suvarna News