ಸಂಜಯ್‌ ದತ್‌ - ಸಲ್ಮಾನ್‌ ಜೈಲುವಾಸ ಅನುಭವಿಸಿದ ಬಾಲಿವುಡ್‌ ಸ್ಟಾರ್‌ಗಳು

First Published | Aug 11, 2020, 7:00 PM IST

ಸಿನಿಮಾದಲ್ಲಿ ತೆರೆಯ ಮೇಲೆ ಹೀರೋ ಆಗಿ ಮಿಂಚುವ ಸ್ಟಾರ್‌ಗಳು ನಿಜ ಜೀವನದಲ್ಲಿ  ಅಪರಾಧಿಗಳಾಗಿ ಸಾಬೀತಾಗಿದ್ದಾರೆ. ಬಾಲಿವುಡ್‌ನ ಹಲವು ನಟನಟಿಯರು ಜೈಲು ಶಿಕ್ಷೆ ಅನುಭವಿಸಿದ್ದಾರೆ. ಹಿಂದಿ ಸಿನಿಮಾದ ಸೂಪರ್‌ ಸ್ಟಾರ್‌ಗಳಾದ ಸಲ್ಮಾನ್‌ ಹಾಗೂ ಸಂಜಯ್‌ ದತ್‌ ಸಹ ಈ ಪಟ್ಟಿಯಲ್ಲಿದ್ದಾರೆ. ಗಂಭೀರ ಅಪರಾಧದಡಿಯಲ್ಲಿ ಜೈಲು ಶಿಕ್ಷೆಗೆ ಗುರಿಯಾದ ಸೆಲೆಬ್ರೆಟಿಗಳು ಇವರು.   

1993 ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಟಾಡಾ ಅಡಿಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಹೊಂದಿದ್ದ ಆರೋಪದಲ್ಲಿ ಸಂಜಯ್ ದತ್ ತಪ್ಪಿತಸ್ಥನೆಂದು ಸಾಬೀತಾಯಿತು. ನಂತರ, ಉತ್ತಮ ನಡವಳಿಕೆಯಿಂದಾಗಿ, ಸಂಜಯ್ ದತ್ 25 ಫೆಬ್ರವರಿ 2016 ರಂದು ಪುಣೆಯ ಯೆರ್ವಾಡಾ ಜೈಲಿನಿಂದ ಹೊರಬಂದರು.
undefined
'ಜೋಡಿ ನಂಬರ್ ಒನ್' ಚಿತ್ರದಲ್ಲಿ ಸಂಜಯ್ ದತ್ ಅವರೊಂದಿಗೆ ಕೆಲಸ ಮಾಡಿದ ಮೋನಿಕಾ ಬೇಡಿ 2006 ರಲ್ಲಿ ಗ್ಯಾಂಗ್‌ಸ್ಟಾರ್‌ ಅಬು ಸೇಲಂ ಜೊತೆಗೆ ನಕಲಿ ಅಕ್ರಮ ದಾಖಲೆಗಳೊಂದಿಗೆ ಪೋರ್ಚುಗಲ್‌ಗೆ ಪ್ರವೇಶಿಸಿದ ಆರೋಪದಲ್ಲಿದ್ದರು. ಇದರ ನಂತರ, ಮೋನಿಕಾಗೆ 4 ವರ್ಷ ಶಿಕ್ಷೆ ವಿಧಿಸಲಾಯಿತು. ಈಗ ನಟಿ ಮೋನಿಕಾ ಬೇಡಿ ಜೈಲಿನಿಂದ ಹೊರಗಿದ್ದಾರೆ.
undefined

Latest Videos


ಗ್ಯಾಂಗ್‌ಸ್ಟಾರ್‌ ಸಿನಮಾದಲ್ಲಿ ಕಂಗನಾ ರಣಾವತ್‌ ಜೊತೆ ಕೆಲಸ ಮಾಡಿದ ನಟ ಶೈನಿ ಅಹುಜಾ 2009ರಲ್ಲಿ ಕೆಲಸದವಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು. ಆರೋಪ ಸಾಬೀತಾಗಿ ಆತನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಮೂರು ವರ್ಷ ಜೈಲಿನಲ್ಲಿದ್ದ ಶೈನಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
undefined
ಪ್ಯಾಡ್ಮನ್ನಿರ್ಮಾಪಕ ಪ್ರೇರ್ನಾ ಅರೋರಾರನ್ನು ಮುಂಬೈ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) 2019ರಲ್ಲಿ ನಿರ್ಮಾಪಕ ವಾಸು ಭಗ್ನಾನಿಗೆ 3.16 ಕೋಟಿ ರೂ.ಗಳ ವಂಚನೆ ಪ್ರಕರಣದಲ್ಲಿ ಬಂಧಿಸಿತ್ತು.
undefined
1998 ರಲ್ಲಿ 'ಹಮ್ ಸಾಥ್ ಸಾಥ್ ಹೇನ್' ಚಿತ್ರದ ಶೂಟಿಂಗ್ ಸಮಯದಲ್ಲಿ ಸಲ್ಮಾನ್ ಕೃಷ್ಣ ಮೃಗ ಭೇಟೆಯಾಡಿದ ಪ್ರಕರಣಕ್ಕಾಗಿ 2018 ರಲ್ಲಿ ಅವರಿಗೆ 5 ವರ್ಷ ಶಿಕ್ಷೆ ವಿಧಿಸಲಾಯಿತು. ಆದರೆ, ಒಂದು ದಿನ ಜೈಲಿನಲ್ಲಿ ಕಳೆದ ನಂತರ, ಜಾಮೀನಿನ ಮೇಲೆ ಬಿಡುಗಡೆಯಾದರು.
undefined
ಕೊಕೇನ್ ಹೊಂದಿದ್ದಕ್ಕಾಗಿ ಫರ್ದೀನ್ ಖಾನ್‌ರನ್ನು 2001 ರಲ್ಲಿ ಬಂಧಿಸಲಾಯಿತು. 5 ದಿನಗಳ ಜೈಲಿನಲ್ಲಿ ಕಳೆದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
undefined
ನವೆಂಬರ್ 2018 ರಲ್ಲಿ ರಾಜ್ಪಾಲ್ ಯಾದವ್ 5 ಕೋಟಿ ಸಾಲವನ್ನು ಪಾವತಿಸದ ಕಾರಣ ಜೈಲು ಪಾಲಾಗಿದ್ದರು. ವಾಸ್ತವವಾಗಿ, ರಾಜ್ಪಾಲ್ ಮತ್ತು ಅವರ ಪತ್ನಿ ರಾಧಾ ಅವರು 2010 ರಲ್ಲಿ 'ಅಟಾ ಪಾಟಾ ಲಪಾಟಾ' ಚಿತ್ರ ಮಾಡಲು 5 ಕೋಟಿ ರೂ ಸಾಲ ಪಡೆದಿದ್ದರು. ನಂತರ ಆ ಕಂಪನಿಯು ರಾಜ್‌ಪಾಲ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿತು. ಆರೋಪ ಸಾಬೀತಾದಾಗ ರಾಜ್‌ಪಾಲ್ ಮೂರು ತಿಂಗಳು ಜೈಲಿನಲ್ಲಿದ್ದರು.
undefined
ಗೆಳತಿ ಜಿಯಾ ಖಾನ್‌ ಆತ್ಮಹತ್ಯೆ ಕೇಸ್‌ನಲ್ಲಿ ಆದಿತ್ಯ ಪಾಂಚೋಲಿ ಅವರ ಮಗ ಸೂರಜ್ ವಿರುದ್ಧ ಪ್ರಕರಣ ದಾಖಲಾಗಿ ಜೈಲಿಗೆ ಹೋಗಬೇಕಾಗಿತ್ತು. ಸುಮಾರು ಒಂದು ತಿಂಗಳ ನಂತರ, ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಮೇಲೆ ಬಿಡುಗಡೆ ಮಾಡಲಾಯಿತು. ಜೂನ್ 3, 2013 ರಂದು ಜಿಯಾ ತನ್ನ ಮುಂಬೈ ಫ್ಲ್ಯಾಟ್‌ನಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದ್ದರು.
undefined
click me!