ಸಂಜಯ್ ದತ್ - ಮಾನ್ಯತಾ 17ನೇ ವಿವಾಹ ವಾರ್ಷಿಕೋತ್ಸವ; ಅನ್‌ಟೋಲ್ಡ್ ಲವ್ ಸ್ಟೋರಿ ರಿವೀಲ್

Published : Feb 07, 2025, 03:07 PM IST

ಸಂಜಯ್ ದತ್ ಮತ್ತು ಮಾನ್ಯತಾ ದಂಪತಿಗಳ 17ನೇ ವಿವಾಹ ವಾರ್ಷಿಕೋತ್ಸವ. ಗೋವಾದಲ್ಲಿ ನಡೆದ ಖಾಸಗಿ ಸಮಾರಂಭದಿಂದ ಹಿಡಿದು ಸಂಜಯ್ ಸಹೋದರಿಯರ ಅಸಮಾಧಾನದವರೆಗೆ, ಅವರ ಕ್ರೇಜಿ ಪ್ರೇಮಕಥೆಯ ಬಗ್ಗೆ ತಿಳಿದುಕೊಳ್ಳೋಣ.

PREV
17
ಸಂಜಯ್ ದತ್ - ಮಾನ್ಯತಾ 17ನೇ ವಿವಾಹ ವಾರ್ಷಿಕೋತ್ಸವ; ಅನ್‌ಟೋಲ್ಡ್ ಲವ್ ಸ್ಟೋರಿ ರಿವೀಲ್

ಸಂಜಯ್ ದತ್ ಮತ್ತು ಮಾನ್ಯತಾ ದಾಂಪತ್ಯಕ್ಕೆ 17ವರ್ಷ. 2008ರಲ್ಲಿ ಗೋವಾದಲ್ಲಿ ಖಾಸಗಿ ಸಮಾರಂಭದಲ್ಲಿ ಅವರು ಮದುವೆಯಾದರು. ಕೆಲವೇ ಆಪ್ತರು ಭಾಗವಹಿಸಿದ್ದರು. ಸಂಜಯ್ ಸಹೋದರಿಯರು ಬಂದಿರಲಿಲ್ಲ. ಇದೇನಾಯ್ತು ಅಂತ ನೋಡೋಣ.

27

ಸಂಜಯ್ ದತ್ ಮತ್ತು ಮಾನ್ಯತಾ ಮೊದಲ ಬಾರಿಗೆ ಒಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭೇಟಿಯಾದರು. ಮೊದಲ ನೋಟದಲ್ಲೇ ಸಂಜಯ್ ಮಾನ್ಯತಾಳನ್ನು ಇಷ್ಟಪಟ್ಟರು. ಫೋನ್‌ನಲ್ಲಿ ಮಾತಾಡ್ತಾ ಇಬ್ಬರೂ ಹತ್ತಿರವಾದರು. ಹಿಂದಿನ ಪ್ರೇಮ ವೈಫಲ್ಯಗಳಿಂದ ಬೇಸತ್ತಿದ್ದ ಸಂಜಯ್‌ಗೆ ಮಾನ್ಯತಾ ಆಸರೆಯಾದಳು.

37

ಭೇಟಿಯಾದ ನಂತರ ಸಂಜಯ್ ದತ್ ಮತ್ತು ಮಾನ್ಯತಾ ಡೇಟಿಂಗ್ ಶುರು ಮಾಡಿದರು. ಮದುವೆಯಾಗಲು ನಿರ್ಧರಿಸಿದರು. ಆದರೆ ಸಂಜಯ್ 3ನೇ ಮದುವೆಗೆ ಸಹೋದರಿಯರಾದ ಪ್ರಿಯಾ ಮತ್ತು ನಮ್ರತಾ ವಿರೋಧ ವ್ಯಕ್ತಪಡಿಸಿದರು. ಮದುವೆಗೆ ಬರಲಿಲ್ಲ. ಇದು ಬಾಲಿವುಡ್‌ನಲ್ಲಿ ದೊಡ್ಡ ಸುದ್ದಿಯಾಯಿತು.

47

ಮದುವೆಯಾದಾಗ ಸಂಜಯ್‌ಗೆ 50, ಮಾನ್ಯತಾಗೆ 29 ವರ್ಷ. ಅವರಿಗೆ ಇಬ್ಬರು ಮಕ್ಕಳು - ಶಹ್ರಾನ್ ಮತ್ತು ಇಕ್ರಾ ಕೂಡ ಇದ್ದಾರೆ. ಮಾನ್ಯತಾ ಈಗ ಸಂಜಯ್ ದತ್ ಪ್ರೊಡಕ್ಷನ್ಸ್‌ನ CEO ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

57

ಸಂಜಯ್ ದತ್ 3ನೇ ಪತ್ನಿ ಮುಸ್ಲಿಂ ಕುಟುಂಬದವರು. ಅವರ ನಿಜವಾದ ಹೆಸರು ದಿಲ್ನವಾಜ್ ಶೇಕ್. ಸಿನಿಮಾಗಳಿಗಾಗಿ ಮಾನ್ಯತಾ ಎಂದು ಬದಲಾಯಿಸಿಕೊಂಡರು. ಇದಾದ ನಂತರ ಮದುವೆಯ ನಂತರವೂ ಅದೇ ಹೆಸರನ್ನು ಮುಂದುವರೆಸಿಕೊಂಡರು.

67

ಮದುವೆಗೆ ಮೊದಲು ಮಾನ್ಯತಾ ಕೆಲವು 'ಬಿ-ಗ್ರೇಡ್' ಸಿನಿಮಾಗಳಲ್ಲಿ ನಟಿಸಿದ್ದರು. ಆ ಸಿನಿಮಾಗಳು ಸಕ್ಸಸ್ ಆಗಲಿಲ್ಲ. ಸಂಜಯ್ ಆ ಸಿನಿಮಾಗಳ ಹಕ್ಕುಗಳನ್ನು ಖರೀದಿಸಿ ಎಲ್ಲ ಬಿ-ಗ್ರೇಡ್ ಸಿನಿಮಾಗಳು ಬಿಡುಗಡೆ ಆಗುವುದನ್ನು ತಡೆದರು.

77

ಸಂಜಯ್ ದತ್ ಮತ್ತು ಮಾನ್ಯತಾ ಮುಂಬೈನ ಪಾಲಿ ಹಿಲ್ಸ್‌ನಲ್ಲಿ 40 ಕೋಟಿ  ರೂ. ಮೌಲ್ಯದ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಬಂಗಲೆಯ ಒಳಾಂಗಣ ಅದ್ಭುತವಾಗಿದೆ. ಮಾನ್ಯತಾ ಆಗಾಗ್ಗೆ ತಮ್ಮ ಮನೆಯ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ.

click me!

Recommended Stories