ಕ್ಯಾನ್ಸರ್ ಗೆದ್ದ 'ಅಧೀರ' ಅಭಿಮಾನಿಗಳಿಗೆ ಹೇಳಿದ್ದು ಒಂದೇ ಮಾತು!

First Published | Oct 21, 2020, 8:27 PM IST

ಮುಂಬೈ(ಅ. 21)   ಮಹಾಮಾರಿ ಕ್ಯಾನ್ಸರ್  ವಿರುದ್ಧ ಗೆದ್ದು ಕೆಜಿಎಫ್ ಚಾಪ್ಟರ್  2 ಶೂಟಿಂಗ್ ನಲ್ಲಿ  ಕಾಣಿಸಿಕೊಂಡಿದ್ದ ಸಂಜಯ್ ದತ್ ತಮ್ಮ ಪುತ್ರ ಶಹರಾನ್  ಜನ್ಮದಿನದಂದು ಅಭಿಮಾನಿಗಳಿಗೆ ಮಹತ್ವದ ವಿಷಯ ಒಂದನ್ನು ತಿಳಿಸಿದ್ದಾರೆ.

ತಮ್ಮ ಆರೋಗ್ಯದ ಕುರಿತ ವಿವರ ಬರೆದಿದ್ದು. ನಾನು ಚೇತರಿಸಿಕೊಂಡಿದ್ದೇನೆ. ಕಷ್ಟಕರ ದಿನ ಎದುರಿಸಲು ನಿಮ್ಮೆಲ್ಲರ ಹಾರೈಕೆ ಕಾರಣವಾಗಿದೆ ಎಂದಿದ್ದಾರೆ.
ಕಳೆದ ಕೆಲವು ವಾರಗಳು ನನ್ನ ಕುಟುಂಬ ಮತ್ತು ನನಗೆ ಬಹಳ ಕಷ್ಟದ ಸಮಯವಾಗಿತ್ತು. ಈ ಯುದ್ಧ ಗೆದ್ದು ಹೊರಬಂದ ಸಂಗತಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
Tap to resize

ನಿಮ್ಮೆಲ್ಲರ ಹಾರೈಕೆಯ ಶಕ್ತಿ ಇಷ್ಟು ಬೇಗ ನಾನು ಚೇತರಿಸಿಕೊಳ್ಳಲು ಕಾರಣ ಎಂದು ಸ್ಮರಿಸಿದ್ದಾರೆ.
ಅಭಿಮಾನಿಗಳಿಗೆ ನಾನು ಸದಾ ಆಭಾರಿಯಾಗಿರುತ್ತೇನೆ ಎಂದು ದತ್ ತಿಳಿಸಿದ್ದಾರೆ.
61 ವರ್ಷದ ನಟ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೂ ಧನ್ಯವಾದ ಸಲ್ಲಿಸಿದ್ದಾರೆ.
ಡಾ. ಸೇವಂತಿ ಮತ್ತು ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿ ನನ್ನ ಜೀವನದಲ್ಲಿ ಹೊಸ ಹುಟ್ಟಿಗೆ ಕಾರಣವಾದರು ಎಂದು ನೆನೆದಿದ್ದಾರೆ.
ಉಸಿರಾಟ ಸಮಸ್ಯೆಯೂ ಸೇರಿದಂತೆ ಆರೋಗ್ಯ ಕೈಕೊಟ್ಟಿದ್ದರಿಂದ ದತ್ ಅನೇಕ ದಿನ ಚಿಕಿತ್ಸೆ ಪಡೆದು ಮರಳಿದ್ದರು.

Latest Videos

click me!