ನಿರ್ದೇಶಕರಿಗೆ ಸಹಕರಿಸದಿದ್ದಕ್ಕೆ ನಾನು ತೆಳ್ಳಗೆ ಕಂಡೆ: ಕಾಸ್ಟಿಂಗ್ ಕೌಚ್ ಬಗ್ಗೆ ತುತ್ತಾ ಮುತ್ತಾ ನಟಿ!

First Published | Sep 14, 2024, 5:23 PM IST

ನಟಿ ಕಸ್ತೂರಿ. ಭಾರತೀಯ ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ. ಸ್ಯಾಂಡಲ್ ವುಡ್ ನಲ್ಲಿಯೂ ರಮೇಶ್ ಅರವಿಂದ್ ನಟನೆಯ ತುತ್ತು ಮುತ್ತಾ, ಕ್ರೇಜಿ ಸ್ಟಾರ್ ನಟನೆಯ ಜಾಣ ಸೇರಿ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಇದೀಗ ಹೇಮಾ ಕಮಿಟಿ ವರದಿ ಬಳಿಕ ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಬಿಚ್ಚಿಟ್ಟಿದ್ದು, 2ನೇ ಚಿತ್ರದಲ್ಲಿಯೇ ನಿರ್ದೇಶಕರು ತಮ್ಮನ್ನು ಹೇಗೆ ನಡೆಸಿಕೊಂಡು ಎಂಬುದನ್ನು ರಿವೀಲ್ ಮಾಡಿ, ದುಃಖ ತೋಡಿಕೊಂಡಿದ್ದಾರೆ. 

ತೆಲುಗು, ತಮಿಳು, ಮಲಯಾಳ, ಕನ್ನಡ ಭಾಷಾ ಚಿತ್ರಗಳಲ್ಲಿ ನಟಿಸಿ ಮನಸೆಳೆದ ನಟಿ ಕಸ್ತೂರಿ.  ಪ್ರಸ್ತುತ ತೆಲಗು ಕಿರುತೆರೆಯಲ್ಲಿಯೂ ಕಮಾಲ್ ಮಾಡುತ್ತಿರುವ ಈ ನಟಿ ನೇರ ನುಡಿಗೂ ಹೆಸರುವಾಸಿ. ತಮ್ಮ ಅಭಿಪ್ರಾಯಗಳನ್ನು ಹೇಳಲು ಎಂದಿಗೂ ಹಿಂಜರಿಯುವುದಿಲ್ಲ. ಯಾವುದೇ ಪರಿಣಾಮಗಳಿಗೆ ಸಿದ್ಧ ಎನ್ನುತ್ತಾರೆ.

ಕೇರಳ ಚಿತ್ರರಂಗದಲ್ಲಿ ಜಸ್ಟೀಸ್ ಹೇಮಾ ಸಮಿತಿ ವರದಿ ಸಂಚಲನ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಅನೇಕ ನಟ, ನಟಿಯರು ತಾವು ಹಿಂದೆ ಎದುರಿಸಿದ ಲೈಂಗಿಕ ಕಿರುಕುಳ ಮತ್ತು ಕಹಿ ಅನುಭವಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುತ್ತಿದ್ದಾರೆ. ಸಿನಿಮಾ ರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ  ಅಂಥದ್ದೇ ಒಂದು ಘಟನೆ ತಮ್ಮ ಜೀವನದಲ್ಲೂ ನಡೆದಿದೆ ಎಂದು ಒಂದು ಸಂದರ್ಶನದಲ್ಲಿ ರವಿಚಂದ್ರನ್ ಜೊತೆ ಕ್ರೇಜಿ ಚಿತ್ರದಲ್ಲಿ ನಟಿಸಿದ್ದ ನಟಿ ಕಸ್ತೂರಿ ಭಾವುಕರಾಗಿದ್ದಾರೆ.
  

Tap to resize

ಅಂತರ್ಜಾಲದಲ್ಲಿ ಸಕ್ರಿಯರಾಗಿರುವ ಅವರು ತಮ್ಮ ವೈಯಕ್ತಿಕ ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ, ಹಲವಾರು ಸಂದರ್ಶನಗಳ ಮೂಲಕ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸುವ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಇತ್ತೀಚಿನ ಸಂದರ್ಶನವೊಂದರಲ್ಲಿ ಕಸ್ತೂರಿ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ನಟಿ ಕಸ್ತೂರಿ ಕೂಡ ತಾವು ಎದುರಿಸಿದ ಅನುಭವವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಎರಡನೇ ಸಿನಿಮಾದಲ್ಲೇ ನಿರ್ದೇಶಕರು ಸಹಕರಿಸುವಂತೆ ಕೇಳಿದ್ದರು. ಒಪ್ಪದಿದ್ದಕ್ಕೆ ಕೊಟ್ಟ ಶಿಕ್ಷೆ ಅಷ್ಟಿಷ್ಟಲ್ಲವೆಂದು ಹೇಳಿ ಕೊಂಡಿದ್ದಾರೆ. 

ತಾವು ನಟಿಸುತ್ತಿದ್ದ 2ನೇ ಸಿನಿಮಾದ ನಿರ್ದೇಶಕರು ಕಮಿಟ್ ಆಗುವಂತೆ ಕೇಳಿ ಕೊಂಡಿದ್ದರು. ಅದೆಲ್ಲಿತ್ತು ಸಿಟ್ಟು, ಎಲ್ಲರೆದುರಿಗೇ ಬಾಯಿಗೆ ಬಂದಂತೆ ಬೈದಿದ್ದೆ. ಆದರೆ, ನನ್ನೀ ನಡೆಯಿಂದ ಆದ ಪರಿಣಾಮ ಮಾತ್ರ ಹಾರಿಬಲ್ ಅಂದಿದ್ದಾರೆ ಪ್ರೇಮಕ್ಕೂ ಸೈ ನಟಿ. 

ಆಗಲೇ ಚಿತ್ರದ ಮೊದಲ ಹಂತದ ಶೂಟಿಂಗ್ ಸಹ ಮುಗಿದಿತ್ತು. ಆಡಿಷನ್ ಮಾಡಿ, ಪಾತ್ರಕ್ಕೆ ನಾನು ಸೂಟ್ ಆಗುತ್ತೇನೆಂಬ ಕಾರಣದಿಂದಲೇ ಚಿತ್ರಕ್ಕೆ ತಮ್ಮನ್ನು ಆರಿಸಿಕೊಳ್ಳಲಾಗಿತ್ತು. ಯಾವಾಗ ನಾನು ನಿರ್ದೇಶಕರ ಅಣತಿಯಂತೆ ಸಹಕರಿಸಲು ನಿರಾಕರಿಸಿದನೂ ಅವರ ಕಣ್ಣಿಗೆ ತೆಳ್ಳಗೆ ಕಂಡೆ. ಚಿತ್ರದಿಂದ ತೆಗೆಯಲು ಮುಂದಾದರು, ಎಂದಿದ್ದಾರೆ ಇಬ್ಬರ ನಡುವಿನ ಮುದ್ದನಾಟದಲ್ಲಿ ನಟಿಸಿದ್ದ ನಟಿ ಕಸ್ತೂರಿ. 

ತಮ್ಮ ಫ್ಯಾಮಿಲಿ ಬ್ಯಾಕ್ ಗ್ರೌಂಡ್ ಬಗ್ಗೆಯೂ ಹೇಳಿದ ಕಸ್ತೂರಿ, ನಮ್ಮಮ್ಮ ಲಾಯರ್. ಸುಸಂಸ್ಕೃತ ಕುಟುಂಬ ಮಾತ್ರವಲ್ಲ, ಆರ್ಥಿಕವಾಗಿಯೂ ಸದೃಢವಾದ ಫ್ಯಾಮಲಿ ತಮ್ಮದು. ಪ್ಯಾಷನ್ ಎಂಬ ಕಾರಣಕ್ಕೆ ಸಿನಿ ರಂಗಕ್ಕೆ ಕಾಲಿಟ್ಟವಳು. ನನ್ನಂಥವಳನ್ನೇ ಹೀಗೆ ನಡೆಸಿಕೊಂಡರೆ, ಇನ್ನು ಇಲ್ಲಿಯೇ ದುಡಿಯಲು ಬಂದವರ ನಟಿಯರನ್ನು ಹೇಗೆ ನಡೆಯಿಸಿಕೊಂಡಿದ್ದಾರೆಂಬುದನ್ನು ಊಹಿಸಿಕೊಳ್ಳಬಹುದು, ಎಂದು ಹೆಣ್ಣಿನ ವಿರುದ್ಧ ಬಣ್ಣದ ಜಗತ್ತಿನಲ್ಲಿ ನಡೆಯುವ ಚಿತ್ರರಂಗದ ಬಗ್ಗೆ ಧ್ವನಿ ಎತ್ತಿದ್ದಾರೆ ನಟಿ.

ತೆಲುಗು, ತಮಿಳು, ಮಲಯಾಳಂ, ಕನ್ನಡ  ಸಿನಿಮಾಗಳಲ್ಲಿ ಟಾಪ್ ನಾಯಕಿಯಾಗಿ ಮಿಂಚಿದವರು ಹಿರಿಯ ನಟಿ ಕಸ್ತೂರಿ (Kasthuri). ತೆಲುಗಿನಲ್ಲಿ ಕೆಲವೇ ಸಿನಿಮಾಗಳನ್ನು ಮಾಡಿದ್ದರೂ ತಮ್ಮ ನಟನೆಯಿಂದ ಉತ್ತಮ ಮನ್ನಣೆ ಪಡೆದವರು.  ನಾಗಾರ್ಜುನ ಅವರೊಂದಿಗೆ ನಟಿಸಿದ ‘ಅನ್ನಮಯ್ಯ’ ಚಿತ್ರದ ಮೂಲಕ ತೆಲಗೂ ಚಿತ್ರರಂಗದಲ್ಲಿಯೂ ಹಲವು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. 
 

ಪ್ರಸ್ತುತ ಬೆಳ್ಳಿತೆರೆಗಿಂತ  ಕಿರುತೆರೆಯಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಇಂಟಿಂಟಿ ಗೃಹಲಕ್ಷ್ಮಿ ಚಿತ್ರದ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದರು. ಸಾಮಾಜಿಕ ಮಾಧ್ಯಮಗಳಲ್ಲಿ ಸೌಂದರ್ಯದ ಅಬ್ಬರ ಸೃಷ್ಟಿಸುವುದರ ಜೊತೆಗೆ ಸೂಪರ್ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುವ ಇವರು ಕಿರುತೆರೆಯಲ್ಲಿ ಮಾತ್ರ ಮುಗ್ಧತೆಯಿಂದ ಕಾಣಿಸಿಕೊಂಡು, ಪ್ರೇಕ್ಷಕರ ಮನ ಗೆದ್ದಿದ್ದಾರೆ. 

ಗೃಹಲಕ್ಷ್ಮಿ ಧಾರಾವಾಹಿಯ ಮೂಲಕ ಜನ ಮನ ಗೆದ್ದವರು ಹಿರಿಯ ನಟಿ ಕಸ್ತೂರಿ.  ಇಂಡಸ್ಟ್ರಿಯಲ್ಲಿ ಫೈರ್ ಬ್ರ್ಯಾಂಡ್ ಆಗಿರುವ ಇವರು, ಈ ಧಾರಾವಾಹಿಯಲ್ಲಿ ಮಾತ್ರ ಮುಗ್ಧ ಗೃಹಿಣಿಯಾಗಿ ಮನರಂಜಿಸುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಮಾಡರ್ನ್ ಡ್ರೆಸ್ಸಲ್ಲಿ ಕೊಡುವ ಫೋಸ್ ಸಾಕಷ್ಟು ಚರ್ಚೆಗಳಿಗೆ ಕಾರಣವಾಗುತ್ತವೆ. 

Latest Videos

click me!