ಮಾಜಿ ನಟಿ ಸನಾ ಖಾನ್ ಮದುವೆಯಾಗಿ ಎರಡೇ ತಿಂಗಳೀಗೆ ಹಾರ್ಟ್ ಬ್ರೋಕನ್ ಎಂದು ಪೋಸ್ಟ್ ಹಾಕ್ಕೊಂಡಿದ್ದಾರೆ.
ನಟನೆ, ಸಿನಿಮಾ, ಶೋಬೀಸ್ ಬೇಡ ಎಂದು ಮುಸ್ಲಿಂ ಧರ್ಮಗುರುವನ್ನು ಮದುವೆಯಾದ ಸನಾ ಖಾನ್ ಕೆಲವರು ನನ್ನ ಹಿಂದಿನ ದಿನಗಳನ್ನು ಕೆದಕೋಕೆ ಪ್ರಯತ್ನಿಸ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತನ್ನ ಬಗ್ಗೆ ನೆಗೆಟಿವ್ ವಿಡಿಯೋ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರೋ ಸನಾ ಖಾನ್ ತಮ್ಮ ಮನಸು ಒಡೆದು ಹೋಯ್ತು ಎಂದೂ ಹೇಳ್ಕೊಂಡಿದ್ದಾರೆ.
ಅಲ್ಲಾ ನನಗೆಲ್ಲವನ್ನೂ ಕೊಟ್ಟಿದ್ದಾನೆ. ಇನ್ನು ಸಮಾಜಕ್ಕೆ ನಾನು ಕೊಡುವ ಸಮಯ ಎಂದು ಹೇಳಿ ಸಿನಿಮಾ, ನಟನೆಗೆ ಬಾಯ್ ಬಾಯ್ ಹೇಳಿದ್ದರು ಈಕೆ
ಧರ್ಮದ ಬಗ್ಗೆಯೇ ಆಸಕ್ತಿ ತೋರಿಸಿದ ನಟಿ ದೀಢೀರನೆ ಮುಸ್ಲಿಂ ಧರ್ಮಗುರು ಮುಫ್ತಿ ಅನಾಸ್ ಅವರನ್ನು ಮದುವೆಯಾದರು
ಕೆಲವು ಜನರು ನಕಾರಾತ್ಮಕ ವೀಡಿಯೊಗಳನ್ನು ಮಾಡುತ್ತಿದ್ದಾರೆ. ಆದರೆ ನಾನು ತುಂಬಾ ತಾಳ್ಮೆಯಿಂದಿದ್ದೇನೆ. ಆದರೆ ಈಗ ಒಬ್ಬ ವ್ಯಕ್ತಿಯು ನನ್ನ ಹಿಂದಿನ ದಿನಗಳನ್ನು ಎತ್ತಿ ತೋರಿಸುವ ವೀಡಿಯೊವನ್ನು ಮಾಡಿದ್ದಾನೆ ಎಂದಿದ್ದಾರೆ
ನಾನು ತುಂಬಾ ಎದೆಗುಂದಿದ್ದೇನೆ. ಐ ಆಮ್ ಹಾರ್ಟ್ ಬ್ರೋಕನ್ ಎಂದಿದ್ದಾರೆ