Model San Rachel's Death: ಕೃಷ್ಣ ಸುಂದರಿ ಸ್ಯಾನ್ ರಾಚೆಲ್ : ಪುದುಚೇರಿಯಲ್ಲಿ ಸಾವಿಗೆ ಶರಣಾದ ಖ್ಯಾತ ಮಾಡೆಲ್

Published : Jul 14, 2025, 12:42 PM ISTUpdated : Jul 14, 2025, 12:57 PM IST

ಖ್ಯಾತ ಮಾಡೆಲ್ ತಮ್ಮ ಕೃಷ್ಣ ವರ್ಣದಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಸ್ಯಾನ್ ರಾಚೆಲ್ ಬದುಕಿಗೆ ಗುಡ್‌ ಬಾಯ್ ಹೇಳಿದ್ದಾರೆ. ತನ್ನ ತಂದೆಯ ಮನೆಗೆ ಹೋಗಿ ಬಂದ ನಂತರ ರಾಚೆಲ್ ಅತೀಯಾದ ಮಾತ್ರೆಗಳನ್ನು ಸೇವಿಸಿ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

PREV
17
ಖ್ಯಾತ ರೂಪದರ್ಶಿ ರಾಚೆಲ್ ನಿಧನ

ಖ್ಯಾತ ಮಾಡೆಲ್ ತಮ್ಮ ಕೃಷ್ಣ ವರ್ಣದಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಸ್ಯಾನ್ ರಾಚೆಲ್ ಬದುಕಿಗೆ ಗುಡ್‌ ಬಾಯ್ ಹೇಳಿದ್ದಾರೆ. ತನ್ನ ತಂದೆಯ ಮನೆಗೆ ಹೋಗಿ ಬಂದ ನಂತರ ರಾಚೆಲ್ ಅತೀಯಾದ ಮಾತ್ರೆಗಳನ್ನು ಸೇವಿಸಿ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

27
ಕೃಷ್ಣ ಸುಂದರಿ ರಾಚೆಲ್

ಫ್ಯಾಷನ್‌ ಲೋಕದಲ್ಲಿ ಸೌಂದರ್ಯಕ್ಕೆ ತನ್ನದೇ ಆದ ಮಾನದಂಡವಿದೆ. ಹಾಲಿನ ಬಣ್ಣ, ಚಿನ್ನದಂತೆ ಹೊಳೆಯುವ ಚರ್ಮ ಹೀಗೆ ಫ್ಯಾಷನ್ ಜಗತ್ತು ಮಾಡೆಲ್‌ಗಳ ಸೌಂದರ್ಯಕ್ಕೆ ತನ್ನದೇ ಮಾನದಂಡ ನಿಗದಿ ಮಾಡಿದೆ. ಆದರೂ, ಮಾಡೆಲ್ ರಾಚೆಲ್ ಅವರು ತಮ್ಮದೇ ವಿಭಿನ್ನ ಸೌಂದರ್ಯದಿಂದ ಮಾಡೆಲ್ ಲೋಕವನ್ನು ಸೆಳೆದವರು. ಆದರೆ ಅವರ ಈ ಹಠಾತ್ ಸಾವು ಅಭಿಮಾನಿಗಳನ್ನು ಶೋಕದ ಕಡಲಲ್ಲಿ ತೇಲುವಂತೆ ಮಾಡಿದೆ.

37
ಸಾವಿಗೆ ಶರಣಾದ ರಾಚೆಲ್

26 ವರ್ಷದ ರಾಚೆಲ್ ಅವರು ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಸಿನಿಮಾ ಕ್ಷೇತ್ರ ಹಾಗೂ ಮಾಡೆಲಿಂಗ್‌ನಲ್ಲಿ ಬಣ್ಣದ ಬಗ್ಗೆ ತಾರತಮ್ಯ ನೀತಿಯ ಬಗ್ಗೆ ರಾಚೆಲ್ ದಿಟ್ಟ ನಿಲುವು ಹೊಂದಿದ್ದರು. ಅವರು ಮಾತ್ರೆ ಸೇವಿಸಿದ ವಿಚಾರ ತಿಳಿಯುತ್ತಿದ್ದಂತೆ ಆಕೆಯ ಕುಟುಂಬದವರು, ಕೂಡಲೇ ಆಕೆಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಖಾಸಗಿ ಆಸ್ಪತ್ರೆಗೂ ಅವರನ್ನು ಸ್ಥಳಾಂತರಿಸಿದರು. ಬಳಿಕ ಅಲ್ಲಿಂದ ಪುದುಚೇರಿಯ ಜವಾಹರಲಾಲ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಆಸ್ಪತ್ರೆಗೂ ದಾಖಲಿಸಿದ್ದರು. ಆದರೆ ಅಲ್ಲಿ ಆಕೆ ಕೊನೆಯುಸಿರೆಳೆದಿದ್ದಾರೆ.

47
ಹಲವು ಬ್ಯೂಟಿ ಪ್ರಾಡಕ್ಟ್‌ಗಳಲ್ಲಿ ಮಾಡೆಲ್ ಆಗಿದ್ದ ರಾಚೆಲ್

ಬಿಳಿ ಮೈಬಣ್ಣವೇ ಸೌಂದರ್ಯ ಎಂದು ಹೇಳುವವರ ನಡುವೆ ರಾಚೆಲ್‌ ತನ್ನ ಕಪ್ಪು ಮೈಬಣ್ಣವನ್ನೇ ಸಕಾರಾತ್ಮಕವಾಗಿ ಪರಿವರ್ತಿಸಿ ಮಾಡೆಲ್ ಆದವರು. ಹಲವು ಜಾಹೀರಾತುಗಳಲ್ಲಿ ಮಾಡೆಲ್ ಆಗಿ, ಖಾಸಗಿ ಕಂಪನಿಗಳ ಸೌಂದರ್ಯವರ್ಧಕಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿಯೂ ಅವರು ಕೆಲಸ ಮಾಡಿದ್ದಾರೆ. ಪುದುಚೇರಿಯ ಕಾರಮಣಿಕುಪ್ಪಂ ಪ್ರದೇಶದವರಾದ ಈ ಸಾನ್ ರೇಚಲ್ ಮೂಲ ಹೆಸರು ಸಂಕರಪ್ರಿಯಾ

57
ಹಲವು ಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ರಾಚೆಲ್

ಕಳೆದ ವರ್ಷವಷ್ಟೇ ರಾಚೆಲ್ ಸತ್ಯ ಎಂಬುವರನ್ನು ವಿವಾಹವಾಗಿ ಪುದುಚೇರಿಯ 100 ಅಡಿ ರಸ್ತೆಯಲ್ಲಿರುವ ಮನೆಯಲ್ಲಿ ವಾಸ ಮಾಡುತ್ತಿದ್ದರು. ಕಪ್ಪು ಮೈಬಣ್ಣ ಹೊಂದಿರುವ ಇವರು ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಸ್ ಬೆಸ್ಟ್ ಆಟಿಟ್ಯೂಡ್ 2019, ಮಿಸ್ ಡಾರ್ಕ್ ಕ್ವೀನ್ ತಮಿಳುನಾಡು 2019, ಮಿಸ್ ಪುದುಚೇರಿ 2020, ಕ್ವೀನ್ ಆಫ್ ಚೆನ್ನೈ- 2023 ಹಾಗೂ 2023 MISS AFRICA GOLDEN INDIA ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದಲ್ಲದೆ, ಯುವತಿಯರಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡುವ ಬಗ್ಗೆ ತರಬೇತಿ ಕೇಂದ್ರವನ್ನೂ ಅವರು ನಡೆಸುತ್ತಿದ್ದರು.

67
ಮಾತ್ರೆ ಸೇವನೆ ಬಳಿಕ ಕಿಡ್ನಿ ವೈಫಲ್ಯ

ಆದರೆ ಕೆಲ ಮೂಲಗಳ ವರದಿಯ ಪ್ರಕಾರ ಮಾತ್ರೆ ಸೇವಿಸಿದ ನಂತರ ಕೆಲವು ದಿನಗಳು ಆಸ್ಪತ್ರೆಯಲ್ಲಿದ್ದ ರಾಚೆಲ್ ಅಲ್ಲಿಂದ ತಮ್ಮ ಗಂಡನ ಮನೆಗೆ ಹೋಗಿದ್ದಾರೆ. ಅಲ್ಲಿಗೆ ಹೋದ ಮರುದಿನವೇ ಅವರ ಕೈ, ಕಾಲುಗಳು ಊದಿಕೊಂಡು ಆರೋಗ್ಯ ಹದಗೆಟ್ಟಿದೆ. ಇದರಿಂದಾಗಿ ಸಾನ್ ರೇಚಲ್‌ರನ್ನು ಮತ್ತೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರ ಆರೋಗ್ಯವನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಪ್ರಮಾಣದ ಮಾತ್ರೆಗಳನ್ನು ಸೇವಿಸಿದ್ದರಿಂದ ಸಾನ್ ರೇಚಲ್‌ ಅವರ ಎರಡೂ ಮೂತ್ರಪಿಂಡಗಳು ವಿಫಲವಾಗಿವೆ ಎಂದು ತಿಳಿಸಿದ್ದಾರೆ. ಇದಾದ ನಂತರ ಅವರನ್ನು ಜಿಪ್ಮರ್ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

77
ಸಾಲದ ಒತ್ತಡದಿಂದ ಸಾವು?

ಈ ಘಟನೆ ಪುದುಚೇರಿ ಪ್ರದೇಶದಲ್ಲಿ ಆಘಾತವನ್ನುಂಟುಮಾಡಿದೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ, ತನ್ನ ಸಾವಿಗೆ ಗಂಡ ಅಥವಾ ಅತ್ತೆ ಕಾರಣರಲ್ಲ ಎಂದು ಪತ್ರ ಬರೆದಿಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಲಾಗುತ್ತಿದೆ. ಹಲವು ಫ್ಯಾಷನ್ ಕಾರ್ಯಕ್ರಮಗಳನ್ನು ನಡೆಸಲು ರಾಚೆಲ್ ಸಾಲ ಪಡೆದಿದ್ದರು ಎನ್ನಲಾಗಿದೆ ಮತ್ತು ಇದರಿಂದ ಸಾಲದ ಒತ್ತಡ ಹೆಚ್ಚಾದ ಪರಿಣಾಮ ಗಂಡನ ಬಳಿಯೂ ಹೇಳದೆ ಮಾನಸಿಕ ಒತ್ತಡದಲ್ಲಿದ್ದರು ಎಂದು ಹೇಳಲಾಗುತ್ತಿದೆ. ಸಾನ್ ರೇಚಲ್ ಆತ್ಮಹತ್ಯೆಗೆ ಬೇರೆ ಏನಾದರೂ ಕಾರಣಗಳಿವೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read more Photos on
click me!

Recommended Stories