ನೀನು ಸೂಪರ್ ಆಕ್ಟರ್, ಹೀಗೆ ಜೀವನ ಹಾಳು ಮಾಡ್ಕೋಬೇಡ: ಕೋಟಗೆ ಎಚ್ಚರಿಕೆ ಕೊಟ್ಟಿದ್ರು ಚಿರಂಜೀವಿ

Published : Jul 13, 2025, 11:00 PM IST

ಪ್ರಸಿದ್ಧ ನಟ ಕೋಟ ಶ್ರೀನಿವಾಸ ರಾವ್ ಅವರ ನಿಧನದಿಂದ ಚಿತ್ರರಂಗದಲ್ಲಿ ದುಃಖ ಮಡುಗಟ್ಟಿದೆ. ಕೋಟ ಶ್ರೀನಿವಾಸ ರಾವ್ 750 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಮಿಡಿ ಪಾತ್ರಗಳಲ್ಲಿ, ವಿಲನ್ ಆಗಿ, ಪೋಷಕ ನಟರಾಗಿ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಪ್ರದರ್ಶಿಸಿದ್ದಾರೆ.

PREV
15
ಕೋಟ ಶ್ರೀನಿವಾಸ ರಾವ್ ಅವರ ನಿಧನದಿಂದ ಚಿತ್ರರಂಗದಲ್ಲಿ ದುಃಖ ಮಡುಗಟ್ಟಿದೆ. 750 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಮಿಡಿ, ವಿಲನ್, ಪೋಷಕ ನಟರಾಗಿ ತಮ್ಮದೇ ಶೈಲಿ ಪ್ರದರ್ಶಿಸಿದ್ದಾರೆ. ನಾಲ್ಕು ದಶಕಗಳ ಕಾಲ ಟಾಲಿವುಡ್ ನಲ್ಲಿ ಬ್ಯುಸಿ ಆರ್ಟಿಸ್ಟ್ ಆಗಿದ್ದರು.
25

ಕೋಟ ಅವರ ನಿಧನದಿಂದ ಅವರ ವೃತ್ತಿಜೀವನದ ವಿಶೇಷಗಳನ್ನು ಅಭಿಮಾನಿಗಳು ಸ್ಮರಿಸುತ್ತಿದ್ದಾರೆ. ವಿಶೇಷವಾಗಿ ಮೆಗಾಸ್ಟಾರ್ ಚಿರಂಜೀವಿ ಜೊತೆ ಕೋಟಗೆ ಉತ್ತಮ ಬಾಂಧವ್ಯವಿತ್ತು. ಯಮುಡಿಕಿ ಮೊಗುಡು, ಮೆಕ್ಯಾನಿಕ್ ಅಳ್ಳುಡು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

35

ಕೋಟ ಶ್ರೀನಿವಾಸ ರಾವ್ ಅವರ ಮದ್ಯಪಾನದ ಅಭ್ಯಾಸದ ಬಗ್ಗೆ ಹಲವು ವರದಿಗಳು ಬಂದಿದ್ದವು. 'ನೀನು ತುಂಬಾ ಕುಡಿಯುತ್ತಿದ್ದೀಯ, ನೀನು ಒಳ್ಳೆ ಆರ್ಟಿಸ್ಟ್, ಹೀಗೆ ಜೀವನ ಹಾಳ್ ಮಾಡ್ಕೋಬೇಡ' ಅಂತ ಚಿರು ಹಲವು ಬಾರಿ ಎಚ್ಚರಿಸಿದ್ದರಂತೆ.

45

'ನೀನು ತುಂಬಾ ಕುಡಿಯುತ್ತಿದ್ದೀಯ, ನೀನು ಒಳ್ಳೆ ಆರ್ಟಿಸ್ಟ್, ಹೀಗೆ ಹಾಳ್ ಮಾಡ್ಕೋಬೇಡ' ಅಂತ ಚಿರು ಹಲವು ಬಾರಿ ನನ್ನ ಮೇಲೆ ಕೂಗಾಡಿದ್ದಾರೆ ಅಂತ ಕೋಟ ಹೇಳಿದ್ದಾರೆ. ಚಿರು ನನ್ನ ಮೇಲೆ ಕೂಗಾಡೊದ್ರಲ್ಲಿ ತಪ್ಪಿಲ್ಲ, ನನ್ನ ಮೇಲೆ ಪ್ರೀತಿ ಇದ್ದದ್ದರಿಂದ ಅರಚಿದ್ರು.

55

ಆದರೆ ಕುಡಿದು ಶೂಟಿಂಗ್‌ಗೆ ಹೋಗ್ತಿದ್ದೆ ಅನ್ನೋದು ಸುಳ್ಳು ಅಂತ ಕೋಟ ಹೇಳಿದ್ದಾರೆ. ಚಿರು ಮೊದಲ ಚಿತ್ರ ಪ್ರಾಣಂ ಖರೀದು ಚಿತ್ರದ ಮೂಲಕವೇ ಕೋಟ ಸಿನಿ ಜೀವನ ಶುರುವಾಯಿತು. ಬ್ಯಾಂಕ್ ಉದ್ಯೋಗಿಯಾಗಿದ್ದ ಕೋಟ ರಂಗಭೂಮಿ ನಟರಾಗಿದ್ದರು.

Read more Photos on
click me!

Recommended Stories