ವರದನಾಯಕ ಚಿತ್ರದಲ್ಲಿ ನಟಿಸಿರುವ ಸಮೀರಾ ರೆಡ್ಡಿ 2014ರಲ್ಲಿ ಉದ್ಯಮಿ ಅಕ್ಷಯ್ ಎಂಬುವವರನ್ನು ಮದುವೆ ಮಾಡಿಕೊಂಡರು. ಈ ಜೋಡಿ ಇಬ್ಬರು ಮಕ್ಕಳಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
'42ನೇ ವಯಸ್ಸಿಗೆ ನಾನು ಮಗಳಿಗೆ ಜನ್ಮ ನೀಡಿದೆ. ಹಲವರು ನಾನು ಐವಿಎಫ್ ಮಾಡಿಸಿಕೊಂಡಿದ್ದೀನಿ ಎಂದು ಪ್ರಶ್ನಿಸಿದ್ದರು ಆದರೆ ನಾನು ನ್ಯಾಚುರಲ್ ಅಗಿ ಪ್ರಯತ್ನ ಮಾಡಿ ಮಗು ಆಗಿದ್ದು' ಎಂದು ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ಸಮೀರಾ ಮಾತನಾಡಿದ್ದಾರೆ.
'ಮೊದಲನೇ ಪ್ರೆಗ್ನೆನ್ಸಿ ಸಮಯದಲ್ಲಿ ತುಂಬಾ ನೋವು ಅನುಭವಿಸಿದ್ದೀನಿ. ನನ್ನ ಪ್ರೋ ಲ್ಯಾಕ್ಟಿವ್ ಲೆವೆಲ್ ಹೆಚ್ಚಿತ್ತು, ಆಗಲೇ ನಾನು ಔಷದಿ ತೆಗೆದುಕೊಂಡು ಚೇತರಿಸಿಕೊಂಡಿದ್ದೆ. ಹೀಗಾಗಿ ಆ ವಯಸ್ಸಿನಲ್ಲಿ ಸುಲಭವಾಗಿ ನಾನು ಗರ್ಭಿಣಿ ಆಗಲು ಸಾಧ್ಯವಾಗಿದ್ದು'
'ಪ್ಲಾಸೆಂಟಾ ಸಮಸ್ಯೆ ಆಗಿತ್ತು, ತುಂಬಾ ಬ್ಲೀಡಿಂಗ್ ಆಗುತ್ತಿತ್ತು. ನನ್ ಮೊದಲ ಪ್ರೆಗ್ನೆನ್ಸಿಯಲ್ಲಿ ಹಾಸಿಗೆಯಿಂದ ಅಲ್ಲಾಡಲು ಆಗುತ್ತಿರಲಿಲ್ಲ. ಸುಮಾರು 35 ಕೆಜಿ ತೂಕ ಹೆಚ್ಚಾಗಿತ್ತು. ಇಡೀ ಪ್ರೆಗ್ನೆನ್ಸಿಯಲ್ಲಿ ನನಗೆ ಸ್ಪಾಟಿಂಗ್ ಆಗಿತ್ತು'
'ಮೊದಲ ಮಗು ಹುಟ್ಟಿದ ಮೇಲೂ ನಾನು ಮಾನಸಿಕವಾಗಿ ಕುಗ್ಗಿದೆ ಏಕೆಂದರೆ ಆಗ ನಾನು 105 ಕೆಜಿ ಆಗಿದ್ದೆ. ತುಂಬಾ ಜನರು ನನಗೆ ಟೀಕೆ ಮಾಡಿದ್ದು. ಅವರಿಗೆ ಉತ್ತರಿಸಲು ಆಗದೆ ಮನೆಯಿಂದ ಹೊರ ಬರುತ್ತಿರಲಿಲ್ಲ'
ಎರಡನೇ ಪ್ರೆಗ್ನೆನ್ಸಿ ಕಷ್ಟ ಇದ್ದ ಕಾರಣ ಸಮೀರ್ ಧೈರ್ಯ ಮಾಡಿ ಮುಂದುವರೆದಿದ್ದಾರೆ. ಈ ಸಮಯದಲ್ಲಿ ಪತಿ ಕೂಡ ಬೇಡ ಎಂದಿದ್ದರಂತೆ ಆದರೆ ಮಗಳು ಬೇಕೇ ಬೇಕು ಎಂದು ಹಠ ಮಾಡಿ ಮಗು ಮಾಡಿಕೊಂಡಿದ್ದಾರೆ.
ಜನರ ಟೀಕೆ, ಹೆಣ್ಣು ಮಕ್ಕಳ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಮೀರಾ ರೆಡ್ಡಿ ಪೋಸ್ಟ್ ಮಾಡಿದ್ದಾರೆ. ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಧೈರ್ಯವಾಗಿ ಪೋಸ್ಟ್ ಮಾಡುತ್ತಾರೆ.