ನಾಗ ಚೈತನ್ಯನ 'ಲವ್‌ಸ್ಟೋರಿ'ಗೆ ಸಮಂತಾ ಪ್ರತಿಕ್ರಿಯೆ..! ಹೆಚ್ಚಿದ ಗೊಂದಲ

Published : Sep 14, 2021, 10:06 AM ISTUpdated : Sep 14, 2021, 11:10 AM IST

ನಾಗಚೈತನ್ಯ ಹಾಗೂ ಸಮಂತಾ ಸಂಬಂಧ ಕುರಿತು ಹೆಚ್ಚಿದ ಕುತೂಹಲ ಡಿವೋರ್ಸ್ ಬಗ್ಗೆ ಅಭಿಮಾನಿಗಳ ಮಧ್ಯೆ ಚರ್ಚೆ ಗಂಡನ ಲವ್‌ಸ್ಟೋರಿ ಬಗ್ಗೆ ಸಮಂತಾ ಹೀಗಂದಿದ್ದೇಕೆ ?

PREV
17
ನಾಗ ಚೈತನ್ಯನ 'ಲವ್‌ಸ್ಟೋರಿ'ಗೆ ಸಮಂತಾ ಪ್ರತಿಕ್ರಿಯೆ..! ಹೆಚ್ಚಿದ ಗೊಂದಲ

ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಜೋಡಿಗೆ ಅಪಾರ ಅಭಿಮಾನಿಗಳಿದ್ದಾರೆ. ಬಾಲಿವುಡ್‌ಗೂ ಎಂಟ್ರಿ ಕೊಡ್ತಿರೋ ಈ ಜೋಡಿ ಈ ಸಖತ್ ಫೇಮಸ್.

27

ಆದರೆ ಕಳೆದ ಕೆಲವೊಂದು ದಿನಗಳಿಂದ ಇವರ ಡಿವೋರ್ಸ್ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಅಚ್ಚರಿ ಅಂದರೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಈ ಜೋಡಿ ಈ ವಿಚಾರವಾಗಿ ಮಾತ್ರ ಯಾವುದೇ ಮಾತು ಹೇಳಿಲ್ಲ.

37

ಈಗ ನಾಗ ಚೈತನ್ಯ ಅವರ ಮುಂಬರುವ ಸಿನಿಮಾ ಚಿತ್ರ ಲವ್ ಸ್ಟೋರಿ ಟ್ರೇಲರ್‌ಗೆ ಸಮಂತಾ ನೀಡಿದ ಪ್ರತಿಕ್ರಿಯೆ ಊಹಾಪೋಹಗಳಿಗೆ ಹೆಚ್ಚಿನ ಉತ್ತೇಜನ ನೀಡಿದೆ. ಸಾಮಾನ್ಯವಾಗಿ, ಸಮಂತಾ ನಾಗಾ ಅವರ ಪ್ರಾಜೆಕ್ಟ್‌ಗಳಿಗೆ ಗ್ರ್ಯಾಂಡ್ ಆಗಿ ಪ್ರತಿಕ್ರಿಯಿಸುತ್ತಾರೆ.

47

ಗಂಡನ ಹೊಗಳುವುದನ್ನು ನಿಲ್ಲಿಸುವುದಿಲ್ಲ ಸಮಂತಾ. ಆದರೆ ಈ ಸಮಯದಲ್ಲಿ ಅವಳು ತನ್ನ ಟ್ವೀಟ್‌ನಲ್ಲಿ ನಟನನ್ನು ಉಲ್ಲೇಖಿಸಿಲ್ಲ. ಚಿತ್ರದಲ್ಲಿ ನಾಗನ ಎದುರು ನಾಯಕಿಯಾಗಿ ನಟಿಸಿದ ತನ್ನ ಸ್ನೇಹಿತೆ ಸಾಯಿ ಪಲ್ಲವಿಯನ್ನು ಮಾತ್ರ ಟ್ಯಾಗ್ ಮಾಡಿದ್ದಾರೆ.

57

ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ, ನಾಗ ಮತ್ತು ಸಾಯಿ ಸೋಮವಾರ ಬಿಡುಗಡೆಯಾದ ಲವ್ ಸ್ಟೋರಿಯ ಥಿಯೇಟರ್ ಟ್ರೈಲರ್ ಲಿಂಕ್ ಹಂಚಿಕೊಳ್ಳುವ ಮೂಲಕ ತಮ್ಮ ಪ್ರೇಮ ಕಥೆಯ ಬಗ್ಗೆ ಅಭಿಮಾನಿಗಳಿಗೆ ಒಂದು ಲುಕ್ ಕೊಟ್ಟಿದ್ದಾರೆ. 

67

ಗ್ರೇಟ್ ಆಂಧ್ರದಲ್ಲಿ ಇತ್ತೀಚಿನ ವರದಿಯ ಪ್ರಕಾರ ಸಮಂತಾ ಮತ್ತು ನಾಗ ಸ್ವಲ್ಪ ಕಾಲ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈಗಾಗಲೇ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ ಎನ್ನಲಾಗಿದೆ.

77

ನ್ಯಾಯಾಲಯವು ಅದನ್ನು ನೀಡುವ ಮೊದಲು ಪರಸ್ಪರ ವಿಚ್ಛೇದನ ಪ್ರಕ್ರಿಯೆಯು ಕೆಲವು ನಿರ್ದಿಷ್ಟ ಅವಧಿಯನ್ನು ತೆಗೆದುಕೊಳ್ಳುವುದರಿಂದ, ದಂಪತಿಗಳು ನಡೆಯುತ್ತಿರುವ ವದಂತಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಹಾಗಾಗಿ ಈ ಜೋಡಿಯ ಮೌನ ವಿಚ್ಛೇದನೆ ವದಂತಿಗೆ ಇನ್ನಷ್ಟು ಪುಷ್ಟಿ ಕೊಟ್ಟಿದೆ

 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories