ದಮ್ ಮಾರೋ ದಮ್' ಸ್ಟೈಲ್‌ ಅಲ್ಲಿ ಪ್ರಿಯಾಂಕಾ ಫೋಟೋ ವೈರಲ್‌!

Suvarna News   | Asianet News
Published : Nov 09, 2021, 01:20 PM IST

ಪ್ರಿಯಾಂಕಾ ಚೋಪ್ರಾ  (Priyanka chopra) ವಿದೇಶದಲ್ಲಿ ನೆಲೆಸಿರಬಹುದು, ಆದರೆ ತಮ್ಮ ಭಾರತೀಯ ಸಂಸ್ಕೃತಿಯನ್ನು ಮರೆತಿಲ್ಲ. ಅವರು ಎಲ್ಲಾ ಹಬ್ಬ ಹರಿ ದಿನಗಳನ್ನು ಸಾಂಪ್ರದಯಿಕ ಉಡುಗೆ ತೊಟ್ಟು, ಆಚರಿಸುವುದನ್ನು ನೋಡುತ್ತೇವೆ. ದೇಸಿ ಗರ್ಲ್‌ ದೀಪಾವಳಿ (Diwali)  ಸಂಭ್ರಮ ಇನ್ನೂ ಕಡಿಮೆ ಆಗಿಲ್ಲ. ದೀಪಾವಳಿಯನ್ನು ತಮ್ಮ ಪತಿ ನಿಕ್ ಜೊನಾಸ್ (Nick Jonas) ಅವರೊಂದಿಗೆ ಹೊಸ ಮನೆಯಲ್ಲಿ ಆಚರಿಸಿದ ನಂತರ, ಅವರು ಕೆನಡಾದ ಹಾಸ್ಯನಟ ಲಿಲಿ ಸಿಂಗ್ ಅವರ ಪಾರ್ಟಿಯಲ್ಲಿಯೂ ಪಾಲ್ಗೊಂಡಿದ್ದರು. ಪಾರ್ಟಿಯಲ್ಲಿ ಪ್ರಿಯಾಂಕಾ ತೊಟ್ಟಿದ್ದ ಡ್ರೆಸ್ 'ದಮ್-ಮಾರೋ-ದಮ್' ಚಿತ್ರದ ಜೀನತ್ ಅಮಾನ್ ಅವರನ್ನು ನೆನಪಿಸುವಂತಿತ್ತು. ಪ್ರಿಯಾಂಕಾ ಚೋಪ್ರಾ ಅವರ ವಿದೇಶಿ ದೇಸಿ ಲುಕ್ ಫೋಟೋಗಳು ಇಲ್ಲಿವೆ.

PREV
17
ದಮ್ ಮಾರೋ ದಮ್' ಸ್ಟೈಲ್‌ ಅಲ್ಲಿ ಪ್ರಿಯಾಂಕಾ  ಫೋಟೋ ವೈರಲ್‌!

ಕೆನಡಾದ ಹಾಸ್ಯನಟ ಲಿಲ್ಲಿ ಸಿಂಗ್ (Lilly Sing) ಅವರ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಆರೆಂಜ್‌ ಕಲರ್‌ ಪ್ರಿಂಟೆಂಡ್‌ ಪಲಾಜೋ ಸೆಟ್ ಅನ್ನು ಧರಿಸಿದ್ದರು. ಅದಕ್ಕೆ ದುಪಟ್ಟಾ ಮ್ಯಾಚ್‌ ಮಾಡಿಕೊಂಡು ಧರಿಸಿದ್ದರು. ನಟಿಯ ಈ ರೆಟ್ರೋ ಲುಕ್ ಪಾರ್ಟಿಯಲ್ಲಿ ಎಲ್ಲರ ಗಮನ ಸೆಳೆಯಿತು.

27

ಪ್ರಿಯಾಂಕಾ ಚೋಪ್ರಾ ತಮ್ಮ ಲುಕ್‌ ಅನ್ನು ಪೂರ್ಣಗೊಳಿಸಲು ಕನ್ನಡಕವನ್ನು ಧರಿಸಿದ್ದರು. ದಮ್ ಮಾರೋ ದಮ್ ಸಿನಿಮಾದಲ್ಲಿ ಜೀನತ್ ಅಮಾನ್ ಇದೇ ರಿತಿಯ ಕನ್ನಡಕ ಧರಿಸಿದ್ದರು. ಪ್ರಿಯಾಂಕಾರ ಈ ಲುಕ್ ನೋಡಿದರೆ ಜೀನತ್ ಅವರನ್ನು ನೆನಪಿಸುತ್ತಿತು. ಪಿಸಿ ತಮ್ಮ ಲುಕ್ ಕಂಪ್ಲೀಟ್ ಮಾಡಲು ಕೊರಳಿಗೆ ಚೋಕರ್ ಹಾಕಿಕೊಂಡಿದ್ದರು.

37

ಆಕೆಯ ಈ ಕೂಲ್ ಲುಕ್ ಅನ್ನು ಅಭಿಮಾನಿಗಳು ತುಂಬಾ ಮೆಚ್ಚಿದ್ದಾರೆ. ಸಬ್ಯಸಾಚಿ ವಿನ್ಯಾಸ ಮಾಡಿದ  ಡ್ರೆಸ್‌ ಧರಿಸಿರುವ ಪ್ರಿಯಾಂಕಾ ರೆಟ್ರೊ ಲುಕ್‌ನಲ್ಲಿ ಸಖತ್‌ ವೈರಲ್‌ ಆಗಿದೆ. ಈ ಸಮಯದ ಫೋಟೋಗಳನ್ನು ನಟಿ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ  ಫೋಟೋ ಇದುವರೆಗೆ ಲಕ್ಷಾಂತರ ಲೈಕ್‌ಗಳನ್ನು ಪಡೆದುಕೊಂಡಿದೆ.

47

ಇದಕ್ಕೂ ಮುನ್ನ ಅವರು ತಮ್ಮ ಹೊಸ ಮನೆಯಲ್ಲಿ ದೀಪಾವಳಿ ಸೆಲೆಬ್ರಷನ್‌ನ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆ ಸಮಯದ ಫೋಟೋಗಳು ಭಾರೀ ಲೈಕ್‌ ಪಡೆದಿವೆ. ಈ ಬಾರಿ ಪ್ರಿಯಾಂಕಾ ಚೋಪ್ರಾ ತಮ್ಮ ಹೊಸ ಮನೆಯಲ್ಲಿ ದೀಪಾವಳಿ ಆಚರಿಸಿದ್ದಾರೆ. ಅವರ ಅನೇಕ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.

57
Priyanka chopra

ಹಾಗೆಯೇ ದೀಪಾವಳಿಯ ರಾತ್ರಿ, ಪ್ರಿಯಾಂಕಾ ಚೋಪ್ರಾ ಅವರು ಪತಿ ನಿಕ್ ಜೋನಾಸ್ ಜೊತೆ ಇಂಡಿಯನ್‌ ಎಥಿನಿಕ್‌ ಲುಕ್‌ನಲ್ಲಿ ಲಕ್ಷ್ಮಿ ಪೂಜೆ ಮಾಡಿದರು. ಪ್ರಿಯಾಂಕಾ ಚೋಪ್ರಾ ಹಳದಿ ಬಣ್ಣದ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು ಹಾಗೂ ಈ ದಂಪತಿ ಜೊತೆಯಾಗಿ ಆರತಿ ಬೆಳಗಿ ದೀಪ ಹಚ್ಚಿದರು.

67

ಪ್ರಿಯಾಂಕಾ ಇತ್ತೀಚೆಗೆ ಸ್ಪೇನ್‌ನಲ್ಲಿ 'ದಿ ರುಸ್ಸೋ ಬ್ರದರ್ಸ್' ನಿರ್ಮಾಣದ 'ಸಿಟಾಡೆಲ್' ಎಂಬ ಸ್ಪೈ ಸೀರಿಸ್‌ ಶೂಟಿಂಗ್‌ನಲ್ಲಿ ತೊಡಗಿದ್ದರು. ಈ ಸರಣಿಯಲ್ಲಿ ಗೇಮ್ ಆಫ್ ಥ್ರೋನ್ಸ್‌ನ ರಿಚರ್ಡ್ ಮ್ಯಾಡೆನ್ ಕೂಡ ನಟಿಸಿದ್ದಾರೆ.

 

77

ವಿದೇಶಿ ಪ್ರಾಜೆಕ್ಟ್‌ಗಳಲ್ಲದೆ, ಪ್ರಿಯಾಂಕಾ ಕೈಯಲ್ಲಿ ಬಾಲಿವುಡ್‌ ಪ್ರಾಜೆಕ್ಟ್ ಕೂಡ ಇದೆ. ಅವರು ಫರ್ಹಾನ್ ಅಖ್ತರ್ ಅವರ ನಿರ್ದೇಶನದ ಝೀ ಲೆ ಜರಾದಲ್ಲಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ

Read more Photos on
click me!

Recommended Stories