Taapsee Pannu ಪ್ರೊಡಕ್ಷನ್ ಮೂಲಕ Samantha ಬಾಲಿವುಡ್ ಎಂಟ್ರಿ

Published : Nov 02, 2021, 01:11 PM ISTUpdated : Nov 02, 2021, 03:56 PM IST

ತಾಪ್ಸಿ ಪನ್ನು (Taapsee Pannu) ಪ್ರೊಡಕ್ಷನ್ ಹೌಸ್ ಮೂಲಕ ಸಮಂತಾ ಬಾಲಿವುಡ್(Bollywood) ಎಂಟ್ರಿ ಸೌತ್ ಚೆಲುವೆಯ ಬಾಲಿವುಡ್ ಡಿಬಟ್ ಸಿನಿಮಾ ಯಾವುದು ?

PREV
16
Taapsee Pannu ಪ್ರೊಡಕ್ಷನ್ ಮೂಲಕ Samantha ಬಾಲಿವುಡ್ ಎಂಟ್ರಿ

ನಾಗ ಚೈತನ್ಯ ಜೊತೆಗೆ ವಿಚ್ಚೇದನೆ ಘೋಷಿಸಿದ ನಂತರ ಸಮಂತಾ ರುತ್ ಪ್ರಭು(Samanath Ruth Prabhu) ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ವಿಚ್ಛೇದನದ ನಂತರ ಅವರು ಎರಡು ದ್ವಿಭಾಷಾ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ನಟಿ ಬಾಲಿವುಡ್‌ಗೆ(Bollywood) ಪಾದಾರ್ಪಣೆ ಮಾಡುವ ಮತ್ತೊಂದು ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

26

ಮೂಲಗಳ ಪ್ರಕಾರ ಅವರು ತಾಪ್ಸಿ ಪನ್ನು ಅವರ ನಿರ್ಮಾಣ ಸಂಸ್ಥೆಯೊಂದಿಗೆ ಸಿನಿಮಾ ಮಾಡಲು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ತಾಪ್ಸಿ ಅವರ ಔಟ್‌ಸೈಡರ್ಸ್ ಫಿಲ್ಮ್ಸ್ ಮಹಿಳಾ ಕೇಂದ್ರಿತ ಥ್ರಿಲ್ಲರ್ ಸಿನಿಮಾ ನಿರ್ಮಿಸಲು ಯೋಚಿಸುತ್ತಿದ್ದು ಸಮಂತಾರನ್ನು ನಾಯಕಿಯಾಗಿ ತೆಗೆದುಕೊಳ್ಳಲು ಪ್ಲಾನ್ ಮಾಡುತ್ತಿದೆ ಎನ್ನಲಾಗಿದೆ.

36

ಈ ಪ್ರಾಜೆಕ್ಟ್ ಬಗ್ಗೆ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ. ಗುಣಶೇಖರ್ ಅವರ ಶಾಕುಂತಲಂ ಮತ್ತು ವಿಘ್ನೇಶ್ ಶಿವನ್ ಅವರ ಕಾತುವಾಕುಲ ರಂಡು ಕಾದಲ್ ನಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.

46

ಶಾಕುಂತಲಂ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಸಮಂತಾ ರುತ್ ಪ್ರಭು ಸಾಕಷ್ಟು ಟ್ರಾವೆಲ್ ಮಾಡುತ್ತಿದ್ದಾರೆ.

56

ಚಾರ್‌ಧಮ್ ಯಾತ್ರೆಯ ನಂತರ ದುಬೈಗೆ ತೆರಳಿದ ನಟಿ ಸ್ನೇಹಿತರ ಜೊತೆ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆ. ತಮ್ಮ ಪ್ರವಾಸದ ಫೋಟೊ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

 

66

ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ನಾಗ ಚೈತನ್ಯ ಅವರೊಂದಿಗಿನ ಸುಮಾರು 85 ಫೋಟೋಗಳನ್ನು ಅಳಿಸಿದ್ದಾರೆ. ಅಕ್ಟೋಬರ್ 2 ರಂದು, ಸಮಂತಾ ಮತ್ತು ನಾಗ ಚೈತನ್ಯ ಅಧಿಕೃತ ಹೇಳಿಕೆಗಳ ಮೂಲಕ ತಮ್ಮ ವಿಚ್ಚೇದನೆ ಎನೌನ್ಸ್ ಮಾಡಿದ್ದರು.

Read more Photos on
click me!

Recommended Stories