ನಿರ್ದೇಶಕನ ಜೊತೆಗಿನ ಡೇಟಿಂಗ್ ಖಚಿತಪಡಿಸಿದ್ರಾ ಸಮಂತಾ? ಫೋಟೋ ಬಹಿರಂಗಪಡಿಸಿದ ನಟಿ

Published : Feb 02, 2025, 03:15 PM IST

ಕಳೆದ ಕೆಲ ದಿನಗಳಿಂದ ಸಮಂತಾ ರುಥ್ ಪ್ರಭು, ನಿರ್ದೇಶಕನ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇದೀಗ ಖುದ್ದು ಸಮಂತಾ ಈ ಡೇಟಿಂಗ್ ವಿಚಾರ ಖಚಿತಪಡಿಸಿದ್ರಾ? ಕಾರಣ ಸದ್ಯ ಸಮಂತಾ ಪೋಸ್ಟ್ ಮಾಡಿದ ಫೋಟೋಸ್ ಹಲವು ಕತೆ ಹೇಳುತ್ತಿದೆ.  

PREV
17
ನಿರ್ದೇಶಕನ ಜೊತೆಗಿನ ಡೇಟಿಂಗ್ ಖಚಿತಪಡಿಸಿದ್ರಾ ಸಮಂತಾ? ಫೋಟೋ ಬಹಿರಂಗಪಡಿಸಿದ ನಟಿ

ನಟಿ ಸಮಂತಾ ರುಥ್ ಪ್ರಭು ಮದುವೆ, ರಿಲೇಶನ್‌ಶಿಪ್ ಕುರತು ಹಲವು ಗಾಸಿಪ್ ಹರಿದಾಡಿದೆ. ಆದರೆ ಇದರ ಬಗ್ಗೆ ಸಮಂತಾ ತಲೆಕೆಡಿಸಿಕೊಂಡಿಲ್ಲ, ಪ್ರತಿಕ್ರಿಯೆ ಕೂಡ ನೀಡಿಲ್ಲ. ಆದರೆ ಇತ್ತೀಚೆಗ ನಟಿ ಸಮಂತಾ ಹೆಸರು ಖ್ಯಾತ ನಿರ್ದೇಶಕ ರಾಜ್ ನಿಡಿಮೂರು ಜೊತೆ ಹಲವು ಬಾರಿ ಥಳುಕುಹಾಕಿಕೊಂಡಿದೆ. ಆದರೆ ಇದೀಗ ಖುದ್ದು ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕನ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. 

27

ನಟ ನಾಗ ಚೈತನ್ಯ ಜೊತೆ ಸಮಂತಾ ವಿಚ್ಛೇದನ ಪಡೆದು ಸುಮಾರು ನಾಲ್ಕು ವರ್ಷಗಳು ಉರುಳುತ್ತಿದೆ.  2021ರ ಅಕ್ಟೋಬರ್‌ನಲ್ಲಿ ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನ ಪಡೆಯುತ್ತಿರುವುದಾಗಿ ಸಮಂತಾ ಮತ್ತು ನಾಗ ಚೈತನ್ಯ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿದ್ದರು. ಅಂದಿನಿಂದ ಸಮಂತಾ ಸಿಂಗಲ್ ಆಗಿದ್ದಾರೆ. ನಟಿ ಶೋಭಿತಾ ಧೂಳಿಪಾಳ ಜೊತೆ ಲವ್ವಿ-ಡವ್ವಿ ಗುಸುಗುಸು ಎದುರಿಸಿದ್ದ ನಾಗ ಚೈತನ್ಯ ಇತ್ತೀಚೆಗೆ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ಸಮಂತಾ ಕೂಡ ಡೇಟಿಂಗ್‌ನಲ್ಲಿದ್ದಾರೆ ಅನ್ನೋದು ಸಮಂತಾ ಬಹಿರಂಗಪಡಿಸಿದ ಫೋಟೋಗಳು ಹೇಳುತ್ತಿದೆ.

37

ಇತ್ತೀಚೆಗೆ ಆಯೋಜನೆಗೊಂಡ ಪಿಕ್ಲೆಬಾಲ್ ಟೂರ್ನಮೆಂಟ್‌ಗೆ ಸಮಂತಾ ಹಾಜರಾಗಿದ್ದರು. ಆದರೆ ಈ ಟೂರ್ನಮೆಂಟ್‌ಗೆ ನಟಿ ಸಮಂತಾ ನಿರ್ದೇಶಕ ರಾಜ್ ನಿಡಿಮೂರು ಜೊತೆ ಆಗಮಿಸಿದ್ದರು. ನಿರ್ದೇಶಕನ ಜೊತೆ ಪಂದ್ಯಗಳನ್ನು ವೀಕ್ಷಿಸಿದ್ದರು. ಈ ಕುರಿತು ಫೋಟೋಗಳನ್ನು ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. 

47

ಚೆನ್ನೈ ಸೂಪರ್ ಚಾಂಪ್ಸ್ ತಂಡದ ಮಾಲಕಿಯಾಗಿರುವ ನಟಿ ಸಮಂತಾ ಖುದ್ದು ಪಂದ್ಯ ವೀಕ್ಷಿಸಲು ಆಗಮಿಸಿದ್ದರು. ಈ ವೇಳೆ ರಾಜ್ ಕೂಡ ಸಮಂತಾ ಜೊತೆ ಆಗಮಿಸಿದ್ದಾರೆ. ಇಬ್ಬರು ತಂಡದ ಜರ್ಸಿ ತೊಟ್ಟು ಟೂರ್ನಮೆಂಟ್‌ಗೆ ಆಗಮಿಸಿದ್ದರು. ಸಮಂತಾ ಜೊತೆ ಹೆಜ್ಜೆ ಹಾಕುತ್ತಿರುವ ಫೋಟೋಳು ಭಾರಿ ಸದ್ದು ಮಾಡುತ್ತಿದೆ.

57

ಸಮಂತಾ ಪಂದ್ಯದ ನಡುವೆ ಆಟಗಾರರನ್ನು ಹುರಿದುಂಬಿಸುತ್ತಿದ್ದರೆ, ನಿರ್ದೇಶಕ ರಾಜ್ ಸಮಂತಾ ಪಕ್ಕದಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿರುವ ಚಿತ್ರಗಳನ್ನು ಸಮಂತಾ ಬಹಿರಂಗಪಡಿಸಿದ್ದಾರೆ. ತಂಡದ ಆಟದಾರರ ಜೊತೆಗೂ ಸಮಂತಾ ಹಾಗೂ ರಾಜ್ ಕಾಣಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ ಈ ಜೋಡಿ ಅಭಿಮಾನಿಗಳ ಸೆಂಟರ್ ಆಫ್ ಅಟ್ರಾಕ್ಷನ್ ಆಗಿತ್ತು.

67

ಪ್ರಾಜೆಕ್ಟ್‌ಗಳ ಭಾಗವಾಗಿ ರಾಜ್ ಮತ್ತು ಸಮಂತಾ ಕೆಲಕಾಲದಿಂದ ಒಟ್ಟಿಗೆ ಪ್ರಯಾಣಿಸುತ್ತಿದ್ದಾರೆ. ಈ ಪರಿಚಯ ಪ್ರೇಮಕ್ಕೆ ದಾರಿ ಮಾಡಿಕೊಟ್ಟಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಪಿಕ್ಲೆಬಾಲ್ ಟೂರ್ನಿಯಲ್ಲಿ ಸಮಂತಾ ಹಾಗೂ ನಿರ್ದೇಶಕ ರಾಜ್ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಈ ಫೋಟೋಗಳನ್ನು ಖುದ್ದು ಸಮಂತ ಬಹಿರಂಗಪಡಿಸುವ ಮೂಲಕ ಡೇಟಿಂಗ್ ಖಚಿತಪಡಿಸಿದ್ರಾ ಅನ್ನೋ ಪ್ರಶ್ನಯನ್ನು ಅಭಿಮಾನಿಗಳು ಹುಟ್ಟು ಹಾಕಿದ್ದಾರೆ. 

77

ಸಮಂತಾ ಇತ್ತೀಚೆಗೆ ನಿರ್ಮಾಪಕಿಯಾಗಿದ್ದಾರೆ. ಟ್ರಾಲಾಸ್ ಮೂವಿಂಗ್ ಪಿಕ್ಚರ್ಸ್ ಎಂಬ ಬ್ಯಾನರ್ ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಮೊದಲ ಚಿತ್ರ 'ಮಾ ಇಂಟಿ ಬಂಗಾರಂ'. ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಅವರ ಲುಕ್ ಗಮನ ಸೆಳೆದಿದೆ. ರಾಜ್ ಜೊತೆಗಿನ ಲವ್ವಿ-ಡವ್ವಿ ಗುಸುಗುಸುಗಳ ಬಗ್ಗೆ ಸಮಂತಾ ಏನನ್ನೂ ಹೇಳಿಲ್ಲ. ಹೀಗಾಗಿ ಈ ಕುತೂಹಲ ಮುಂದುವರೆದಿದೆ.

Read more Photos on
click me!

Recommended Stories