ರಾಕೇಶ್ ಬಪತ್ ಅವರು ಶಮಿತಾ ಶೆಟ್ಟಿಯ ಸಹೋದರಿ ಶಿಲ್ಪಾ ಶೆಟ್ಟಿಯೊಂದಿಗೆ ಏನಾದರೂ ಮಾತನಾಡಿದ್ದಾರೆಯೇ ಎಂದು ಕೇಳಿದಾಗ ಈ ಬಗ್ಗೆ ವಿಚಯ ಬಹಿರಂಗಪಡಿಸಿದ್ದಾರೆ. ಬಿಗ್ ಬಾಸ್ ಒಟಿಟಿ ಸಮಯದಲ್ಲಿ ಕಿರುತೆರೆ ನಟಿ ಶಮಿತಾಗೆ ಹತ್ತಿರವಾಗಿದ್ದರು ರಾಕೇಶ್. ಸೀಸನ್ ಮುಗಿದ ನಂತರ ಅವರು ಡೇಟಿಂಗ್ ಆರಂಭಿಸಿದ್ದಾರೆ.
28
ಬಿಗ್ ಬಾಸ್ ಒಟಿಟಿಯ ಎಪಿಸೋಡ್‌ನಲ್ಲಿ ಶಮಿತಾ ತಾಯಿ ಸುನಂದಾ ಶೆಟ್ಟಿ ಅವರಿಂದ ರಾಕೇಶ್ ಆಶೀರ್ವಾದ ಪಡೆದರೆ, ಶಿಲ್ಪಾ ತಮ್ಮ ತಂಗಿಯ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.
38
ರಾಕೇಶ್ ಅವರಲ್ಲಿ ಇತ್ತೀಚೆಗೆ ಸುನಂದಾ ಮತ್ತು ಶಿಲ್ಪಾ ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕಿದೆಯೇ ಎಂದು ಕೇಳಲಾಯಿತು. ನಟ ನಾಚಿಕೊಂಡು ಆ ವಿಚಾರಕ್ಕೆ ಹೋಗಬೇಡಿ ಎಂದು ಹೇಳುವ ಮೂಲಕ ಪ್ರಶ್ನೆಯನ್ನು ತಪ್ಪಿಸಲು ಪ್ರಯತ್ನಿಸಿದ್ದಾರೆ.
48
ಅವರು ಒಳ್ಳೆಯ ಜನರು. ನಾನು ಖಚಿತವಾಗಿ ಅವರೊಂದಿಗೆ ಮಾತನಾಡಿದ್ದೇನೆ. ಅಂತಹ ಉತ್ತಮ ಕುಟುಂಬವನ್ನು ಹೊಂದಲು ಶಮಿತಾ ಅದೃಷ್ಟವಂತೆ ಎಂದು ಹೇಳಿದ್ದಾರೆ ರಾಕೇಶ್.
58
ಶಮಿತಾ ತನ್ನ ಕುಟುಂಬವು ತನ್ನ ಹಾಗೂ ಬಾಯ್‌ಫ್ರೆಂಡ್ ಬಗ್ಗೆ ಸಂತೋಷಪಟ್ಟಿದೆ ಎಂದು ಹೇಳಿದ್ದರು. ಅವರು ಸಂತೋಷಪಟ್ಟಿದ್ದಾರೆ. ನಾನು ಬಹಳ ಸಮಯದ ನಂತರ ರಿಲೇಷನ್‌ಶಿಪ್‌ನಲ್ಲಿದ್ದೇನೆ. ಅವರು ನನ್ನನ್ನು ಖುಷಿಯಾಗಿ ನೋಡಲು ಬಯಸುತ್ತಾರೆ. ಅವರು ಸಂತೋಷವಾಗಿರುವುದನ್ನು ಲೆಕ್ಕಿಸುವುದಿಲ್ಲ ಎಂದಿದ್ದರು ಶಮಿತಾ.
68
ಬಿಗ್ ಬಾಸ್ ಒಟಿಟಿಯಲ್ಲಿ ಎರಡನೇ ರನ್ನರ್ ಅಪ್ ಆದ ನಂತರ ಶಮಿತಾ ಬಿಗ್ ಬಾಸ್ 15 ಕ್ಕೆ ಹೋಗಲಿದ್ದಾರೆ. ಸಲ್ಮಾನ್ ಖಾನ್ ನಡೆಸಿಕೊಡುವ ರಿಯಾಲಿಟಿ ಶೋ ಶನಿವಾರ ಆರಂಭವಾಗಲಿದೆ.