'ಸೆನ್ಸ್ ಇಲ್ಲವೆ'  ವರದಿಗಾರನ ಮೇಲೆ ಸಮಂತಾ ಗರಂ!

First Published | Sep 20, 2021, 7:03 PM IST

ಹೈದರಾಬಾದ್(ಸೆ. 20)  ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ಸಂಸಾರ ಸರಿ ಇಲ್ಲ ಎಂಬ ವದಂತಿಗೆ ಕೊನೆ ಇಲ್ಲ. ನಾಗಚೈತನ್ಯ ತಮ್ಮ ಮುಂದಿನ ಸಿನಿಮಾದ  ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಗ ಸಮಂತಾ ಅದನ್ನು ಮೆಚ್ಚಿದ್ದರು. ಇಬ್ಬರ ನಡುವೆ ಎಲ್ಲವೂ ಸರಿ ಇದೆ ಎನ್ನುವ ಮಾತೇ ವ್ಯಕ್ತವಾಗಿತ್ತು.

ಇದೇ ವಿಚಾರವನ್ನು ಕೇಳಿದ  ವರದಿಗಾರನ ಮೇಲೆ ಸಮಂತಾ ಕೆಂಡವಾಗಿದ್ದಾರೆ.  ತಿರುಮಲ ತಿರುಪತಿಗೆ ಭೇಟಿ ನೀಡಿದ್ದ ನಟಿ ಹಿಂದಿರುಗಿ ಹೋಗುವಾಗ ವರದಿಗಾರ ಪ್ರಶ್ನೆ ಕೇಳಿದ್ದಾನೆ.

'ನಾನು ದೇವಾಲಯಕ್ಕೆ ದೇವರ ದರ್ಶನಕ್ಕೆ ಬಂದಿದ್ದೇನೆ.. ನಿಮಗೆ ಏನು ಕೇಳಬೇಕು ಎನ್ನುವ ಸೆನ್ಸ್ ಇಲ್ಲವೇ' ಎಂದು ಸಿಟಟಿನಿಂದಳೇ ಉತ್ತರಿಸಿದ್ದಾರೆ.   ದೇವಾಲಯದಿಂದ ತೆರಳುವ ವೇಳೆ ಪ್ರಶ್ನೆ ಕೇಳಿದ್ದ ವರದಿಗಾರನಿಗೆ ಖಾರವಾಗಿಯೇ ಉತ್ತರಿಸಿದ್ದಾರೆ.

Tap to resize

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಸಮಂತಾ  ಅಕ್ಕಿನೇನಿ ಎಂಬ ಹೆಸರನ್ನು ತೆಗೆದು ಹಾಕಿದ ನಂತರ ಡಿವೋರ್ಸ್ ವದಂತಿಗೆ ಸಾಕಷ್ಟು ರೆಕ್ಕೆಗಳು ಬಂದಿದ್ದವು.

ಸಮಂತಾ ಮತ್ತು ನಾಗಚೈತನ್ಯ ಟ್ವಿಟರ್ ನಲ್ಲಿ ಪರಸ್ಪರ ಮಾತನಾಡಿಕೊಂಡಿದ್ದರು. ಒಬ್ಬರಿಗೊಬ್ಬರು ಧನ್ಯವಾದ ಹೇಳಿಕೊಂಡಿದ್ದರು.  ತಮ್ಮ ಮುಂದಿನ ಸಿನಿಮಾ ಲವ್ ಸ್ಟೋರಿ ವಿಚಾರವನ್ನು ನಾಗ ಚೈತನ್ಯ ಹಂಚಿಕೊಂಡಿದ್ದರು. 

ಈ ಕಾರಣದಿಂದ ಇಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂದು  ಭಾವಿಸಲಾಗಿತ್ತು. ಕಳೆದ ಲಾಕ್ ಡೌನ್ ಸಮಯದಲ್ಲಿ ಇಬ್ಬರು ಮಾಲ್ಡೀವ್ಸ್ ನಲ್ಲಿ ಜತೆಯಾಗಿ ಕಾಲ ಕಳೆದಿದ್ದರು. 

Latest Videos

click me!