ದೀಪಿಕಾ - ಕರೀನಾ : ಬಾಲಿವುಡ್‌ ಸ್ಟಾರ್ಸ್‌ ಎಂಡೊರ್ಸ್ಮೆಂಟ್‌ನಿಂದ ಸಂಪಾದನೆ ಎಷ್ಟು?

First Published | Sep 20, 2021, 5:28 PM IST

ಸಿನಿಮಾ ಸ್ಟಾರ್ಸ್‌ ಸಿನಿಮಾದ ಹೊರತಾಗಿ ಜಾಹೀರಾತು ಮತ್ತು ಅನುಮೋದನೆಗಳಿಂದ ಸಹ ಹಣ ಗಳಿಸುವುದು ಎಲ್ಲರಿಗೂ ತಿಳಿದೇ ಇದೆ. ಅದೇ ರೀತಿ ಬಾಲಿವುಡ್‌ನ ಕೆಲವು ಸೆಲೆಬ್ರೆಟಿಗಳು ಎಂಡೊರ್ಸ್ಮೆಂಟ್‌ಗಳಿಂದ ಸಂಪಾದಿಸುವ ಮೊತ್ತ ಕೇಳಿದರೆ ನಿಮಗೆ ಶಾಕ್‌ ಆಗುತ್ತದೆ. ಇಲ್ಲಿದೆ ಮಾಹಿತಿ.

ದೀಪಿಕಾ ಪಡುಕೋಣೆಯಿಂದ ಹಿಡಿದು ಸಲ್ಮಾನ್ ಖಾನ್, ಕರೀನಾ ಕಪೂರ್  ಮುಂತಾದ ಬಾಲಿವುಡ್‌ನ ಟಾಪ್‌ ಸ್ಟಾರ್ಸ್‌ ಹಿಟ್ ಚಿತ್ರಗಳಲ್ಲದೆ,  ಅವರ ಬ್ಯಾಂಕ್ ಬ್ಯಾಲೆನ್ಸ್  ಹೆಚ್ಚಿಸುವ ಅನೇಕ ಜಾಹೀರಾತುಗಳು, ಪ್ರದರ್ಶನಗಳು, ಸೀರಿಸ್‌ಗಳು, ರೆಡ್ ಕಾರ್ಪೆಟ್ ಇವೆಂಟ್‌ ಇತ್ಯಾದಿಗಳನ್ನು ಮಾಡುತ್ತಾರೆ. ಬಾಲಿವುಡ್‌ ಸ್ಟಾರ್ಸ್‌ ಎಂಡೊರ್ಸ್ಮೆಂಟ್‌ ಚಾರ್ಜ್‌ ಎಷ್ಟು ನೋಡಿ. 

deepika padukone

ದೀಪಿಕಾ ಪಡುಕೋಣೆ:
ದೀಪಿಕಾ ಪಡುಕೋಣೆ  ಬ್ರ್ಯಾಂಡ್‌ ಎಂಡೋರ್ಸ್‌ಮೆಂಟ್‌ಗಳಿಗೆ  7 ಕೋಟಿಯಿಂದ 10 ಕೋಟಿ ರೂಗಳವರೆಗೆ ಚಾರ್ಜ್‌ ಮಾಡುತ್ತಾರಂತೆ. ದೀಪಿಕಾ ಶಾರುಖ್ ಖಾನ್ ಜೊತೆ ಪಠಾಣ್‌ ಸಿನಿಮಾದಲ್ಲಿ ಹಾಗೂ ಶಕುನ್ ಬಾತ್ರಾ ಅವರ ಮುಂದಿನ ಸಿನಿಮಾದಲ್ಲಿ ಅನನ್ಯಾ ಪಾಂಡೆ ಮತ್ತು ಸಿದ್ದಾಂತ್ ಚತುರ್ವೇದಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಅಮಿತಾಬ್ ಬಚ್ಚನ್ ಜೊತೆಗೆ   ದಿ ಇಂಟರ್ನ್‌ನ ಹಿಂದಿ ರೀಮೇಕ್ ಮತ್ತು ಫೈಟರ್ ಸಿನಿಮಾ  ಹೃತಿಕ್ ರೋಷನ್ ಜೊತೆ ಮಾಡಲಿದ್ದಾರೆ. ದೀಪಿಕಾ ತನ್ನ ಎರಡನೇ ಹಾಲಿವುಡ್ ಚಿತ್ರ STX ಫಿಲ್ಮ್ಸ್ ಮತ್ತು ಟೆಂಪಲ್ ಹಿಲ್‌ಗಾಗಿ ಸಹಿ ಹಾಕಿದ್ದಾರೆ. 

Tap to resize

ಶಾರುಖ್ ಖಾನ್:
ಬಾಲಿವುಡ್‌ನ ಕಿಂಗ್‌ ಖಾನ್ ಶಾರುಖ್  ಯಾವುದೇ ಬ್ರಾಂಡ್ ಅನುಮೋದನೆಯಿಂದ 4 ಕೋಟಿಯಿಂದ 10 ಕೋಟಿ ರೂಪಾಯಿಗಳವರೆಗೆ ಸಂಪಾದಿಸುತ್ತಾರೆ. ಶಾರುಖ್ ಪಠಾಣ್‌ನಲ್ಲಿ ದೀಪಿಕಾ ಪಡುಕೋಣೆ ಜೊತೆ ಮತ್ತು ಅಟ್ಲಿ ಅವರ ಮುಂದಿನ ಸಿನಿಮಾದಲ್ಲಿ ನಯನತಾರಾ ಮತ್ತು ರಾಜ್ ಕುಮಾರ್ ಹಿರಾನಿ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ಸಲ್ಮಾನ್ ಖಾನ್ :
ಹಲವು ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಒಂದು ಜಾಹೀರಾತಿಗೆ 4 ಕೋಟಿಯಿಂದ 10 ಕೋಟಿವರೆಗೆ ಡಿಮ್ಯಾಂಡ್‌ ಮಾಡುತ್ತಾರೆ. ಅವರು ಟರ್ಕಿಯಲ್ಲಿ ಕತ್ರಿನಾ ಕೈಫ್ ಜೊತೆ ಟೈಗರ್ 3 ಚಿತ್ರೀಕರಣದಲ್ಲಿದ್ದರು, ಮತ್ತು ಈಗ ಇಬ್ಬರೂ  ಆಸ್ಟ್ರಿಯಾದಲ್ಲಿ ಶೂಟಿಂಗ್‌ ಮಾಡುತ್ತಿದ್ದಾರೆ. 

ಪ್ರಿಯಾಂಕಾ ಚೋಪ್ರಾ:
ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಅನುಮೋದನೆಗಾಗಿ 4-10 ಕೋಟಿ ರೂ ಚಾರ್ಜ್‌ ಮಾಡುತ್ತಾರೆ. ಪ್ರಿಯಾಂಕಾ ಹಾಲಿವುಡ್ ನಲ್ಲಿ  ಬ್ಯುಸಿ ಇದ್ದಾರೆ. ನಟಿ ಕೀನು ರೀವ್ಸ್ ಜೊತೆಯಲ್ಲಿ ತನ್ನ ಚಿತ್ರ ದಿ ಮ್ಯಾಟ್ರಿಕ್ಸ್  ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.
 

ಅಮಿತಾಬ್ ಬಚ್ಚನ್:
ಬಿಗ್‌ ಬಿ ಪ್ರತಿ ಜಾಹೀರಾತಿಗೆ 3 ರಿಂದ 8 ಕೋಟಿ ರೂ ಪಡೆಯುತ್ತಾರೆ. ಪಿಕು ನಟ ಪ್ರಸ್ತುತ ಕೌನ್ ಬನೇಗಾ ಕರೋಡ್ಪತಿ ಸೀಸನ್ 13 ರಲ್ಲಿ ಬ್ಯುಸಿಯಾಗಿದ್ದಾರೆ. ಅವರು ಕೊನೆಯದಾಗಿ ಚೆಹ್ರೆ ಸಿನಿಮಾದಲ್ಲಿ ಕಾಣಿಸಿಕೊಂಡರು, ಮತ್ತು ಅವರು ಮುಂದಿನ ದಿನಗಳಲ್ಲಿ  ಬ್ರಹ್ಮಾಸ್ತ್ರ, ಗುಡ್‌ಬೈ ಮತ್ತು ದಿ ಇಂಟರ್ನ್ ಸಿನಿಮಾಗಳಲ್ಲಿ ಕೆಲಸ ಮಾಡಲಿದ್ದಾರೆ.

ಕತ್ರಿನಾ ಕೈಫ್:
ಕತ್ರೀನಾ ಕೈಫ್‌  ಅನುಮೋದನೆಗಳಿಂದ  5 ರಿಂದ 10 ಕೋಟಿ ರೂ ಸಂಪಾದಿಸುತ್ತಾರೆ. ಪ್ರಸ್ತುತ ವಿದೇಶದಲ್ಲಿ ಸಲ್ಮಾನ್ ಖಾನ್ ಜೊತೆ ಟೈಗರ್ 3 ಚಿತ್ರೀಕರಣದಲ್ಲಿ ಕತ್ರಿನಾ ಬ್ಯುಸಿಯಾಗಿದ್ದಾರೆ. ಅದಲ್ಲದೆ, ಅವರು ಅಕ್ಷಯ್ ಕುಮಾರ್ ಮತ್ತು ರೋಹಿತ್ ಶೆಟ್ಟಿ ಜೊತೆ ಸೂರ್ಯವಂಶಿ ಬಿಡುಗಡೆಗಾಗಿ ಕಾಯುತ್ತಿದ್ದಾರೆ. 

ಅಕ್ಷಯ್ ಕುಮಾರ್:
ಅಕ್ಷಯ್‌ ಕುಮಾರ್‌ ಒಂದು ಅನುಮೋದನೆಯಿಂದ ಸಂಪಾದಿಸುವ ಹಣ  ರೂ. 5 ಕೋಟಿಯಿಂದ 10 ಕೋಟಿ ರೂಗಳು. ಅವರು ಪ್ರಸ್ತುತ ಅವರ ಪತ್ನಿ ಟ್ವಿಂಕಲ್ ಖನ್ನಾ, ಮಗ ಆರವ್ ಮತ್ತು ಮಗಳು ನಿತಾರಾ ಅವರೊಂದಿಗೆ ಲಂಡನ್‌ನಲ್ಲಿದ್ದಾರೆ.

ಕರೀನಾ ಕಪೂರ್:
ಇಬ್ಬರು ಕ್ಯೂಟ್‌ ಗಂಡು ಮಕ್ಕಳ ತಾಯಿ ಕರೀನಾ ಕಪೂರ್ ಖಾನ್ ಬ್ರ್ಯಾಂಡ್‌ ಎಂಡೋರ್ಸ್‌ಮೆಂಟ್‌ಗಳಿಗೆ  ರೂ. 3 ಕೋಟಿಯಿಂದ ರೂ. 4 ಕೋಟಿ ರೂ ಚಾರ್ಜ್‌ ಮಾಡುತ್ತಾರೆ. ಕೆಲವು ದಿನಗಳ ಹಿಂದೆ ಮುಂಬೈನಲ್ಲಿ  ಆಮೀರ್ ಖಾನ್ ಜೊತೆ ತನ್ನ ಮುಂದಿನ ಚಿತ್ರ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣದಲ್ಲಿ ಕಾಣಿಸಿಕೊಂಡಿದ್ದರು.
 

ಆಮೀರ್‌ ಖಾನ್‌:
ಬಾಲಿವುಡ್ ನ ಅಮೀರ್ ಖಾನ್ ಅಕಾ ಮಿಸ್ಟರ್ ಪರ್ಫೆಕ್ಷನಿಸ್ಟ್  ಯಾವುದೇ ಬ್ಯಾಂಡ್ ಅನುಮೋದನೆಗೆ 2 ಕೋಟಿಯಿಂದ 7 ಕೋಟಿ ರೂವರೆಗೆ ಪಡೆಯುತ್ತಾರೆ. ಅವರು ಪ್ರಸ್ತುತ ಕರೀನಾ ಕಪೂರ್ ಜೊತೆ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
 

Latest Videos

click me!