ಸಲ್ಮಾನ್ ಖಾನ್ - ಅಮೀಷಾ ಪಟೇಲ್: ಮದುವೆಯಾಗದ ಬಾಲಿವುಡ್‌ ಸೆಲೆಬ್ರೆಟಿಗಳು!

First Published | Nov 9, 2020, 6:29 PM IST

ಬಾಲಿವುಡ್‌ನ ಕೆಲವು ಟಾಪ್‌ ಸ್ಟಾರ್‌ಗಳು 40 ವರ್ಷಕ್ಕಿಂತ ಹೆಚ್ಚು ವಯಸ್ಸಾದರೂ ಇನ್ನೂ ಸಿಂಗಲ್‌ ಆಗೇ ಇದ್ದಾರೆ. ಮದುವೆಯಾಗುವ ಯಾವುದೇ ಯೋಚನೆ ಮಾಡಿಲ್ಲ ಇವರು. ಮದುವೆಯಾಗದೇ ಉಳಿದಿರುವ ಸೆಲೆಬ್ರೆಟಿಗಳು ಇವರು. ಸಲ್ಮಾನ್‌ ಖಾನ್‌ನಿಂದ ಅಮೀಷಾ ಪಟೇಲ್‌  ವರೆಗೆ ಹಲವರು ಈ ಪಟ್ಟಿಯಲ್ಲಿದ್ದಾರೆ.

ಬಾಲಿವುಡ್‌ನ ಅನೇಕ ಟಾಪ್‌ ನಟನಟಿಯರು ಮದುವೆಯಾಗದೇ ಸಿಂಗಲ್‌ ಆಗಿ ಉಳಿದಿರುವ ಉದಾಹರಣೆಗಳಿವೆ.
ಅಮೀಷಾ ಪಟೇಲ್:'ಕಹೋ ನಾ ಪ್ಯರ್ ಹೈನ್' ನಟಿ ಇನ್ನೂ ಅವಿವಾಹಿತೆಯಾಗಿದ್ದಾರೆ ಹಾಗೂ ತನ್ನ ಒಂಟಿ ಜೀವನದಲ್ಲಿ ಸಂತೋಷವಾಗಿದ್ದಾರೆ.
Tap to resize

ಉದಯ್ ಚೋಪ್ರಾ :ಧೂಮ್ ಸ್ಟಾರ್‌ ಉದಯ್ ಚೋಪ್ರಾ ಈ ಹಿಂದೆ ಶಮಿತಾ ಶೆಟ್ಟಿ ಮತ್ತು ನರ್ಗಿಸ್ ಫಖ್ರಿ ಅವರೊಂದಿಗೆ ಡೇಟಿಂಗ್ ಮಾಡಿದ್ದರು ಎಂದು ವರದಿಯಾಗಿದೆ. ಆದರೆ ಮದುವೆ ಬಗ್ಗೆ ಉದಯ್‌ ಯಾವುದೇ ಆಸಕ್ತಿ ಹೊಂದಿದಂತೆ ಕಾಣುವುದಿಲ್ಲ.
ಅಕ್ಷಯ್ ಖನ್ನಾ :ಅವರ ಕಾಲದ ಅತ್ಯಂತ ಹ್ಯಾಂಡ್‌ಸಮ್‌ ನಟರಲ್ಲಿ ಒಬ್ಬರು ಅಕ್ಷಯ್‌ ಖನ್ನಾ. ಅವರ ನಟನೆ ಮತ್ತು ಲುಕ್‌ ಎರಡಕ್ಕೂ ಫ್ಯಾನ್ಸ್‌ ಫಿದಾ ಆಗಿದ್ದರು. ಆದರೆ ಈತ ಮದುವೆಯಾಗಲು ಯಾವುದೇ ಆಸಕ್ತಿಯಿಲ್ಲ ಎಂದು ಒಮ್ಮೆ ಹೇಳಿದ್ದಾರೆ
ಕರಣ್ ಜೋಹರ್:ಬಾಲಿವುಡ್‌ನ ಫೇಮಸ್‌ ನೀರ್ದೇಶಕ ಕರಣ್‌ ಜೋಹರ್‌ ಸಿಂಗಲ್‌. ಅವರು ತಾಯಿ ಹಿರೂ ಜೋಹರ್ ಅವರೊಂದಿಗೆ ವಾಸಿಸುತ್ತಿರುವ ಇವರು ಮದುವೆಯ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಸರೊಗೆಸಿ ಮೂಲಕ ಪಡೆದ ತನ್ನ ಇಬ್ಬರು ಮಕ್ಕಳಾದ ಯಶ್ ಮತ್ತು ರುಹಿ ಜೊತೆ ತಮ್ಮ ಜೀವನ ಎಂಜಾಯ್‌ ಮಾಡುತ್ತಿದ್ದಾರೆ ಕರಣ್‌.
ಟಬು:ಪ್ರತಿಭೆ ಹಾಗೂ ಬ್ಯಟಿಫುಲ್‌ ಟಬು ಇನ್ನೂ ಮದುವೆಯಾಗದೆ ಉಳಿದಿರುವ ನಟಿಯರಲ್ಲಿ ಒಬ್ಬರು. ಭವಿಷ್ಯದಲ್ಲಿ ಅವರು ಉತ್ತಮ ಸಂಬಂಧಕ್ಕೆ ತೆರೆದುಕೊಳ್ಳುತ್ತಾರೆ ಎಂದು ಒಮ್ಮೆ ಹೇಳಿದ್ದಾರೆ.
ಸಲ್ಮಾನ್ ಖಾನ್ :ಸಲ್ಮಾನ್ ಖಾನ್ ಬಾಲಿವುಡ್‌ನ ಮೊಸ್ಟ್‌ ಎಲಿಜಿಬಲ್‌ ಬ್ಯಾಚುಲರ್ ಟ್ಯಾಗ್ ಅನ್ನು ಕಳೆದು ಕೊಳ್ಳಲು ಇಷ್ಟಪಡುವುದಿಲ್ಲ ಎಂದು ತೋರುತ್ತದೆ. ಈ ಹಿಂದೆ ಹಲವಾರು ನಟಿಯರೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಐಶ್ವರ್ಯಾ ರೈ ಅವರೊಂದಿಗಿನ ಆಫೇರ್‌ ಹೆಚ್ಚು ಗಮನ ಸೆಳೆಯಿತು.
ರಂದೀಪ್ ಹೂಡಾಹ್ಯಾಂಡ್‌ಸಮ್‌ ನಟ ರಣದೀಪ್ ಹೂಡಾ ಅವರ ಅಭಿನಯಕ್ಕೆ ಸೋಲದವರೇ ಇಲ್ಲ. ಅವರು ಈ ಹಿಂದೆ ಸುಷ್ಮಿತಾ ಸೇನ್ ಮತ್ತು ನೀತು ಚಂದ್ರರೊಂದಿಗೆ ಡೇಟಿಂಗ್ ಮಾಡಿದ್ದರು ಎಂದು ವರದಿಯಾಗಿದೆ.
ಸಾಜಿದ್ ಖಾನ್ :ಇತ್ತೀಚೆಗೆ ಕೆಲವು ವಿವಾದಗಳಲ್ಲಿ ಸಾಜಿದ್ ಖಾನ್ ಹೆಸರು ಕೇಳಿಬಂದಿದೆ. # Metoo ಆರೋಪಗಳಿಂದ ಹಿಡಿದು ಅವರ ಪ್ರೀತಿಯ ಜೀವನದವರೆಗೆ ಹಲವು ಬಾರಿ ಸುದ್ದಿಯಾಗಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ವರದಿಯಾಗಿದೆ, ನಂತರ ರಿಲೆಷನ್‌ಶಿಪ್‌ ಬ್ರೇಕ್‌ ಆಯಿತು.
ಡಿನೋ ಮೊರಿಯಾ:ಬಾಲಿವುಡ್‌ನ 42 ವರ್ಷದ ಹಾಟ್‌ ಡಿನೋ ಮೊರಿಯಾ ಈ ಹಿಂದೆ ಕೆಲವು ರಿಲೆಷನ್‌ಶಿಪ್‌ಗಳನ್ನು ಹೊಂದಿದ್ದರು. ಬಿಪಾಶಾ ಬಸು ನಂತರ ಅವರು ಲಾರಾ ದತ್ತಾ ಅವರೊಂದಿಗೆ ಸಂಬಂಧ ಹೊಂದಿದ್ದರು. ಪ್ರಸ್ತುತ ಸಿಂಗಲ್ ಆಗಿದ್ದಾರೆ ನಟ ಡಿನೋ ಮೊರಿಯಾ

Latest Videos

click me!