ಹಿಂದೂಗಳು ಮಾತ್ರವಲ್ಲದೆ ಈ ಮುಸ್ಲಿಂ ನಟರೂ ಗಣೇಶ ಉತ್ಸವವನ್ನು ಆಚರಿಸುತ್ತಾರೆ

First Published | Aug 30, 2022, 4:43 PM IST

ಗಣಪತಿ ಹಬ್ಬದ ತಯಾರಿ ಎಲ್ಲೆಡೆ ಭರದಿಂದ ನಡೆಯುತ್ತಿದೆ. ಕಳೆದ ಎರಡು ವರ್ಷಗಳಲ್ಲಿ, ಭಾರತದಲ್ಲಿ ಕೊರೊನಾ ವೈರಸ್‌ನಿಂದ ಗಣೇಶ ಹಬ್ಬದ ರಂಗು ಕಳೆಗುಂದಿತ್ತು, ಆದರೆ ಈ ಬಾರಿ  ಎಲ್ಲರೂ ಗಣೇಶನನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಷ್ಟೇ ಅಲ್ಲ,  ಹಿಂದೂ ಅಲ್ಲದೆ  ಮುಸ್ಲಿಂ ನಟರು ಸಹ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಇದರಲ್ಲಿ ಸಲ್ಮಾನ್ ಖಾನ್  ಪ್ರಮುಖರು. 

ಸಲ್ಮಾನ್ ಖಾನ್ ಕುಟುಂಬ ಪ್ರತಿ ವರ್ಷ ಆಚರಿಸುವ ಗಣಪತಿ ಹಬ್ಬಕ್ಕಾಗಿ ಎಲ್ಲರೂ ಎದುರು ನೋಡುತ್ತಿರುತ್ತಾರೆ. ಕಳೆದ ಕೆಲವು ವರ್ಷಗಳಿಂದ, ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಮನೆಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಖಾನ್ ಕುಟುಂಬ ಮಾತ್ರವಲ್ಲ, ಬಾಲಿವುಡ್ ಇಂಡಸ್ಟ್ರಿಗೆ ಸಂಬಂಧಿಸಿದ ಅನೇಕ ಸೆಲೆಬ್ರಿಟಿಗಳು ಕೂಡ ಗಣಪತಿಯ ದರ್ಶನಕ್ಕೆ ಬರುತ್ತಾರೆ.

ಗೌರಿಯನ್ನು ಮದುವೆಯಾಗಿರುವ ಶಾರುಖ್ ಖಾನ್ ಪ್ರತಿ ವರ್ಷ ಗಣೇಶ ಚತುರ್ಥಿಯನ್ನು ಆಚರಿಸುತ್ತಾರೆ. ಅವನು ಗಣೇಶನನ್ನು ಮನೆಗೆ ಸ್ವಾಗತಿಸುತ್ತಾರೆ ಮತ್ತು ತನ್ನ ಮಕ್ಕಳೊಂದಿಗೆ ಹಬ್ಬಗಳಲ್ಲಿ ಭಾಗವಹಿಸುತ್ತಾರೆ.

Tap to resize

ಸುಸಾನೆ ಖಾನ್ ಹೃತಿಕ್ ರೋಷನ್ ಅವರನ್ನು ಮದುವೆಯಾದ ನಂತರದಿಂದ, ಅವರು ಪ್ರತಿ ವರ್ಷ ರೋಷನ್ ಮನೆಯಲ್ಲಿ ನಡೆಯುವ ಗಣಪತಿ ಸಮಾರಂಭದಲ್ಲಿ ಭಾಗವಹಿಸುತ್ತಿದ್ದರು. ಆದರೆ, ವಿಚ್ಛೇದನದ ನಂತರವೂ ಅವರು ಹೃತಿಕ್ ಅವರ ಕುಟುಂಬ ಸದಸ್ಯರೊಂದಿಗೆ ಗಣಪತಿ ಸಮಾರಂಭದಲ್ಲಿ ಭಾಗವಹಿಸುತ್ತಾರೆ.

ಪತಿ ಕುನಾಲ್ ಖೇಮು ಮತ್ತು ಮಗಳು ಇನಾಯಾ ಜೊತೆಗೆ ಸೋಹಾ ಅಲಿ ಖಾನ್ ಕೂಡ  ಗಣೇಶ ಚತುರ್ಥಿಯ ಆಚರಣೆಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.   ಸೋಹಾ ಅಲಿ ಖಾನ್ ತಮ್ಮ ಮನೆಯಲ್ಲಿ ಗಣೇಶ ಹಬ್ಬಕ್ಕೆ ವಿಶೇಷ ತಯಾರಿಯನ್ನೂ ಮಾಡಿಕೊಳ್ಳುತ್ತಾರೆ.
 

ಕತ್ರಿನಾ ಕೈಫ್ ಪ್ರತಿ ವರ್ಷ ಸಲ್ಮಾನ್ ಖಾನ್ ಅವರ  ಗಣಪತಿ ಆಚರಣೆಗೆ ಹಾಜರಾಗುತ್ತಾರೆ. ಗಣೇಶನ ಆಶೀರ್ವಾದ ಪಡೆಯಲು ಪ್ರತಿ ವರ್ಷ ಖಾನ್ ಮನೆಗೆ ಭೇಟಿ ನೀಡುತ್ತಾರೆ ಮದುವೆಯ ನಂತರ ಇದು ಕತ್ರಿನಾ ಅವರ ಮೊದಲ ಗಣೇಶ ಹಬ್ಬವಾಗಿದೆ ಮತ್ತು ಅವರು ತಮ್ಮ ಅತ್ತೆಯ ಮನೆಯಲ್ಲಿ ಪತಿ ವಿಕ್ಕಿ ಕೌಶಲ್‌ನೊಂದಿಗೆ ಗಣೇಶನನ್ನು ಸ್ಥಾಪಿಸುವ ನಿರೀಕ್ಷೆಯಿದೆ.

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ತಮ್ಮ ಮಕ್ಕಳಾದ ತೈಮೂರ್ ಅಲಿ ಖಾನ್ ಮತ್ತು ಜೆಹ್ ಅಲಿ ಖಾನ್ ಅವರೊಂದಿಗೆ ಗಣೇಶ ಉತ್ಸವವನ್ನು ಆಚರಿಸುತ್ತಾರೆ. ಕಳೆದ ವರ್ಷ, ಕರೀನಾ ಸೈಫ್ ಮತ್ತು ತೈಮೂರ್  ಗಣಪತಿಯನ್ನು ಪೂಜಿಸುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರಿ ಸಾರಾ ಅಲಿ ಖಾನ್ ಆಗಾಗ್ಗೆ ಅನೇಕ ದೇವಾಲಯಗಳಿಗೆ ಭೇಟಿ ನೀಡುವುದನ್ನು ಕಾಣಬಹುದು. ಪ್ರತಿ ವರ್ಷವೂ ಗಣಪತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

Latest Videos

click me!