ಭೀಕರದ ರಸ್ತೆ ಅಪಘಾತದಲ್ಲಿ ನಟಿ ಅರುಂಧತಿಗೆ ಗಂಭೀರ ಗಾಯ, ವೆಂಟಿಲೇಟರ್ ನೆರವಿನಲ್ಲಿ ಚಿಕಿತ್ಸೆ!

Published : Mar 18, 2024, 07:17 PM IST

ಸೈಥಾನ್ ಚಿತ್ರದ ಖ್ಯಾತಿಯ ನಟಿ ಅರುಂಧತಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಅರುಂಧತಿಗೆ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಕುಟುಂಬಸ್ಥರು ಚೇತರಿಕೆಗೆ ಪಾರ್ಥಿಸಲು ಮನವಿ ಮಾಡಿದ್ದಾರೆ.  

PREV
18
ಭೀಕರದ ರಸ್ತೆ ಅಪಘಾತದಲ್ಲಿ ನಟಿ ಅರುಂಧತಿಗೆ ಗಂಭೀರ ಗಾಯ, ವೆಂಟಿಲೇಟರ್ ನೆರವಿನಲ್ಲಿ ಚಿಕಿತ್ಸೆ!

ದಕ್ಷಿಣ ಭಾರತದ ಖ್ಯಾತ ನಟಿ ಅರುಂಧತಿ ನಾಯರ್ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಚೆನ್ನೈನ ಕೋವಳಂ ಬೈಪಾಸ್ ಬಳಿ ಅಪಘಾತ ಸಂಭವಿಸಿದ್ದು, ನಟಿ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ.
 

28

ತಾಯಿ ಜೊತೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಟಿ ಸಹೋದರಿ ಆರತಿ ನಾಯರ್ ಘಟನೆ ಖಚಿತಪಡಿಸಿದ್ದಾರೆ. ಇದೇ ವೇಳೆ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
 

38

ಅರುಂಧತಿ ನಾಯರ್ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವುದು ನಿಜ. ತಿರುವನಂತಪುರಂನ ಅನಂತಪುರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಅರುಂಧತಿ ನಾಯರ್ ವೆಂಟಿಲೇಟರ್ ಸಹಾಯದಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

48

ಇತ್ತ ಅರುಂಧತಿ ನಾಯರ್ ಆಪ್ತ ನಟಿ ಗೋಪಿಕಾ ಅನಿಲ್ ಅಭಿಮಾನಿಗಳು ಹಾಗೂ ಆಪ್ತರಿಂದ ಆರ್ಥಿಕ ನೆರವು ಕೇಳಿದ್ದಾರೆ. ಅರುಂಧತಿ ಕುಟುಂಬಕ್ಕೆ ಆಸ್ಪತ್ರೆ ದುಬಾರಿ ಬಿಲ್ ಪಾವತಿಸುವ ಆರ್ಥಿಕ ಶಕ್ತಿ ಹೊಂದಿಲ್ಲ. ಹೀಗಾಗಿ ಆರ್ಥಿಕ ನೆರವು ನೀಡುವಂತೆ ಗೋಪಿಕಾ ಅನಿಲ್ ಮನವಿ ಮಾಡಿದ್ದಾರೆ.

58

ಮಾರ್ಚ್ 14 ರಂದು ರಸ್ತೆ ಅಪಘಾತ ಸಂಭವಿಸಿತ್ತು. ಈ ಕುರಿತು ಕೆಲ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಇದರ ಬೆನ್ನಲ್ಲೇ ನಟಿ ಕುಟುಂಬಸ್ಥರು ಅಪಘಾತವನ್ನು ಸ್ಪಷ್ಟಪಡಿಸಿದ್ದಾರೆ.
 

68

ನಟಿ ಅರುಂಧತಿ ಉಳಿಸಲು ಕುಟುಂಬಸ್ಥರು, ಆಪ್ತರು ದಾನಿಗಳ ನೆರವು ಕೋರಿದ್ದಾರೆ. ಎಲ್ಲೆಡೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಪೋಸ್ಟ್ ಹಾಕಲಾಗಿದೆ.
 

78

2014ರಲ್ಲಿ ತಮಿಳು ಚಿತ್ರದ ಮೂಲಕ ಸಿನಿ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಅರುಂಧತಿ, ಮಲೆಯಾಳಂ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
 

88

2016ರ ಸೈಥಾನ್ ಚಿತ್ರದ ಮೂಲಕ ಭಾರಿ ಖ್ಯಾತಿ ಗಳಿಸಿದ ಅರುಂಧತಿ, ಕಣ್ಮಿ ರಾಸಿ, ಪಿಸ್ತಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಅರುಂಧತಿ ಶೀಘ್ರ ಚೇತರಿಕೆಗೆ ಎಲ್ಲರೂ ಪ್ರಾರ್ಥಿಸಿದ್ದಾರೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories