ಎರಡು ಮದುವೆ ಮಾಡಿಕೊಂಡ ಸೈಫ್‌ಗೆ ಈಗಲೇ ನಾಲ್ಕು ಮಕ್ಕಳ ಚಿಂತೆ ಏಕೆ?

Suvarna News   | Asianet News
Published : Sep 18, 2021, 01:56 PM IST

ಸೈಫ್ ಅಲಿ ಖಾನ್ ಇತ್ತೀಚೆಗೆ ಬಿಡುಗಡೆಯಾದ 'ಭೂತ್ ಪೊಲೀಸ್' ಚಿತ್ರದ ಪ್ರಚಾರಕ್ಕಾಗಿ ಕಪಿಲ್ ಶರ್ಮಾ ಶೋಗೆ ಹಾಜರಾಗಿದ್ದರು. ಈ ಸಮಯದಲ್ಲಿ, ಸೈಫ್ ಅವರ ಸಹ ನಟರಾದ ಜಾಕ್ವೇಲಿನ್ ಫರ್ನಾಂಡೀಸ್ ಮತ್ತು ಯಾಮಿ ಗೌತಮ್ ಜೊತೆಗಿದ್ದರು. ಕೆಲವು ತಿಂಗಳ ಹಿಂದೆ ಮದುವೆಯಾದ ನಂತರ ಕಾರ್ಯಕ್ರಮಕ್ಕೆ ಬಂದ ಯಾಮಿ ಗೌತಮ್ ಅವರನ್ನು ಕಪಿಲ್ ಶರ್ಮಾ ಅಭಿನಂದಿಸಿದರು. ಈ ಸಮಯದಲ್ಲಿ, ಕಪಿಲ್ ಮದುವೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಆಗ, ಸೈಫ್ ಅಲಿ ಖಾನ್ ತಮ್ಮ ಮಕ್ಕಳ ಬಗೆಗಿನ ಭಯವನ್ನು ಬಹಿರಂಗ ಪಡಿಸಿದರು. ಅಷ್ಟಕ್ಕೂ, ಸೈಫ್‌ಗೆ ಏಕೆ ಚಿಂತೆ? ವಿವರ ಇಲ್ಲಿದೆ.

PREV
18
ಎರಡು ಮದುವೆ ಮಾಡಿಕೊಂಡ ಸೈಫ್‌ಗೆ ಈಗಲೇ ನಾಲ್ಕು ಮಕ್ಕಳ ಚಿಂತೆ ಏಕೆ?

ಶೋನಲ್ಲಿ, ಮದುವೆಗೆ ಕೇವಲ 20 ಜನರು ಮಾತ್ರ ಹಾಜಾರಾಗಿದ್ದರಾ ಎಂದು ಯಾಮಿಯನ್ನು ಕಪಿಲ್‌ ಕೇಳಿದರು ಅಥವಾ 20 ಜನರು ನಿಂತಿದ್ದಲ್ಲಿ ನೀವು ಹೋಗಿ ಮದುವೆಯಾದ್ರಾ, ಎಂದೂ ಕಾಲೆಳೆದರು. ನನ್ನ ಅಜ್ಜಿ ಕೊರೋನಾ ಪ್ರೋಟೋಕಾಲ್ ಅನುಸರಿಸಲು ಕೇಳಿದ್ದರು ಮತ್ತು ಆ ಕಾರಣದಿಂದ ಕೇವಲ 20 ಜನ ಮಾತ್ರ ತಮ್ಮ ಮದುವೆಗೆ ಆಹ್ವಾನಿಸಿದ್ದು ಎಂದು ಯಾಮಿ ಗುಪ್ತಾ ಬಹಿರಂಗ ಪಡಿಸಿದರು.

28

ಮಧ್ಯದಲ್ಲಿ ಸೈಫ್ ನಾನು ಮತ್ತು ಕರೀನಾ ಕೂಡ ತಮ್ಮ ಮದುವೆಗೆ ಇದೇ ರೀತಿ ಪ್ಲಾನ್‌ ಮಾಡುತ್ತಿದ್ದೇವು. ನಾವು ಕೆಲವು ವಿಶೇಷ ಜನರನ್ನು ಮಾತ್ರ ಕರೆಯುತ್ತೇವೆ ಎಂದು ನಾವು ನಿರ್ಧರಿಸಿದ್ದೇವು ಆದರೆ ಕಪೂರ್ ಕುಟುಂಬದಲ್ಲೇ 200 ಜನರಿದ್ದಾರೆ ಎಂದು ಸೈಫ್ ಹೇಳಿದರು. 

38

ಇದರ ನಂತರ ಸೈಫ್ ಅಲಿ ಖಾನ್ ನಾನು ದುಬಾರಿ ಈಗಿನ ಮದುವೆಗಳ ಬಗ್ಗೆ ತುಂಬಾ ಹೆದರುತ್ತೇನೆ. ಏಕೆಂದರೆ ನಾನು 4 ಮಕ್ಕಳನ್ನು ಹೊಂದಿದ್ದೇನೆ ಎಂದು ಸೈಫ್ ಹೇಳುತ್ತಾರೆ, ಹಾಗಾಗಿ ನನಗೆ ತುಂಬಾ ಭಯ. ಸೈಫ್ ಮಾತು ಕೇಳಿ ಯಾಮಿ, ಜಾಕ್ವೆಲಿನ್, ಕಪಿಲ್ ಮತ್ತು ಅರ್ಚನಾ ಎಲ್ಲರೂ ನಗಲು ಪ್ರಾರಂಭಿಸಿದರು. 

48

ಸೈಫ್ ಅಲಿ ಖಾನ್ ಎರಡು ಮದುವೆಗಳನ್ನು ಆಗಿದ್ದಾರೆ ಮತ್ತು  ಅವರಿಗೆ 4 ಮಕ್ಕಳಿವೆ. ಸೈಫ್ ಅವರ ಮೊದಲ ಮದುವೆ 1991 ರಲ್ಲಿ ಅವರಿಗಿಂತ 12 ವರ್ಷ ಹಿರಿಯರಾದ ಅಮೃತಾ ಸಿಂಗ್ ಜೊತೆ ಆಗಿತ್ತು. 13 ವರ್ಷಗಳ ನಂತರ, ಇಬ್ಬರೂ 2004 ರಲ್ಲಿ ವಿಚ್ಛೇದನ ಪಡೆದರು. ಆ ಮದುವೆಯಿಂದ ಸೈಫ್‌ ಸಾರಾ ಮತ್ತು ಇಬ್ರಾಹಿಂ ಎಂಬ ಇಬ್ಬರು ಮಕ್ಕಳಿವೆ.

58

ಸೈಫ್ ನಂತರ 2012ರಲ್ಲಿ ತನಗಿಂತ 10 ವರ್ಷ ಚಿಕ್ಕವರಾದ ಕರೀನಾ ಕಪೂರ್ ಅವರನ್ನು ವಿವಾಹವಾದರು. ಪ್ರಸ್ತುತ ಸೈಫ್‌ ಮತ್ತು ಕರೀನಾ ತೈಮೂರ್ ಮತ್ತು ಜೆಹ್ ಎಂಬ ಎರಡು ಮಕ್ಕಳ ಜೊತೆ ಇದ್ದಾರೆ. ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ 'ತಶಾನ್' ಚಿತ್ರದ ಸೆಟ್‌ಗಳಲ್ಲಿ ಪರಸ್ಪರ ಹತ್ತಿರ ಬಂದರು. 
 

68

ಸುಮಾರು 5 ವರ್ಷಗಳ ಕಾಲ ಲೈವ್-ಇನ್‌ನಲ್ಲಿ ರಿಲೆಷನ್‌ಶಿಪ್‌ ನಂತರ, ಇಬ್ಬರೂ 2012 ರಲ್ಲಿ ವಿವಾಹವಾದರು. ತನಗಿಂತ 10 ವರ್ಷ ದೊಡ್ಡವನಾದ ಸೈಫ್ ನನ್ನು ಮದುವೆಯಾಗಲು, ಕರೀನಾ ಮನೆಯಿಂದ ಓಡಿ ಹೋಗುವ ಪ್ಲಾನ್‌ ಮಾಡಿದ್ದರಂತೆ. ಇದನ್ನು ಕರೀನಾ 2013 ರಲ್ಲಿ ವೋಗ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

 
 

78

ಕೆಲವು ಧಾರ್ಮಿಕ ಸಂಘಟನೆಗಳು ಸೈಫ್-ಕರೀನಾ ಮದುವೆಯನ್ನು ಲವ್ ಜಿಹಾದ್ ಎಂದು ಕರೆದಿದ್ದವು. 'ನಾನು ಪ್ರೀತಿಯನ್ನು ನಂಬುತ್ತೇನೆ, ಲವ್ ಜಿಹಾದ್ ಅಲ್ಲ, ಪ್ರೀತಿಯನ್ನು ನೀವು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಅದರಲ್ಲಿ ಉತ್ಸಾಹ,  ಮತ್ತು ಇತರ ಅನೇಕ ವಿಷಯಗಳಿವೆ ಆದರೆ ಧರ್ಮದ ಗೋಡೆಯಿಲ್ಲ' ಎಂದು ಈ ಬಗ್ಗೆ, ಕರೀನಾ ಹೇಳಿದ್ದರು.

88

ಸಂದರ್ಶನವೊಂದರಲ್ಲಿ, ಕರೀನಾ ಸೈಫ್‌ನ ಆಕರ್ಷಕ ವ್ಯಕ್ತಿತ್ವ ಎಲ್ಲರನ್ನೂ ತಮ್ಮ ಕಡೆಗೆ ಆಕರ್ಷಿಸುತ್ತದೆ ಎಂದರು. ಇಬ್ಬರಲ್ಲಿ ಯಾರು ಸಂಬಂಧಕ್ಕಾಗಿ ಮೊದಲ ಹೆಜ್ಜೆ ತೆಗೆದುಕೊಂಡರು ಎಂಬ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಕರೀನಾ 'ನಾನು. ಸೈಫ್ ನಿಜಕ್ಕೂ ಅಂತಹ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಅವನು ಎಂದಿಗೂ ಮೊದಲ ಹೆಜ್ಜೆ ಇಡುವುದಿಲ್ಲ. ಅವನು ಈ ವಿಷಯದಲ್ಲಿ  ತುಂಬಾ ವಿಭಿನ್ನ ಮತ್ತು ತುಂಬಾ ಕಂಟ್ರೋಲ್ಡ್‌' ಎಂದು ಹೇಳಿದ್ದರು. 

click me!

Recommended Stories