ಸೈಫ್, ಕರೀನಾ ಟು ಸಲ್ಮಾನ್ ಖಾನ್‌: ಅಂಬಾನಿ ಮನೆ ಗಣೇಶ ಹಬ್ಬದಲ್ಲಿ ಮಿಂಚಿದ ಬಾಲಿವುಡ್ ಸೆಲೆಬ್ರಿಟಿಗಳು

First Published | Sep 8, 2024, 3:19 PM IST

ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಬಾಲಿವುಡ್ ತಾರೆಯರು ಸಂಭ್ರಮದಿಂದ ಭಾಗಿಯಾಗುತ್ತಾರೆ. ಈ ಬಾರಿ  ಸಲ್ಮಾನ್ ಖಾನ್, ಆಮೀರ್ ಖಾನ್, ಕರೀನಾ ಕಪೂರ್ ಸೇರಿದಂತೆ ಹಲವಾರು ಕಲಾವಿದರು ಅಂಬಾನಿ ಮನೆಯಲ್ಲಿ ಬಪ್ಪನ ದರ್ಶನ ಪಡೆದರು.

ಬಾಲಿವುಡ್ ಮಂದಿ ಗಣೇಶೋತ್ಸವವನ್ನು ಯಾವಾಗಲೂ ಸಡಗರದಿಂದ ಆಚರಿಸುತ್ತಾರೆ ಉದ್ಯಮಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಅಂಬಾನಿ ಕುಟುಂಬವು ತಮ್ಮ ನಿವಾಸದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಇದನ್ನು ನೋಡಲು ಬಾಲಿವುಡ್ ದಂಡೇ ಆಗಮಿಸಿತ್ತು.

ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಸೋದರ ಸೊಸೆ ಅಲಿಜೆಯೊಂದಿಗೆ ಅಂಬಾನಿ ಕುಟುಂಬದ ಗಣೇಶೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು.

Tap to resize

ಹಾಗೆಯೇ ಬಾಲಿವುಡ್‌ ನಟಿ  ಸಾರಾ ಅಲಿ ಖಾನ್ ಅವರು ಕೂಡ ಸಹೋದರ ಇಬ್ರಾಹಿಂ ಅಲಿ ಖಾನ್ ಅವರೊಂದಿಗೆ ಅಂಬಾನಿ ಮನೆಗೆ ಆಗಮಿಸಿ ಗಣಪತಿ ದರ್ಶನ ಪಡೆದರು

ಹಾಗೆಯೇ ಬಾಲಿವುಡ್ ನಿರ್ದೇಶಕ ಬೋನಿ ಕಪೂರ್ ತಮ್ಮ ಮೊದಲ ಪತ್ನಿ ಮಕ್ಕಳಾದ ಪುತ್ರಿ ಅಂಶುಲಾ ಮತ್ತು ಮಗ ಅರ್ಜುನ್ ಕಪೂರ್ ಅವರೊಂದಿಗೆ ಅಂಬಾನಿ ಕುಟುಂಬದ ಗಣೇಶೋತ್ಸವದಲ್ಲಿ ಕಾಣಿಸಿಕೊಂಡರು.

ಬಾಲಿವುಡ್ ನಟಿ ಸೋನಂ ಕಪೂರ್ ಕೂಡ ಪತಿ ಉದ್ಯಮಿ ಆನಂದ್ ಅಹುಜಾ ಅವರೊಂದಿಗೆ ಅಂಬಾನಿ ನಿವಾಸಕ್ಕೆ ಆಗಮಿಸಿ ವಿಘ್ನಹರನ ದರ್ಶನ ಪಡೆದರು.

ಬಾಲಿವುಡ್ ಹಿರಿಯ ನಟ ಬೋಮನ್ ಇರಾನಿ ಅವರು ಕೂಡ ಪತ್ನಿ ಝೆನೋಬಿಯಾ ಇರಾನಿ ಜೊತೆ ಅಂಟಿಲಿಯಾಗೆ ಆಗಮಿಸಿ ವಿಘ್ನ ನಿವಾರಕನ ದರ್ಶನ ಪಡೆದು ಫೋಟೋಗೆ ಫೋಸ್ ಕೊಟ್ಟರು

ಆಯುಷ್ ಶರ್ಮಾ ಕೂಡ ಅಂಬಾನಿ ನಿವಾಸಕ್ಕೆ ಆಗಮಿಸಿ ಸಂಕಷ್ಟಹರನ ದರ್ಶನ ಪಡೆದರು. ಆಯುಷ್ ಶರ್ಮಾ ಅವರು ಸಲ್ಮಾನ್ ಖಾನ್ ಭಾಮೈದ ಆಗಿದ್ದು, ಅವರ ಸೋದರಿ ಅರ್ಪಿತಾ ಖಾನ್ ಅವರ ಪತಿಯಾಗಿದ್ದಾರೆ. 

ಬಾಲಿವುಡ್ ಹಿರಿಯ ನಟ ಹಾಗೂ ನಿರ್ದೇಶಕ ಸಂಜಯ್ ಕಪೂರ್ ಅವರ ಪುತ್ರಿ ಶನಾಯಾ ಕಪೂರ್ ಅವರು ಕೂಡ ಮುಕೇಶ್ ಅಂಬಾನಿ ನಿವಾಸಕ್ಕೆ ಆಗಮಿಸಿ ಏಕದಂತನ ಆಶೀರ್ವಾದ ಪಡೆದರು.

ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಇಲ್ಲದ ಕಾರ್ಯಕ್ರಮಗಳೇ ಕಡಿಮೆ. ಕರಣ್ ಜೋಹರ್ ಕೂಡ ಮಿಣಿ ಮಿಣಿ ಮಿಂಚುವ ಹಸಿರು ಹಾಗೂ ಸಿಲ್ವರ್ ಮಿಶ್ರಿತ ಬಣ್ಣದ ಜುಬ್ಬಾ ಧರಿಸಿ ಸಿದ್ಧಿವಿನಾಯಕನ ದರ್ಶನ ಪಡೆದರು.

ರಿಲಯನ್ಸ್ ಇಂಡಸ್ಟ್ರಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುವ ಓರನ್ ಅವತ್ರಮಣಿ ಉರ್ಫ್‌ ಓರಿ ಕೂಡ ಅಂಬಾನಿ ಕುಟುಂಬದ ಈ ಕಾರ್ಯಕ್ರಮಕ್ಕೆ ಆಗಮಿಸಿ ಗಣಾಧೀಶನ ದರ್ಶನ ಪಡೆದರು.

ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ಪತಿ ನಟ ಸೈಫ್ ಅಲಿ ಖಾನ್ ಜೊತೆಯಾಗಿ ಅಂಬಾನಿ ಕುಟುಂಬದ ಗಣೇಶ ಹಬ್ಬಕ್ಕೆ  ಆಗಮಿಸಿ ಗೌರಿಪುತ್ರನ ದರ್ಶನ ಪಡೆದರು.

ಬಾಲಿವುಡ್‌ ನಟ ಜಾಕಿ ಶ್ರಾಫ್ ಪುತ್ರ ಟೈಗರ್ ಶ್ರಾಫ್ ಅವರೊಂದಿಗೆ ಅಂಬಾನಿ ಮನೆ ಗಣೇಶ ಹಬ್ಬಕ್ಕೆ ಆಗಮಿಸಿ ವಿಘ್ನೇಶ್ವರನ ದರ್ಶನ ಪಡೆದರು

ಸೌತ್‌ ನಟಿ ಕಾಜಲ್ ಅಗರ್ವಾಲ್ ಕೂಡ ಅಂಬಾನಿ ಮನೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಸಾರಿ ಧರಿಸಿ ಬಂದ ನಟಿ ವಿಘ್ನೇಶನ ದರ್ಶನ ಮಾಡಿ ಫೋಟೋಗೆ ಫೋಸ್ ನೀಡಿದರು.

ಬಾಲಿವುಡ್ ನಟ ಆಮೀರ್ ಖಾನ್ ಅವರು ಪುತ್ರರಾದ ಜುನೈದ್ ಖಾನ್ ಹಾಗೂ ಆಜಾದ್ ಅವರೊಂದಿಗೆ ಅಂಬಾನಿ ನಿವಾಸಕ್ಕೆ ಆಗಮಿಸಿ ಪ್ರಥಮವಂದ್ಯನ ದರ್ಶನ ಪಡೆದರು.

ಬಾಲಿವುಡ್ ಹಿರಿಯ ನಟಿ ಭಾಗ್ಯಶ್ರೀ ಅವರು ಕೂಡ ಪತಿ ಹಿಮಾಲಯ ದಾಸಾನಿ ಅವರೊಂದಿಗೆ ಅಂಬಾನಿ ಮನೆಗೆ ಆಗಮಿಸಿ ಗಣೇಶನ ಆಶೀರ್ವಾದ ಬೇಡಿದರು. 

ಹಾಗೆಯೇ ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ ಕೂಡ ನೆರಳೆ ಬಣ್ಣದ ಗಾಗ್ರಾ ಧರಿಸಿ ಅಂಬಾನಿ ನಿವಾಸಕ್ಕೆ ಆಗಮಿಸಿ ಗಣಪತಿ ಬಪ್ಪನ ದರ್ಶನ ಪಡೆದರು.

Latest Videos

click me!