ಬಾಲಿವುಡ್‌ ನವಾಬ ಸೈಫ್‌ರ ಪಟೌಡಿ ಆರಮನೆ ಫೋಟೋಗಳು

First Published Jun 12, 2020, 6:14 PM IST

ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ನವಾಬ ಕುಟುಂಬದ ಕುಡಿ. ಮನ್ಸೂರ್ ಅಲಿ ಅವರ ಮಗ. ಸೈಫ್‌ ತಂದೆ ನವಾಬ್ ಪಟೌಡಿ ಎಂದು ಪರಿಚಿತರು. ಸೈಫ್‌ರ ಪುರಾತನ ಮನೆ ಪಟೌಡಿ ಪ್ಯಾಲೇಸ್‌ನ ಪೋಟೋಗಳು ವೈರಲ್‌ ಆಗಿವೆ. ನವಾಬ ಕಟುಂಬದ ಈ ಐಷರಾಮಿ ಆರಮನೆ ಸುಮಾರು 84 ವರ್ಷಗಳ ಹಿಂದೆ ಕಟ್ಟಿದ್ದಾಗಿದೆ. ಇಲ್ಲಿ ಹಲವು ಸಿನಿಮಾ ಶೂಟಿಂಗ್‌ಗಳೂ ನೆಡೆದಿವೆ. ಇಲ್ಲಿವೆ ಹರಿಯಾಣದಲ್ಲಿರುವ ಪಟೌಡಿ ಆರಮನೆಯ ಪೋಟೋಗಳು.

ಹರಿಯಾಣದಲ್ಲಿರುವ ಪಟೌಡಿಯಲ್ಲಿದೆ ಬಿಳಿ ಬಣ್ಣದ ಅರಮನೆ. ಸೈಫ್-ಕರೀನಾ ತಮ್ಮ ಬಿಡುವಿನ ವೇಳೆಯನ್ನು ಇಲ್ಲಿ ಕಳೆಯುತ್ತಾರೆ.
undefined
ಈ ಅರಮನೆಯನ್ನು ಇಬ್ರಾಹಿಂ ಕೋಠಿ ಎಂದೂ ಕರೆಯುತ್ತಾರೆ.
undefined
ಒಳಗಿನಿಂದ ಬಹಳ ಐಷಾರಾಮಿ ಹಾಗೂ ಮೂಲೆ ಮೂಲೆಯೂ ಅದ್ಭುತವಾಗಿದೆ .
undefined
84 ವರ್ಷಗಳ ಹಿಂದೆ 1935 ರಲ್ಲಿ 8ನೇ ನವಾಬ್ ಮತ್ತು ಭಾರತೀಯ ತಂಡದ ಮಾಜಿ ನಾಯಕ ಇಫ್ತಿಖರ್ ಅಲಿ ಹುಸೇನ್ ಸಿದ್ದಿಕಿ ನಿರ್ಮಿಸಿದರು.
undefined
ಇದರ ಮೌಲ್ಯ ಸುಮಾರು 800 ಕೋಟಿ ಎಂದು ಅಂದಾಜಿಲಾಗುತ್ತದೆ.
undefined
150 ಕೊಠಡಿಗಳಿರುವ ಇಲ್ಲಿ ಮುಂಚೆ 100ಕ್ಕೂ ಹೆಚ್ಚು ಸೇವಕರು ಕೆಲಸ ಮಾಡುತ್ತಿದ್ದರಂತೆ.
undefined
ಇಫ್ತಿಖರ್ ಅಲಿ ಹುಸೇನ್ ಸಿದ್ದಿಕಿ ನಿರ್ಮಿಸಿದ ಇದನ್ನು ಅವರ ಮಗ 9ನೇ ನವಾಬ್ ಮನ್ಸೂರ್ ಅಲಿ ಅಲಿಯಾಸ್ ನವಾಬ್ ಪಟೌಡಿ ವಿದೇಶಿ ವಾಸ್ತುಶಿಲ್ಪಿಗಳ ಸಹಾಯದಿಂದ ನವೀಕರಿಸಿದರು.
undefined
2003ರಲ್ಲಿ ಮನ್ಸೂರ್ ಅಲಿ ಖಾನ್‌ರ ತಾಯಿ ಸಾಜಿದಾ ಸುಲ್ತಾನ್ ಮರಣದ ನಂತರ ಅವರು ಈ ಬಂಗಲೆ ತೊರೆಯಬೇಕಾಯಿತು. ಅದರ ನಂತರ ನವಾಬ್ ಪಟೌಡಿ ಈ ಅರಮನೆಯಲ್ಲಿ ಪತ್ನಿ ಶರ್ಮಿಳಾ ಟ್ಯಾಗೋರ್ ಅವರೊಂದಿಗೆ ವಾಸಿಸಲು ಪ್ರಾರಂಭಿಸಿದರು.
undefined
'ಮಂಗಲ್ ಪಾಂಡೆ', 'ವೀರ್-ಜಾರಾ', 'ರಂಗ್ ದೇ ಬಸಂತಿ', 'ಲವ್'ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳು ಪಟೌಡಿ ಅರಮನೆಯಲ್ಲಿ ಚಿತ್ರೀಕರಿಸಲಾಗಿದೆ.
undefined
ಅರಮನೆಯಲ್ಲಿ ಹಲವಾರು ದೊಡ್ಡ ಮೈದಾನಗಳು, ಅಶ್ವಶಾಲೆಗಳು ಮತ್ತು ಗ್ಯಾರೇಜುಗಳಿವೆ.
undefined
ದೊಡ್ಡ ಡ್ರಾಯಿಂಗ್ ರೂಮ್ ಜೊತೆಗೆ, ಅರಮನೆಯಲ್ಲಿ ಏಳು ಮಲಗುವ ಕೋಣೆಗಳು, ಡ್ರೆಸ್ಸಿಂಗ್ ಮತ್ತು ಬಿಲಿಯರ್ಡ್ ರೂಮ್‌ಗಳಿವೆ.
undefined
ನವೀಕರಣದ ನಂತರ, ಸೈಫ್ ಅರಮನೆಯ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
undefined
'ತಂದೆಯ ಮರಣದ ನಂತರ, ಈ ಅರಮನೆಯನ್ನು ನೀಮ್ರಾನಾ ಹೋಟೆಲ್‌ಗೆ ಬಾಡಿಗೆಗೆ ನೀಡಲಾಯಿತು. ಈ ಮೊದಲು, ಅಮನ್ ಮತ್ತು ಫ್ರಾನ್ಸಿಸ್ ಇದನ್ನು ನಡೆಸುತ್ತಿದ್ದರು. ಫ್ರಾನ್ಸಿಸ್ ನಿಧನರಾದರು, ನಂತರ ನಾನು ನನ್ನ ಅರಮನೆಯನ್ನು ಹಿಂತಿರುಗಿ ಪಡೆಯಬಹುದು ಎಂದು ತಿಳಿಸಲಾಯಿತು ಆದರೆ ಇದಕ್ಕಾಗಿ ನಾನು ಸಾಕಷ್ಟು ಹಣವನ್ನು ಪಾವತಿಸಬೇಕಾಗಿತ್ತು' ಎಂದು ಸಂದರ್ಶನವೊಂದರಲ್ಲಿ ಸೈಫ್ ಹೇಳಿದ್ದರು.
undefined
'ನಾನು ಆನುವಂಶಿಕವಾಗಿ ಪಡೆಯಬೇಕಾದ ಮನೆಯನ್ನು, ಚಲನಚಿತ್ರಗಳಿಂದ ಗಳಿಸಿದ ಹಣದ ಮೂಲಕ ನಾನು ಹಿಂತಿರುಗಿ ಪಡೆಯಬೇಕಾಯಿತು. ನಾನು ಬೆಳೆದಿದ್ದು ಹೀಗೆ ಆದರೆ ನನಗೆ ಏನೂ ಆನುವಂಶಿಕವಾಗಿ ಸಿಗಲಿಲ್ಲ' ಎಂದು ಸೈಫ್ ಹೇಳಿದ್ದರು ಒಮ್ಮೆ.
undefined
ಅರಮನೆ ಸಂಕೀರ್ಣದಲ್ಲಿರುವ ಸ್ಮಶಾನದಲ್ಲಿ ಮನ್ಸೂರ್ ಅಲಿ ಅವರ ಸಮಾಧಿ ಕಾಣಬಹುದು.
undefined
click me!