ನಮ್ಮ ಬೆಡ್‌ರೂಮ್‌ಗೇ ಬಂದ್ಬಿಡಿ: ಪಾಪರಾಜಿಗಳಿಗೆ ಹೀಗ್ಯಾಕೆ ಹೇಳಿದ್ರು ಸೈಫ್?

First Published | Mar 3, 2023, 5:45 PM IST

ಮಾರ್ಚ್ 2ರ ಗುರುವಾರ ರಾತ್ರಿ ,ಮಲೈಕಾ ಅರೋರಾ ಮತ್ತು ಅಮೃತಾ ಅರೋರಾ ಅವರ ತಾಯಿ ಜಾಯ್ಸ್ ಅರೋರಾ ಅವರ 70 ನೇ ಹುಟ್ಟುಹಬ್ಬದ ಆಚರಿಸಿಕೊಂಡರು. ಅಮೃತಾ ಅರೋರಾ ಅವರ ಮನೆಯಲ್ಲಿ  ಪಾರ್ಟಿ ಅಯೋಜಿಸಿದ್ದು, ಕರೀನಾ ಕಪೂರ್ ಖಾನ್ (Kareena Kapoor), ಸೈಫ್‌ ಆಲಿ ಖಾನ್‌ (Saif Ali Khan) ಮತ್ತು ಕರಿಷ್ಮಾ ಕಪೂರ್ (Karisma Kapoor) ಭಾಗವಹಿಸಿದ್ದರು. ಈ ಸಮಯದ ಫೋಟೋಗಳು ಮತ್ತು ವಿಡಿಯೋಗಳು ಸಖತ್‌ ವೈರಲ್‌ ಆಗಿವೆ. 

Kareena Kapoor

 ಬೆಸ್ಟ್‌ ಫ್ರೆಂಡ್‌ ತಾಯಿಯ ಬರ್ತ್‌ಡೇ ಬ್ಯಾಷ್‌ಗೆ ಆಗಮಿಸಿದ ಸೈಫ್‌, ಕರೀನಾ ಮತ್ತು ಕರಿ‍ಷ್ಮಾ ಸಂಪೂರ್ಣ ಕಪ್ಪು ಔಟ್‌ಫಿಟ್‌ ಅನ್ನು ಆಯ್ಕೆ ಮಾಡಿಕೊಂಡರು. ತಮ್ಮ ಗ್ಲಾಮರಸ್‌ ಲುಕ್‌ನಿಂದ ಕಪೂರ್‌ ಸಿಸ್ಟರ್ಸ್‌ ಪಾರ್ಟಿಯ ಮೆರಗು ಹೆಚ್ಚಿಸಿದರು

Kareena Kapoor

ಕಳೆದ ರಾತ್ರಿ ಕರೀನಾ ತನ್ನ ಪತಿ ಸೈಫ್ ಅಲಿ ಖಾನ್ ಜೊತೆಗೆ  ಕಾಣಿಸಿಕೊಂಡರು. ಪತಿಯ ಜೊತೆ ಕೈ ಹಿಡಿದು ಹೆಜ್ಜೆಹಾಕುತ್ತಿರುವ ನಟಿಯ ಫೋಟೋಗಳು ಸಖತ್‌ ವೈರಲ್‌ ಆಗಿವೆ

Tap to resize

Kareena Kapoor

ಕಪ್ಪು ಕಟ್-ಔಟ್ ಶಾರ್ಟ್-ಡ್ರೆಸ್‌ನಲ್ಲಿ ಬೆಬೊ ಸಖತ್‌ ಸೆಕ್ಸಿ ಆಗಿ ಕಾಣುತ್ತಿದ್ದರು. ಅವರು ನ್ಯೂಡ್‌ ಬಣ್ಣದ ಪಂಪ್ ಹೀಲ್ಸ್ ಮತ್ತು ಮ್ಯಾಚಿಂಗ್ ಕ್ಲಚ್ ಬ್ಯಾಗ್‌ನೊಂದಿಗೆ ತಮ್ಮ ಲುಕ್‌ ಕಂಪ್ಲೀಟ್‌ ಮಾಡಿದರು.

ಮತ್ತೊಂದೆಡೆ, ಸೈಫ್ ಅಲಿ ಖಾನ್ ಅವರು ಕಪ್ಪು ಕುರ್ತಾ ಧರಿಸಿದ್ದರು, ಅವರು ಬಿಳಿ ಪೈಜಾಮಾ ಮತ್ತು ಕಂದು ಚರ್ಮದ ಬೂಟುಗಳೊಂದಿಗೆ ಪೇರ್‌ ಮಾಡಿಕೊಂಡಿದ್ದರು.  

ಮುಂಬೈನಲ್ಲಿರುವ ಅಮೃತಾ ಅರೋರಾ ಅವರ ನಿವಾಸಕ್ಕೆ ಆಗಮಿಸಿದ  ಕಪೂರ್‌ ಸಹೋದರಿಯರಲ್ಲಿ ಕರೀನಾ ಮಿನಿ ಡ್ರೆಸ್ ಧರಿಸಿದ್ದರೆ, ಕರಿಷ್ಮಾ ಬ್ಲಾಕ್‌  ಪ್ರಿಟೆಂಡ್‌ ಉಡುಪನ್ನು ಧರಿಸಿದ್ದರು.  

ಪಾರ್ಟಿಯಿಂದ ಹಿಂದಿರುವಾಗ ಕರೀನಾ ಮತ್ತು ಸೈಫ್‌‌ಗೆ ಪಾಪರಾಜಿಗಳು ಕ್ಯಾಮರಾಗೆ ಪೋಸ್ ನೀಡುವಂತೆ ವಿನಂತಿಸಿ ಹಿಂಬಾಲಿಸಿದರು. ಇದರಿಂದ ಸಿಟ್ಟಾದ ಸೈಫ್‌ ಒಂದು ಕೆಲಸ ಮಾಡಿ, ನಮ್ಮ ಬೆಡ್‌ರೂಮ್‌ ಒಳಗೆ ಬಂದು ಬಿಡಿ ಎಂದು ಕಿಡಿ ಕಾರಿ ಹೆಂಡತಿಯ ಕೈ ಹಿಡಿದು ನಡೆದರು. ಆದರೂ ಪಾಪಾರಾಜಿಗಳು ಅವರನ್ನು ಹಿಂಬಾಲಿಸುವುದನ್ನು ಬಿಡಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Latest Videos

click me!