ಹೆತ್ತವರ ಕೊನೆಯ ಭೇಟಿ ಬಗ್ಗೆ ಮಾತಾನಾಡಿದ ಸಾರಾ ಅಲಿ ಖಾನ್

First Published | Jul 24, 2020, 5:07 PM IST

ಬಾಲಿವುಡ್‌ನ ಸಾರಾ ಆಲಿ ಖಾನ್‌  ಫೋಷಕರಾದ ಸೈಫ್  ಅಲಿ ಖಾನ್ ಮತ್ತು ಅಮೃತ ಸಿಂಗ್ ಈಗ ಜೊತೆಯಾಗಿಲ್ಲ. ಡಿವೋರ್ಸ್‌ ನಂತರ ಸಾರಾ ತಾಯಿ ಜೊತೆ ವಾಸಿಸುತ್ತಿದ್ದಾಳೆ. ಸೈಫ್‌ ಅಮೃತಾರ ಪುತ್ರಿ ಸಾರಾಳ ಸಂದರ್ಶನವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ, ಅವರು ತಮ್ಮ ಹೆತ್ತವರ ಕೊನೆಯ ಭೇಟಿಯ ಬಗ್ಗೆ ಮಾತನಾಡಿದರು. ಏನು ಹೇಳಿದ್ದಾರೆ ಸಾರಾ?

ಕೆಲವು ವರ್ಷಗಳ ಹಿಂದೆ ಪಪ್ಪಾ ಸೈಫ್ ಜೊತೆಗೆ ಕರಣ್ ಜೋಹರ್ ಚಾಟ್ ಶೋಗೆ ಸಾರಾ ಆಗಮಿಸಿದಳು. ಇಲ್ಲಿ ತಮ್ಮ ಜೀವನ ಮತ್ತು ಹೆತ್ತವರ ಜೀವನಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಿದಳು ನಟಿ.
ಈ ಚಾಟ್‌ ಶೋನಲ್ಲಿ ಸಾರಾ ತನ್ನ ಹೆತ್ತವರ ಕೊನೆಯ ಭೇಟಿಯ ಬಗ್ಗೆ ಹೇಳಿದಳು. ಅಷ್ಟೇ ಅಲ್ಲ, ಈ ಎಲ್ಲ ಸಂಗತಿಗಳನ್ನು ಹೇಳುತ್ತಿರುವಾಗ ಸೈಫ್ ಅವುಗಳನ್ನು ಗಮನವಿಟ್ಟು ಕೇಳುತ್ತಿದ್ದರು.
Tap to resize

ಮದುವೆಯ 13 ವರ್ಷಗಳ ನಂತರ ಸೈಫ್ ಮತ್ತು ಅಮೃತಾ ಬೇರ್ಪಟ್ಟ ನಂತರ, ಅಮೃತಾ ತನ್ನ ಮಕ್ಕಳನ್ನು ಒಬ್ಬಂಟಿಯಾಗಿ ಬೆಳೆಸಿದರು.
ತಂದೆ ಸೈಫ್ ನನ್ನನ್ನು ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಬಿಡಲು ಬಂದಾಗ, ತಾಯಿ ಅಮೃತಾ ಸಿಂಗ್ ಸಹ ಇದ್ದರು. ಮೂವರು ನ್ಯೂಯಾರ್ಕ್‌ನಲ್ಲಿ ಒಟ್ಟಿಗೆ ಡಿನ್ನರ್‌ ಮಾಡಿದ್ದೆವು ಎಂದು ಸಾರಾ ಹೇಳಿದ್ದರು. 'ಅದು ಬೆಸ್ಟ್‌ ಟೈಮ್‌ ಆಗಿತ್ತು. ನನಗೆ ಕಾಲೇಜಿಗೆ ಬಿಡಲು ನನ್ನ ಪೆರೆಂಟ್ಸ್‌ ಜೊತೆಯಲ್ಲಿದ್ದರು. ಆ ಸಮಯದಲ್ಲಿ, ತಂದೆ ಮತ್ತು ನಾನು ಒಟ್ಟಿಗೆ ಊಟ ಮಾಡುತ್ತಿದ್ದೆವು, ಆಗ ನಾವು ತಾಯಿಯನ್ನು ಏಕೆ ಕರೆಯಬಾರದು ಎಂದು ಯೋಚಿಸಿದೆವು. ತಾಯಿಗೆ ಕರೆ ಮಾಡಿದ ನಂತರ ಅವಳು ಅಲ್ಲಿಗೆ ಬಂದಳು' ಎಂದು ಸಾರಾ ಹೇಳಿದ್ದಳು
'ನನಗೆ ಕೇವಲ ಒಂದು ಸಣ್ಣ ಝಲಕ್‌ ನೆನಪಿದೆ. ಅಮ್ಮ ನನ್ನ ಹಾಸಿಗೆಯನ್ನು ಹಾಕುತ್ತಿದ್ದಳು ಮತ್ತು ಪಪ್ಪಾ ಲ್ಯಾಂಪ್‌ಗೆ ಬಲ್ಬ್‌ ಹಾಕುತ್ತಿದ್ದರು. ಇದು ತುಂಬಾ ಸುಂದರವಾದ ನೆನಪು, ನಾನು ಯಾವಾಗಲೂ ಕಾಪಾಡಿ ಕೊಳ್ಳಲು ಬಯಸುತ್ತೇನೆ ಮತ್ತು ಇದು ಅವರ ಕೊನೆಯ ಬೇಟಿಯಾಗಿತ್ತು . ಮತ್ತೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿಲ್ಲ' ಎಂದು ಹೇಳಿದ ಸೈಫ್‌ ಪುತ್ರಿ.
ಸಂದರ್ಶನವೊಂದರಲ್ಲಿ ಸಾರಾ ತನ್ನ ತಂದೆ ಸೈಫ್‌ ಜೊತೆ ಏಕೆ ವಾಸಿಸುತ್ತಿಲ್ಲ ಎಂದು ಹೇಳಿದ್ದಳು. 'ನನ್ನ ತಾಯಿ ಬಾಲ್ಯದಿಂದಲೂ ನನ್ನನ್ನು ಬೆಳೆಸಿದ್ದಾರೆ. ಸಹೋದರ ಇಬ್ರಾಹಿಂ ನಂತರ ತಾಯಿ ನಮಗೆ ತನ್ನ ಪೂರ್ಣ ಸಮಯವನ್ನು ಕೊಟ್ಟಳು ಎಂದು ಹೇಳಿದ್ದಳು ಸಿಂಬಾ ನಟಿ
'ತಾಯಿ ನಮ್ಮನ್ನು ಬೆಳೆಸಲು ತನ್ನ ಕೆರಿಯರ್‌ಯನ್ನು ತ್ಯಜಿಸಿದರು, ಮತ್ತು ನನ್ನ ಪೋಷಕರು ಒಟ್ಟಿಗೆ ಸಂತೋಷವಾಗಿರದ ಮನೆಯಲ್ಲಿ ನಾನು ವಾಸಿಸಲು ಸಾಧ್ಯವಿಲ್ಲ' ಎಂದಿದ್ದಳು ಸಾರಾ ಆಲಿ ಖಾನ್‌
'ಪೋಷಕರು ಸಂತೋಷವಾಗಿರದ ಒಂದೇ ಮನೆಯಲ್ಲಿ ಇರುವುದಕ್ಕಿಂತ, ಅವರು ಪ್ರತ್ಯೇಕ ಮನೆಯಲ್ಲಿ ಉಳಿದು ಸಂತೋಷವಾಗಿರುವುದು ಒಳ್ಳೆಯದು. ನನಗೆ ಯಾವುದಕ್ಕೂ ಕೊರತೆಯಿಲ್ಲ. ಪಪ್ಪಾನನ್ನು ಭೇಟಿಯಾದಾಗ, ನಾವು ಅವರೊಂದಿಗೆ ತುಂಬಾ ಸಂತೋಷಪಡುತ್ತೇವೆ' ಎಂದ ಸಾರಾ.
ಅವರು ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದಿದ್ದಾಳೆ ನಟಿ ಸಾರಾ.
ಓದು ಮುಗಿಸಿದ ನಂತರ, ತೂಕ ಇಳಿಸಿ ಕೊಳ್ಳುವಲ್ಲಿ ತನ್ನ ಎಲ್ಲ ಗಮನವನ್ನು ಹರಿಸಿದ್ದಳು.
2018 ರಲ್ಲಿ 'ಕೇದಾರನಾಥ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸೈಫ್‌ ಅಮೃತಾ ಮಗಳು.
ಕೂಲಿ ನಂ. ಒನ್‌ ಮತ್ತು ಅತರಂಗಿ ರೇ ಸಾರಾಳ ಮುಂದಿನ ಸಿನಿಮಾಗಳು.

Latest Videos

click me!