ಕಿಂಗ್ ಖಾನ್ ಶಾರುಖ್ ಖಾನ್ ಮತ್ತು ಪತ್ನಿ ಗೌರಿ ಖಾನ್ ರೇಹಾನ್ ಸಿದ್ದಿಕಿ ಮತ್ತು ಟೋನಿ ಅಶಾಯ್ ಜತೆ ವ್ಯವಹಾರದ ನಂಟು ಹೊಂದಿದ್ದಾರೆ ಎಂದು ದೊಡ್ಡ ಸುದ್ದಿಯಾಗುತ್ತಿದೆ. ಸಿದ್ದಿಕಿ ಟೋನಿ ಭಾರತ ವಿರೋಧಿ ಹೇಳಿಕೆ ನೀಡುತ್ತ ಹಾಗೂ ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗೆ ಆರ್ಥಿಕ ನೆರವು ನೀಡುತ್ತಿದ್ದಾರೆಂದು ಆರೋಪ ಇದೆ. ರೇಹಾನ್ ಸಿದ್ದಿಕಿ ಪಾಕಿಸ್ತಾನದಲ್ಲಿ ಬಾಲಿವುಡ್ ಸಿನಿಮಾ ಹಂಚಿಕೆ ಕೆಲಸ ಮಾಡುತ್ತಿದ್ದವ.
undefined
ಶಾರುಖ್ ಖಾನ್, ಗೌರಿ ಟೋನಿ ಅಶಾಯ್ ಜತೆ ವ್ಯವಹಾರದ ನಂಟು ಹೊಂದಿದ್ದಾರೆ. ಅಶಾಯ್ ಅಮೆರಿಕದಲ್ಲಿ ನೆಲೆಸಿದ್ದು, ಕಾಶ್ಮೀರ ವಿಚಾರದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವುದು ವರದಿಯಾಗಿದೆ.
undefined
ವಾಸ್ತುಶಿಲ್ಪಿಯಾಗಿರುವ ಟೋನಿ ಅಶಾಯ್ ಜನಿಸಿದ್ದು ಕಾಶ್ಮೀರದಲ್ಲಿ. ಲಾಸ್ ಏಂಜಲೀಸ್ ನಲ್ಲಿ ಪ್ರಧಾನ ಕಚೇರಿ ಇಟ್ಟುಕೊಂಡಿರುವ ಹೊಂದಿರುವ ಟೋನಿ ಬಾಲಿವುಡ್ ಸ್ಟಾರ್ ಗಳ ಬಂಗಲೆಗಳನ್ನೂ ವಿನ್ಯಾಸಗೊಳಿಸಿದ್ದಾನೆ ಎನ್ನಲಾಗಿದೆ. ಕಾಶ್ಮೀರಿ ಯುವಕರು ಕಲ್ಲು ಮತ್ತು ಗನ್ ಗಳನ್ನು ಕೈಗೆತ್ತಿಕೊಳ್ಳಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದ.
undefined
ಇನ್ನು ರೇಹಾನ್ ಸಿದ್ದಿಕಿ ಪಾಕಿಸ್ತಾನದ ವ್ಯಕ್ತಿ, ಹೂಸ್ಟನ್ ನಲ್ಲಿರುವ ಸಿದ್ದಿಕಿ ಸ್ವಂತ ರೇಡಿಯೋ ಚಾನಲ್ ಒಂದನ್ನು ಹೊಂದಿದ್ದಾನೆ. ನಿರಂತರವಾಗಿ ಕಾಶ್ಮೀರದಲ್ಲಿರುವ ಉಗ್ರರನ್ನು ಬೆಂಬಲಿಸುತ್ತಿರುತ್ತಾನೆ. ಬಾಲಿವುಡ್ ದಿಗ್ಗಜರನ್ನು ಸೇರಿಸಿ ಸಂಗೀತ ಕಾರ್ಯಕ್ರಮವೊಂದನ್ನು ಏರ್ಪಾಟು ಮಾಡಿದ್ದ.
undefined
ತನ್ನ ರೆಡಿಯೋ ಚಾನಲ್ ಮುಖಾಂತರ ಭಾರತ ವಿರೋಧಿ ಕಾರ್ಯಕ್ರಮ ಬಿತ್ತಾರ ಮಾಡುತ್ತಲೇ ಬಂದಿದ್ದಾನೆ. ಒಟ್ಟಿನಲ್ಲಿ ಒಂದು ಕಡೆ ಬಿಜೆಪಿ ನಾಯಕನ ಆರೋಪ ಇನ್ನೊಂದು ಕಡೆ ಉಗ್ರ ಚಟುವಟಿಕೆಗೆ ಕುಮ್ಮಕ್ಕು ನೀಡುವವರೊಂದಿಗೆ ಕಿಂಗ್ ಖಾನ್ ನಂಟಿದೆ ಎಂಬುದಕ್ಕೆ ಸಂಬಂಧಿಸಿದ ಪೋಟೋ ವೈರಲ್ ಆಗುತ್ತಿದೆ.
undefined