ರೌಡಿ ಬೇಬಿ ನಂತ್ರ ರೆಕಾರ್ಡ್ ಸೆಟ್ ಮಾಡಿದ ಸಾರಂಗದರಿಯಾ..! ಸಾಯಿ ಪಲ್ಲವಿ ಡ್ಯಾನ್ಸ್‌ ಮತ್ತೊಮ್ಮೆ ಹಿಟ್

First Published | May 25, 2021, 3:06 PM IST
  • ಯೂಟ್ಯೂಬ್‌ನಲ್ಲಿ ಹೊಸ ರೆಕಾರ್ಡ್ ಮಾಡಿದ್ದ ರೌಡಿ ಬೇಬಿ
  • ಈಗ ಮತ್ತೊಂದು ಸೌತ್ ಹಾಡು ಸೂಪರ್ ಹಿಟ್
  • ಇದರಲ್ಲೂ ನಟಿಸಿದ್ದು ಸಾಯಿ ಪಲ್ಲವಿ
  • ಸಾರಂಗದರಿಯಾ ಡ್ಯಾನ್ಸ್‌ ಹೊಸ ದಾಖಲೆ
ಸಾಯಿ ಪಲ್ಲವಿ ಅವರ ಮ್ಯಾಜಿಕ್ ಯೂಟ್ಯೂಬ್‌ನಲ್ಲಿ ಮತ್ತೊಮ್ಮೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಸಾಯಿ ಪಲ್ಲವಿ ಮತ್ತು ಧನುಷ್ ಅಭಿನಯದ ರೌಡಿ ಬೇಬಿ ಹಾಡು 1 ಬಿಲಿಯನ್ ವೀಕ್ಷಣೆಗಳ ದಾಖಲೆಯನ್ನು ನಿರ್ಮಿಸಿತ್ತು.
Tap to resize

ಈಗ ಮತ್ತೆ ಸಾಯಿ ಪಲ್ಲವಿ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ.
ಈ ಮೂಲಕ ಸಾಯಿ ಪಲ್ಲವಿ ಡ್ಯಾನ್ಸ್ ಜನ ಎಷ್ಟು ಮೆಚ್ಚುತ್ತಾರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
ರೌಡಿ ಬೇಡಿ 1 ಬಿಲಿಯನ್ ವೀಕ್ಷಣೆ ಪಡೆದ ಮೊದಲ ದಕ್ಷಿಣ ಭಾರತದ ಫಿಲ್ಮ್ ಸಾಂಗ್ ಆಗಿತ್ತು.
ಈಗ ಸುಡ್ಡಲಾ ಅವರು ಬರೆದ ಮತ್ತು ಮಂಗ್ಲಿ ಹಾಡಿದ ಸಾರಂಗದರಿಯಾ ಹಾಡು 200 ಮಿಲಿಯನ್ ವೀಕ್ಷಣೆಗಳ ಗಡಿ ದಾಟಿದೆ.
ಈ ಹಾಡಿನ ಯಶಸ್ಸಿನ 90% ಮನ್ನಣೆ ಅದರಲ್ಲಿ ಸಾಯಿ ಪಲ್ಲವಿಯ ಉಪಸ್ಥಿತಿಗೆ ಹೋಗುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಈ ಹಾಡು ಫೆಬ್ರವರಿ 28 ರಂದು ಬಿಡುಗಡೆಯಾಗಿತ್ತು.
ಮೊದಲ 14 ದಿನಗಳಲ್ಲಿ 50 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಅಲಾ ವೈಕುಂಠಪುರಮುಲಾದ ಬುಟ್ಟಾ ಬೊಮ್ಮಾ ಮತ್ತು ರಾಮುಲೋ ರಾಮುಲಾ ಹಾಡಿನ ದಾಖಲೆಗಳನ್ನು ಮುರಿದಿದೆ.
ಸಾರಂಗದರಿಯಾ ಹಾಡು ಶೇಖರ್ ಕಮ್ಮುಲಾ ಅವರ "ಲವ್ ಸ್ಟೋರಿ" ಸಿನಿಮಾದ್ದು.
ಇದರಲ್ಲಿ ಸಾಯಿ ಪಲ್ಲವಿಯನ್ನು ಲಂಗ ದಾವಣಿಯಲ್ಲಿ ಕಾಣಬಹುದು
ಬಹುತೇಕ ಟಾಲಿವುಡ್ ಸಿನಿಮಾಗಳಂತೆ ಹಳ್ಳಿ ಹುಡುಗಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ನಟಿ
ಡ್ಯಾನ್ಸ್ ರಿಯಾಲಿಟಿ ಶೋ ಮೂಲಕವೇ ಹಿಟ್ ಆದ ಸಾಯಿ ಪಲ್ಲವಿ ಪ್ರೇಮಂ ಸಿನಿಮಾ ಮೂಲಕ ಬೆಳ್ಳಿ ಪರದೆಯಲ್ಲಿ ಮಿಂಚಿದ್ದರು
ಮಲಯಾಳಂ ಪ್ರೇಮಂನಲ್ಲಿ ಕಾಣಿಸಿಕೊಂಡು ಈಗ ನಟಿ ಟಾಲಿವುಡ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ.

Latest Videos

click me!