ಸಾಯಿ ಪಲ್ಲವಿ ಮನೆಯಲ್ಲಿ ಮದುವೆ ಸಂಭ್ರಮ; ಹುಡುಗ ಫೋಟೋ ರಿವೀಲ್ ಮಾಡಿದ ತಂಗಿ ಪೂಜಾ!

First Published | Jan 19, 2024, 10:02 AM IST

ಸಾಮಾಜಿಕ ಜಾಲತಾಣದಲ್ಲಿ ಬಾಯ್‌ಫ್ರೆಂಡ್ ಫೋಟೋ ಅಪ್ಲೋಡ್ ಮಾಡಿದ ಪೂಜಾ. ಮದುವೆ ಮನೆ ಕಳೆ ಇಮ್ಯಾಜಿನ್ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು....

ಬಹುಭಾಷಾ ನಟಿ ಸಾಯಿ ಪಲ್ಲವಿ ಮುದ್ದಿನ ತಂಗಿ ಪೂಜಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದು, ಸ್ಪೆಷಲ್ ವ್ಯಕ್ತಿ ಫೋಟೋ ರಿವೀಲ್ ಮಾಡಿದ್ದಾರೆ.

ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಪೂಜಾ ಮದುವೆ ಆಗ್ತಿದ್ದಾರೆ ಅನ್ನೋ ಸುದ್ದಿ ಹೊರ ಬಂದಿದೆ. ಇದಕ್ಕೆ ಕಾರಣ ಪೂಜಾ ಅಪ್ಲೋಡ್ ಮಾಡಿರುವ ವಿಡಿಯೋ.

Tap to resize

 ಸೆಲ್ಫ್‌ಲೆಸ್‌ ಆಗಿ ಒಬ್ಬರನ್ನು ಪ್ರೀತಿ ಮಾಡುವುದು ಹೇಗೆಂದು ನಾನು ಕಲಿತಿದ್ದು ಈ ವ್ಯಕ್ತಿಯಿಂದಲೇ. ತಾಳ್ಮೆ ಪ್ರೀತಿಯಲ್ಲಿ ಮತ್ತು ಜೀವದಲ್ಲಿ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಪೂಜಾ ಬರೆದುಕೊಂಡಿದ್ದಾರೆ.

ಇದು ವಿನೀತ್ ನನ್ನ ಜೀವನ ಸೂರ್ಯಕಿರಣಗಳು. ನನ್ನ ಪಾಟ್ನರ್‌ ಇನ್ ಕ್ರೈಮ್‌..ಈಗ ನನ್ನ ಜೀವನದ ಪಾಟ್ನರ್ ಎಂದು ಪೂಜಾ ಹೇಳಿದ್ದಾರೆ.

ಪೂಜಾ ಮತ್ತು ವಿನೀತ್ ಸೆರೆ ಹಿಡಿದುಕೊಂಡಿರುವ ಪ್ರತಿಯೊಂದು ಫೋಟೋ ಮತ್ತು ವಿಡಿಯೋವನ್ನು ಪೂಜಾ ಅಪ್ಲೋಡ್ ಮಾಡಿದ್ದಾರೆ.ಈ ವಿಡಿಯೋ ಎಲ್ಲರಿಗೂ ಸುಳಿವು ನೀಡಿದೆ.

ಪೂಜಾ ಅಫೀಶಿಯಲ್ ಮಾಡಲು ಕಾರಣ ಮದುವೆ ನಿಶ್ಚಯವಾಗಿದೆ ಎಂದು ಕೆಲವರು ಅಂದುಕೊಳ್ಳುತ್ತಿದ್ದಾರೆ. ಆದರೆ ಪಲ್ಲವಿ ಮೊದಲು ಮದುವೆ ಆಗುತ್ತಿಲ್ಲ ಅನ್ನೋ ಬೇಸರವೂ ಇದೆ.

ಏನ್ ಮೇಡಂ ಸಿನಿಮಾ ಓದು ಅಂತ ನೀವು ಬ್ಯುಸಿಯಾಗಿಬಿಟ್ರಿ. ಈಗ ನಿಮ್ಮ ತಂಗಿ ಮದುವೆಯಾಗುತ್ತಿದ್ದಾಳೆ. ಮದುವೆಯಾಗುವಷ್ಟು ದೊಡ್ಡ ಹುಡುಗಿ ತಂಗಿಯಾಗಿದ್ದಾರೆ ಅಂದ್ರೆ ನಿಮ್ಮ ವಯಸ್ಸು ಎಂದು ನೆಟ್ಟಿಗರು ಕೇಳಿದ್ದಾರೆ. 

ಸಾಯಿ ಪಲ್ಲವಿ ಸದ್ಯ ಎಸ್‌ಕೆ 21, ರಾಮಾಯಣ ಮತ್ತು ತಂದೆಲಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ರಣಬೀರ್ ಕಪೂರ್ ಮತ್ತು ಯಶ್ ನಟನೆಯ ಚಿತ್ರದಲ್ಲಿ ಸೀತಾ ಪಾತ್ರ ಮಾಡಲಿದ್ದಾರಂತೆ. 

Latest Videos

click me!