ತಮ್ಮ ಜೊತೆ ತಿಕ್ಕ ಚಿತ್ರದಲ್ಲಿ ನಟಿಸಿದ್ದ ಲಾರಿಸ್ಸಾ ಬೊನೆಸಿಗೆ ತಾವು ಪ್ರಪೋಸ್ ಮಾಡಿದ್ದಾಗಿ ಸಾಯಿ ಧರಮ್ ತೇಜ್ ಸ್ವತಃ ಹೇಳಿದ್ದರು. ಆದರೆ ಆಕೆ ಈಗಾಗಲೇ ಬೇರೆಯವರ ಜೊತೆ ಸಂಬಂಧದಲ್ಲಿದ್ದರಿಂದ ತಿರಸ್ಕರಿಸಿದ್ದಾಗಿ ತಿಳಿಸಿದ್ದರು. ಬೈಕ್ ಅಪಘಾತದಿಂದ ಚೇತರಿಸಿಕೊಂಡು ಪುನರ್ಜನ್ಮ ಪಡೆದ ಸಾಯಿ ಧರಮ್ ತೇಜ್ ಮತ್ತೆ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಿರೂಪಾಕ್ಷ ಚಿತ್ರದ ಮೂಲಕ ಸೂಪರ್ ಹಿಟ್ ಪಡೆದಿದ್ದಾರೆ.