ತೆಲಂಗಾಣದ ಬಾಲಾಜಿ ದೇಗುಲಕ್ಕೆ ಪ್ರಿಯಾಂಕಾ ಚೋಪ್ರಾ ಭೇಟಿ: ಹೊಸ ಅಧ್ಯಾಯ ಆರಂಭವಾಗಿದೆ ಎಂದಿದ್ಯಾಕೆ?

Published : Jan 23, 2025, 09:57 AM IST

ಎಸ್.ಎಸ್. ರಾಜಮೌಳಿ ಹಾಗೂ ಮಹೇಶ್‌ ಬಾಬು ಕಾಂಬಿನೇಶನ್‌ನ ಪ್ಯಾನ್ ವರ್ಲ್ಡ್‌ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದು, ಆ ಸಿನಿಮಾ ಕೆಲಸಕ್ಕಾಗಿ  ಪ್ರಿಯಾಂಕಾ ಚೋಪ್ರಾ ಹೈದರಾಬಾದ್‌ಗೆ ಬಂದಿದ್ದಾರೆ ಎನ್ನಲಾಗಿದೆ.

PREV
16
ತೆಲಂಗಾಣದ ಬಾಲಾಜಿ ದೇಗುಲಕ್ಕೆ ಪ್ರಿಯಾಂಕಾ ಚೋಪ್ರಾ ಭೇಟಿ: ಹೊಸ ಅಧ್ಯಾಯ ಆರಂಭವಾಗಿದೆ ಎಂದಿದ್ಯಾಕೆ?

ಹಾಲಿವುಡ್‌, ಬಾಲಿವುಡ್‌ನಲ್ಲೆಲ್ಲ ಕಮಾಲ್‌ ಮಾಡಿರುವ ದೇಸಿ ಗರ್ಲ್‌ ಪ್ರಿಯಾಂಕಾ ಚೋಪ್ರಾ ಇದೀಗ ತೆಲಂಗಾಣದ ಚಿಲ್ಕೂರು ಬಾಲಾಜಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. 

26

‘ಬಾಲಾಜಿ ದರ್ಶನದೊಂದಿಗೆ ಹೊಸ ಅಧ್ಯಾಯ ಆರಂಭವಾಗಿದೆ. ನಮ್ಮೆಲ್ಲರ ಹೃದಯ ಶಾಂತಿಯಿಂದ ತುಂಬುವಂತಾಗಲಿ. ಎಲ್ಲೆಡೆ ಸಂತೋಷ, ಸಮೃದ್ಧಿ ನೆಲೆಸಲಿ’ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

36

ಜೊತೆಗೆ ರಾಮ್‌ ಚರಣ್‌ ಪತ್ನಿ ಉಪಾಸನಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಎಸ್.ಎಸ್. ರಾಜಮೌಳಿ ಹಾಗೂ ಮಹೇಶ್‌ ಬಾಬು ಕಾಂಬಿನೇಶನ್‌ನ ಪ್ಯಾನ್ ವರ್ಲ್ಡ್‌ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದು, ಆ ಸಿನಿಮಾ ಕೆಲಸಕ್ಕಾಗಿ ಹೈದರಾಬಾದ್‌ಗೆ ಬಂದಿದ್ದಾರೆ ಎನ್ನಲಾಗಿದೆ.

46

ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಮುಂದಿನ ಸಿನಿಮಾ ಅಡ್ವೇಂಚರ್ ಕತೆಯನ್ನು ಒಳಗೊಂಡಿದ್ದು, ಸಿನಿಮಾದ ಕತೆ ಕಾಡುಗಳ ನಡುವೆ ನಡೆಯುವ ಅದ್ಭುತ ಸಾಹಸಗಳನ್ನು ಒಳಗೊಂಡಿದೆ. 

56

ನಟಿ ಪ್ರಿಯಾಂಕಾ ಚೋಪ್ರಾ ಕೈನಲ್ಲಿರುವ ಸಿನಿಮಾಗಳ ಬಗ್ಗೆ ಹೇಳಬೇಕೆಂದರೆ, ಸದ್ಯ ಎರಡು ಹಾಲಿವುಡ್ ಪ್ರಾಜೆಕ್ಟ್​ಗಳಲ್ಲಿ ಈ ನಟಿ ಬ್ಯುಸಿಯಾಗಿದ್ದಾರೆ. ಒಂದು ಆಕ್ಷನ್ ವೆಬ್ ಸೀರೀಸ್, ಮತ್ತೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. 
 

66

ಇವುಗಳ ಜೊತೆ ಝೋಯಾ ಅಖ್ತರ್ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಆಲಿಯಾ ಭಟ್, ಕರೀನಾ ಕಪೂರ್ ಅವರುಗಳ ಜೊತೆಗೆ ಸಿನಿಮಾ ಒಂದರಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ. 

Read more Photos on
click me!

Recommended Stories