ರಾಜಕೀಯದಲ್ಲೂ ಕಣಕ್ಕಿಳಿದ ರಾಜೇಂದ್ರನ್: ನಟರಾಗಿರುವುದರ ಜೊತೆಗೆ ಎಸ್ ಎಸ್ ಆರ್ ಪಿಕ್ಚರ್ಸ್ ಸಂಸ್ಥೆಯ ಮೂಲಕ ತಂಗ ರತ್ನಂ, ಮಣಿಮಕುಡಂ, ಅಲ್ಲೀ ಮುಂತಾದ ಚಿತ್ರಗಳನ್ನು ನಿರ್ಮಿಸಿದರು. ಅದೇ ರೀತಿ ಮಣಿಮಕುಡಂ ಮತ್ತು ಅಲ್ಲೀ ಚಿತ್ರಗಳನ್ನು ಅವರೇ ನಿರ್ದೇಶಿಸಿದ್ದಾರೆ. ರಾಜಕೀಯದಲ್ಲೂ ಸಕ್ರಿಯರಾಗಿದ್ದ ರಾಜೇಂದ್ರನ್, ದ್ರಾವಿಡ ಮುನ್ನೇತ್ರ ಕಳಗಂನ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. 1962 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೇಣಿ ಕ್ಷೇತ್ರದಿಂದ ಸ್ಪರ್ಧಿಸಿ ಡಿಎಂಕೆ ಪಕ್ಷದಿಂದ ಗೆದ್ದರು. ವಿಧಾನಸಭೆಗೆ ಆಯ್ಕೆಯಾದ ಮೊದಲ ಭಾರತೀಯ ಚಲನಚಿತ್ರ ನಟ ಇವರು ಎಂಬುದು ಗಮನಾರ್ಹ. ಡಿಎಂಕೆ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಇವರು, ನಂತರ ಡಿಎಂಕೆ ಅಧ್ಯಕ್ಷ ಕರುಣಾನಿಧಿ ಅವರೊಂದಿಗೆ ಭಿನ್ನಾಭಿಪ್ರಾಯದಿಂದ ಡಿಎಂಕೆ ತೊರೆದು ಅಣ್ಣಾಡಿಎಂಕೆ ಸೇರಿದರು. ಆಂಡಿಪಟ್ಟಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು.