ಇವರ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾಗಳು ಕನ್ನಡದಲ್ಲಿ ಜಯಭೇರಿ ಬಾರಿಸುವ ಹೊತ್ತಿಗೆ ಇವರು ಕನ್ನಡಿಗರ ಪಾಲಿಗೆ ‘ಪುಟ್ಟಿ’ ಯೇ ಆಗಿಹೋದರು. ಕನ್ನಡದಲ್ಲಿ ಗಳಿಸಿದ ಯಶಸ್ಸಿನಿಂದಾಗಿ ಇವರನ್ನು ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ಗಮನಿಸುವುದಕ್ಕೆ ಶುರು ಮಾಡಿತು. ಸದ್ದಿಲ್ಲದೆ ಪ್ರಶಾಂತ್ ನೀಲ್ ಹಾಗೂ ಜೂ.ಎನ್‌ಟಿಆರ್ ಕಾಂಬಿನೇಶನ್‌ನ ‘ಡ್ರ್ಯಾಗನ್’ ಚಿತ್ರಕ್ಕೆ ನಾಯಕಿ ಆದರು. ತೆಲುಗಿನ ‘ಅಪ್ಪುಡೊ ಇಪ್ಪುಡೊ ಎಪ್ಪುಡೊ’ ಚಿತ್ರಕ್ಕೂ ನಾಯಕಿ ಆಗಿದ್ದು, ಈ ಚಿತ್ರಕ್ಕೆ ಶೂಟಿಂಗ್ ಮುಗಿದಿದೆ.