ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿನ ಸಿನಿಮಾ ಡಿಸ್ಟ್ರಿಬ್ಯೂಷನ್ ಕುರಿತ ಮಾಹಿತಿಯನ್ನು ಹೊಂಬಾಳೆ ಫಿಲಂಸ್ ನೀಡಿದ್ದು, ಡ್ರೀಮ್ ಸ್ಕ್ರೀನ್ಸ್ ಇಂಟರ್‌ನ್ಯಾಷನಲ್ ಈ ಎರಡು ದೇಶಗಳಲ್ಲಿ ಸಿನಿಮಾ ವಿತರಣೆ ಮಾಡಲಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ವಿಶ್ವಾದ್ಯಂತ ಅಕ್ಟೋಬರ್ 2ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಗೆ ಕೇವಲ 21 ದಿನಗಳಷ್ಟೇ ಬಾಕಿ ಇವೆ. ಇದೀಗ ಚಿತ್ರ ವಿತರಣೆಯ ಕಾರ್ಯ ಭರದಿಂದ ನಡೆಯುತ್ತಿದೆ.
26
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿನ ಸಿನಿಮಾ ಡಿಸ್ಟ್ರಿಬ್ಯೂಷನ್ ಕುರಿತ ಮಾಹಿತಿಯನ್ನು ಹೊಂಬಾಳೆ ಫಿಲಂಸ್ ನೀಡಿದ್ದು, ಡ್ರೀಮ್ ಸ್ಕ್ರೀನ್ಸ್ ಇಂಟರ್‌ನ್ಯಾಷನಲ್ ಈ ಎರಡು ದೇಶಗಳಲ್ಲಿ ಸಿನಿಮಾ ವಿತರಣೆ ಮಾಡಲಿದೆ.
36
ಕೇರಳದಲ್ಲಿ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅವರ ಪೃಥ್ವಿರಾಜ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ವಿತರಿಸಲಿದೆ. ಕಾಂತಾರದ ಮೊದಲ ಭಾಗವನ್ನೂ ಪೃಥ್ವಿರಾಜ್ ಅವರೇ ಕೇರಳದಲ್ಲಿ ವಿತರಣೆ ಮಾಡಿದ್ದರು.
ಉತ್ತರ ಭಾರತ ಹಾಗು ನೇಪಾಳದಲ್ಲಿ ಕಾಂತಾರ ಚಾಪ್ಟರ್ ಒನ್ ಸಿನಿಮಾ ವಿತರಣೆ ಮಾಡುತ್ತಿರೋದು AA Films ನ ಅನಿಲ್ ತಡಾನಿ. ಕೆಜಿಎಫ್ ಹಾಗು ಬಾಹುಬಲಿ ಸಿನಿಮಾಗಳನ್ನ ಹಿಂದಿ ಭಾಷೆಯಲ್ಲಿ ಪ್ರೇಕ್ಷಕರಿಗೆ ತಲುಪಿಸಿದ್ದು ಇವರೇ.
56
ಈಗ ಕಾಂತಾರ ಚಾಪ್ಟರ್ ಒನ್ ಸಿನಿಮಾ ವಿತರಣೆಯನ್ನೂ ಮಾಡುತ್ತಿದ್ದಾರೆ. ಬರೋಬ್ಬರಿ 160 ಕೋಟಿಗೆ ಹಿಂದಿ ವಿತರಣೆ ಹಕ್ಕನ್ನ ಸೇಲ್ ಮಾಡಲಾಗಿದೆ ಅನ್ನೋ ಮಾಹಿತಿ ಇದೆ.
66
ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಕೆಲಸದಲ್ಲಿ ಇನ್ನೂ ಬ್ಯುಸಿ ಆಗಿದ್ದಾರೆ. ಆದ್ರೆ ಈ ಸಿನಿಮಾ ಟ್ರೇಲರ್ ಯಾವಾಗ ಬರುತ್ತೆ ಅನ್ನೋ ಕುತೂಲಹದ ಕಣ್ಣುಗಳು ಕಾಯ್ತಾ ಇವೆ. ಇದಕ್ಕೆ ಬೆಸ್ಟ್ ದಿನ ಅಂದ್ರೆ ನಾಡ ಹಬ್ಬ ದಸರಾ. ಸೆಪ್ಟೆಂಬರ್ 22ಕ್ಕೆ ಕಾಂತಾರ ಟ್ರೈಲರ್ ರಿಲೀಸ್ ಆಗುತ್ತೆ ಅಂತ ಹೇಳಲಾಗುತ್ತಿದೆ.