ಇಂದು ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬ. 42ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ನಟನಿಗೆ ಕುಟುಂಬಸ್ಥರು, ಸಿನಿರಂಗದ ತಾರೆಯರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.
27
ವಿಶೇಷವಾಗಿ ಕಾಂತಾರ ಚಿತ್ರತಂಡ ಕೂಡಾ ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು, ಸಿನಿಮಾದ ಹೊಸ ಪೋಸ್ಟರನ್ನು ರಿಲೀಸ್ ಮಾಡಿದೆ. ಜೊತೆಗೆ ಚಿತ್ರದ ಬಗ್ಗೆ ದೊಡ್ಡ ಅಪ್ಡೇಟ್ ಅನ್ನು ನೀಡಿದೆ.
37
ಸಾಮಾಜಿಕ ಜಾಲತಾಣದಲ್ಲಿ ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್‌ನವರು, ರಿಷಬ್ ಶೆಟ್ಟಿ ಅವರ ಪರಶುರಾಮನ ಅವತಾರದಲ್ಲಿರುವ ಪೋಸ್ಟರ್ ಅನ್ನು ಶೇರ್ ಮಾಡಿದ್ದು, ಚಿತ್ರದ ರಿಲೀಸ್ ಡೇಟ್ ಅನ್ನು ಹೈಲೈಟ್ ಮಾಡಿದ್ದಾರೆ.
ದಂತಕಥೆಗಳು ಹುಟ್ಟುವ ಮತ್ತು ಅರಣ್ಯ ಘರ್ಜನೆಯು ಪ್ರತಿಧ್ವನಿಸುವ ಸ್ಥಳ, ಲಕ್ಷಾಂತರ ಜನರನ್ನು ಆಕರ್ಷಿಸಿದ ಮಾಸ್ಟರ್ ಪೀಸ್ ಕಾಂತಾರದ ಪ್ರೀಕ್ವೆಲ್. ದಂತಕಥೆಯ ಹಿಂದಿರುವ ಶಕ್ತಿ ರಿಷಬ್ ಶೆಟ್ಟಿ ಅವರಿಗೆ ಜನ್ಮದಿನದ ಶುಭಾಶಯಗಳು.
57
ಡಿವೈನ್ ಸಿನಿಮ್ಯಾಟಿಕ್ನ ಬಹುನಿರೀಕ್ಷಿತ ಪ್ರೀಕ್ವೆಲ್. ಕಾಂತಾರ ಅಧ್ಯಾಯ 1 ಅಕ್ಟೋಬರ್ 2, 2025ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ದಂತಕಥೆಯ ಮುನ್ನುಡಿ.. ಆ ನುಡಿಗೊಂದು ಪರಿಚಯ.. ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ ಎಂದು ಕ್ಯಾಪ್ಷನ್‌ನಲ್ಲಿ ಬರೆದುಕೊಂಡಿದ್ದಾರೆ.
67
ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ರಿಷಬ್ ಶೆಟ್ಟಿ ಅವರು ಒಂದು ಕೈಯಲ್ಲಿ ಕೊಡಲಿ ಹಾಗೂ ಗುರಾಣಿ ಹಿಡಿದಿದ್ದು, ಅದಕ್ಕೆ ಬಾಣಗಳು ಚುಚ್ಚಿಕೊಂಡಿವೆ. ಬ್ಯಾಕ್‌ಗ್ರೌಂಡ್‌ನಲ್ಲಿ ಬೆಂಕಿಯಿದ್ದು, ರಿಷಬ್ ಶೆಟ್ಟಿ ಆಕ್ರೋಶದ ಲುಕ್‌ನಲ್ಲಿ ಆರ್ಭಟಿಸಿದ್ದಾರೆ.
77
ಇನ್ನು ಕಾಂತಾರ ಸೆಟ್‌ನಲ್ಲಿ ಸಾಲು ಸಾಲು ಅವಘಡಗಳ ಹಿನ್ನೆಲೆಯಲ್ಲಿ ಕಾಂತಾರ 1 ಅಂದುಕೊಂಡ ಡೇಟ್‌ನಲ್ಲಿ ರಿಲೀಸ್ ಆಗಲ್ಲ ಅನ್ನೋ ವದಂತಿಗಳಿಗೆ ಮತ್ತೊಮ್ಮೆ ಹೊಂಬಾಳೆ ಫಿಲಂಸ್ ಬ್ರೇಕ್ ಹಾಕಿದೆ. ನಿಗದಿಯಂತೆ ಚಿತ್ರವು ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ.