ಹೀಗೆ ಕೆಎಸ್ಆರ್ ದಾಸ್ ನಿರ್ದೇಶನದಲ್ಲಿ ಈ ಚಿತ್ರ ಶುರುವಾಯಿತು. ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸೀನಿಯರ್ ನಟಿ ಶಾರದ ನಟಿಸಿದ್ರು. ವಿಜಯಶಾಂತಿ ವಕೀಲಳಾಗಿ ನಟಿಸಿದ್ರು. ಹೀರೋಯಿನ್ ಪಾತ್ರದಲ್ಲಿ ರಾಧ, ಮತ್ತೊಂದು ಮುಖ್ಯ ಪಾತ್ರದಲ್ಲಿ ಶರತ್ ಬಾಬು ನಟಿಸಿದ್ರು. 1987ರಲ್ಲಿ 'ಮುದ್ದಾಯಿ' ಹೆಸರಿನಲ್ಲಿ ಈ ಚಿತ್ರ ರಿಲೀಸ್ ಆಯ್ತು. ಸೂಪರ್ ಸ್ಟಾರ್ ಕೃಷ್ಣ ಅವರ ವೃತ್ತಿಜೀವನದ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಯಿತು. ಫ್ಲಾಪ್ ಸಿನಿಮಾ ರೀಮೇಕ್ ಆದ್ರೂ ಕೃಷ್ಣ ಈ ಚಿತ್ರ ಮಾಡೋಕೆ ಹಿಂದೆ ಸರಿಯಲಿಲ್ಲ. ಒಟ್ಟಾರೆಯಾಗಿ ಚಿರಂಜೀವಿ, ಬಾಲಕೃಷ್ಣ, ಮೋಹನ್ ಬಾಬು ಒಂದು ಸೂಪರ್ ಹಿಟ್ ಸಿನಿಮಾವನ್ನು ಮಿಸ್ ಮಾಡಿಕೊಂಡ್ರು.