ಸುಶಾಂತ್‌ ಸಿಂಗ್‌ ಸಾವಿಗಾಗಿ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಮಾಟ-ಮಂತ್ರ ಮಾಡಿದ್ರಾ?

First Published | Oct 6, 2023, 9:38 AM IST

ಮೂರು ವರ್ಷಗಳ ಹಿಂದೆ ಸಾವಿಗೀಡಾದ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಕಾರಣವೇನು ಎಂಬುದು ಇವತ್ತಿಗೂ ನಿಗೂಢವಾಗಿಯೇ ಉಳಿದಿದೆ. ಆರಂಭದಲ್ಲೇ ನಟನ ಸಾವಿನ ಹಿಂದೆ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಕೈವಾಡವಿರೋ ವಿಚಾರ ಚರ್ಚೆಯಾಗಿತ್ತು. ಸದ್ಯ ಸುಶಾಂತ್ ಸಿಂಗ್ ರಜಪೂತ್ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಮಾಡಿದ ಆರೋಪಕ್ಕೆ ರಿಯಾ ಚಕ್ರವರ್ತಿ ಪ್ರತಿಕ್ರಿಯಿಸಿದ್ದಾರೆ: 

ಬಾಲಿವುಡ್  ನಟ ಸುಶಾಂತ್ ಸಿಂಗ್ ರಜಪೂತ್ ಅವರು ಎಲ್ಲರನ್ನೂ ಅಗಲಿ ಮೂರು ವರ್ಷಗಳೇ ಕಳೆದಿದೆ. ಇವರದ್ದು ಸಹಜ ಸಾವಲ್ಲ, ಕೊಲೆ ಎಂದು ಹೇಳುತ್ತಿರುವವರೇ ಬಹುತೇಕ ಮಂದಿ. ಆದರೆ ಅವರ ಸಾವಿನ ರಹಸ್ಯ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.   2020 ಜೂನ್ 14ರಂದು ನಿಧನರಾದ  ಸುಶಾಂತ್ ಸಿಂಗ್ ರಜಪೂತ್  ಅವರ ಸಾವಿನ  ಪ್ರಕರಣ ಸದ್ಯ ಸಿಬಿಐ ಅಂಗಳದಲ್ಲಿದೆ. ಆದರೆ ಇನ್ನೂ ಕಾರಣ ಬಹಿರಂಗವಾಗಿಲ್ಲ. 

ತನಿಖೆಯ ಪ್ರಗತಿಯ ಬಗ್ಗೆಯೂ ಸಿಬಿಐ ತುಟಿ ಬಿಚ್ಚುತ್ತಿಲ್ಲ.  ಆದರೆ ಸುಶಾಂತ್ ಸಾವು ತೀವ್ರ ಚರ್ಚೆ ಹುಟ್ಟುಹಾಕುತ್ತಲೇ ಇದೆ. ಈ ಸಾವು ಕೆಲವು ಬಾಲಿವುಡ್ ಸ್ಟಾರ್ಸ್​ಗೆ ಸಂಕಷ್ಟ ತಂದಿತ್ತು  ಎನ್ನುವಷ್ಟರಲ್ಲಿ ಪ್ರಕರಣ ತನಿಖೆಯ ಪ್ರಗತಿ ನಿಧಾವಾಯಿತು ಎಂದು ಆರೋಪಿಸಲಾಗುತ್ತಿದೆ. ನಟನ  ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಲೇ ಸಾಗಿದೆ.  

Tap to resize

ಸುಶಾಂತ್ ಸಿಂಗ್ ಮತ್ತು ರಿಯಾ ಚಕ್ರವತಿ ಪ್ರೀತಿಸುತ್ತಿದ್ದರು ಎನ್ನಲಾಗಿತ್ತು. ಸುಶಾಂತ್ ಸಾವಿನ ಬಳಿಕ ರಿಯಾ ಚಕ್ರವರ್ತಿ ಅವರು ಸಾವಿನ ಕುರಿತ ಮಾದಕವಸ್ತು ಆರೋಪದಲ್ಲಿ ಸುಮಾರು ಒಂದು ತಿಂಗಳು ಸೆರೆವಾಸ ಅನುಭವಿಸಿದರು.

ಪ್ರಕರಣ ಸಂಬಂಧ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಸದ್ಯ ಸುಶಾಂತ್ ಸಿಂಗ್ ರಜಪೂತ್ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಮಾಡಿದ ಆರೋಪಕ್ಕೆ ರಿಯಾ ಚಕ್ರವರ್ತಿ ಪ್ರತಿಕ್ರಿಯಿಸಿದ್ದಾರೆ: 

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ನನ್ನನ್ನು ಮಾಟಗಾತಿ ಎಂದು ಹೇಗೆ ಬ್ರಾಂಡ್ ಮಾಡಲಾಯಿತು ಎಂಬುದನ್ನು ನಟಿ ವಿವರಿಸಿದ್ದಾರೆ. ದಿವಂಗತ ನಟನ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಮಾಡಿದ ಆರೋಪಗಳು ಮತ್ತು ಮಾಟಗಾತಿ ಎಂದು ಕರೆದಿರುವುದು ಅವರ ಮೇಲೆ ಪರಿಣಾಮ ಬೀರಿದೆಯೇ ಎಂದು ಕೇಳಿದಾಗ, ರಿಯಾ ಚಕ್ರವರ್ತಿ 'ನನ್ನನ್ನು ಜನರು ಮಾಟಗಾತಿ ಎಂದು ಕರೆಯುವುದನ್ನು ಇಷ್ಟಪಡುತ್ತೇನೆ. ಇದು ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಬಹುಶಃ ನನಗೆ ಬ್ಲ್ಯಾಕ್ ಮ್ಯಾಜಿಕ್ ಮಾಡುವುದು ಹೇಗೆಂದು ತಿಳಿದಿರಬಹುದು' ಎಂದಿದ್ದಾರೆ.

ರಜಪೂತ್, 34, ಜೂನ್ 14, 2020 ರಂದು ಉಪನಗರ ಬಾಂದ್ರಾದಲ್ಲಿನ ಅವರ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ರಿಯಾ ಚಕ್ರವರ್ತಿ ವಿರುದ್ಧ ರಜಪೂತ್ ಅವರ ಪೋಷಕರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ದಾಖಲಿಸಿದ್ದರು. ನಂತರ, ಆಕೆಯ ವಾಟ್ಸಾಪ್‌ ಚಾಟ್‌ ಆಧಾರದ ಮೇಲೆ ಮಾದಕವಸ್ತು ಸಂಗ್ರಹಣೆಯ ಆರೋಪದ ಮೇಲೆ ತನಿಖೆಯನ್ನು ಪ್ರಾರಂಭಿಸಲಾಯಿತು. 

ಸುಶಾಂತ್ ಸಾವಿಗೆ ರಿಯಾಳೆ ಕಾರಣ. ಆಕೆ ಆತ ಆತ್ಮಹತ್ಯೆ ಮಾಡಲು ಪ್ರಚೋದನೆ ನೀಡಿದ್ದಳು. 15 ಕೋಟಿ ಸುಶಾಂತ್ ಖಾತೆಯಿಂದ ವರ್ಗಾಯಿಸಿದ್ದಳು, ಸುಶಾಂತ್ ಸಹೋದರಿ ರಾಣಿ ಜೊತೆಗಿರುವ ಸಂದರ್ಭ ರಿಯಾ 5 ದಿನದಲ್ಲಿ ಸುಮಾರು 25 ಸಲ ಫೋನ್ ಮಾಡಿದ್ದಳು. ಜನವರಿಯ 20-24ರ ನಡುವೆ ಸುಶಾಂತ್ ಚಂಡೀಗಡಕ್ಕೆ ಹೋಗಿದ್ದಾಗ ಈ ಘಟನೆ ನಡೆದಿತ್ತು ಎಂದು ಸುಶಾಂತ್ ತಂದೆ ಕೆಕೆ ಸಿಂಗ್ ಆರೋಪಿಸಿದ್ದರು.

ರಿಯಾ ಹಾಗೂ ಆಕೆಯ ಕುಟುಂಬಸ್ಥರು ನನ್ನನ್ನು ಮೆಂಟಲ್ ಹಾಸ್ಪಿಟಲ್‌ಗೆ ದಾಖಲಿಸಲು ಪ್ರಯತ್ನಿಸುತ್ತಿದ್ದಾರೆ. ನನಗೆ ಹೋಗಲು ಇಷ್ಟವಿಲ್ಲ. ಮುಂಬೈನಿಂದ ಮನೆ ಖಾಲಿ ಮಾಡಿ ಹಿಮಾಚಲ ಪ್ರದೇಶದಲ್ಲಿರುತ್ತೇನೆ ಎಂದು ಸುಶಾಂತ್ ಸಿಂಗ್ ಹೇಳಿದ್ದ. ನಂತರದಲ್ಲಿ 2 ದಿನ ಚಂಡೀಗಡದಲ್ಲಿ ಸಹೋದರಿ ರಾಣಿ ಜೊತೆಗೆ ಸುಶಾಂತ್ ಸಿಂಗ್ ವಾಸವಿದ್ದರು. ನಂತರದಲ್ಲಿ ಜನವರಿ 24-25ಕ್ಕೆ ಮುಂಬೈಗೆ ಮರಳಿದ್ದರು ಎಂದು ಮಾಹಿತಿ ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ, ಚಕ್ರವರ್ತಿ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಸೆಪ್ಟೆಂಬರ್ 2020 ರಲ್ಲಿ ಬಂಧಿಸಿತು. ನಂತರ ಬೈಕುಲ್ಲಾ ಜೈಲಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಸುಮಾರು ಆರು ವಾರಗಳನ್ನು ಕಳೆದರು. ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.

Latest Videos

click me!