ಮುಂಬೈ(ಜು. 14) ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಮ್ಮನ್ನು ಅಗಲಿ ಒಂದು ತಿಂಗಳು ಕಳೆದಿವೆ. ಇದೀಗ ಅವರ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಮೌನ ಮುರಿದು ಸುದೀರ್ಘ ಪತ್ರದ ಮೂಲಕ ಭಾವನೆ ಹೊರಕ್ಕೆ ಹಾಕಿದ್ದಾರೆ. ಇಸ್ಟಾಗ್ರ್ಯಾಮ್ ನಲ್ಲಿ ರಿಯಾ ಚಕ್ರವರ್ತಿ ಸುಶಾಂತ್ ಕುರಿತು ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ನಿಮ್ಮನ್ನು ಕಳೆದುಕೊಂಡು ಇಷ್ಟು ದಿನವಾಗಿದೆ. ಈಗಲೂ ನನ್ನ ಭಾವನೆಗಳೊಂದಿಗೆ ಹೋರಾಡಲು ಕಷ್ಟಪಡುತ್ತಿದ್ದೇನೆ. ಪ್ರೀತಿಯಲ್ಲಿ ಇರುವ ಶಕ್ತಿಯನ್ನು ಪರಿಚಯ ಮಾಡಿಕೊಟ್ಟವ ನೀನು. ಜೀವನವನ್ನು ಒಂದು ಸರಳ ಗಣಿತದ ರೀತಿ ಅರ್ಥ ಮಾಡಿಸಿದ್ದೆ. ಪ್ರತಿದಿನ ನಿನ್ನಿಂದ ಹೊಸ ವಿಚಾರಗಳನ್ನು ಕಲಿಯುತ್ತಲೇ ಇದ್ದಿದ್ದೆ.. ಈಗಲೂ ಸಹ. ನೀನು ಇಂದು ಶಾಂತಿಯ ಕ್ಷೇತ್ರವೊಂದರಲ್ಲಿ ನೆಲೆ ನಿಂತಿದ್ದೀಯಾ ಎಂಬ ನಂಬಿಕೆ ಇದೆ. ಬಾನ ಚಂದಿರ, ನಕ್ಷತ್ರ, ಗ್ಯಾಲಕ್ಸಿಗಳು ನಿನ್ನನ್ನು ಕೈಬೀಸಿ ಒಳಕ್ಕೆ ಕರೆದುಕೊಂಡಿವೆ. ನೀನು ಮತ್ತೆ ನನ್ನೊಳಗೆ ಒಂದು ಹೊಸ ನಕ್ಷತ್ರವಾಗಿ ಉದಯಿಸುತ್ತೀಯಾ ಎಂಬ ನಂಬಿಕೆಯಲ್ಲೇ ಇದ್ದೇನೆ, ನನ್ನ ಜೀವನಕ್ಕೆ ಅದೆ ದೊಡ್ಡ ಭರವಸೆ. ನನ್ನ ಜೀವನದಲ್ಲಿ ನೋಡಿದ ಅತಿ ಸರಳ ಸುಂದರ ವ್ಯಕ್ತಿತ್ವ ನಿನ್ನದು. ತೆರೆದ ಹೃದಯದೊಂದಿಗೆ ಪ್ರೀತಿ ಹಂಚಿಕೊಂಡಿದ್ದೇವು. ಶಾಂತಿಯಿಂದ ನೆಲೆಸಿರು ಸುಶಿ, ನಿನ್ನ ಕಳೆದುಕೊಂಡು 30 ದಿನ ಆಗಿರಬಹುದು, ಆದರೆ ಇಡೀ ಜೀವನ ನಿನ್ನ ಪ್ರೀತಿ ಮಾಡುತ್ತಿರುತ್ತೇನೆ. ಸುಶಾಂತ್ ಅಗಲಿ ತಿಂಗಳು, ಗೆಳತಿಯ ರಿಯಾ ಚಕ್ರವರ್ತಿ ಭಾವುಕ ಪತ್ರ Rhea on Tuesday took to social media to share adorable photos of herself and Sushant