ಬಾಲ್ಯದಲ್ಲಿ ಹೀಗಿದ್ದರು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ

Suvarna News   | Asianet News
Published : Jul 13, 2020, 05:45 PM IST

ಪ್ರಿಯಾಂಕಾ ಚೋಪ್ರಾ ತಮ್ಮ ಕಿರಿಯ ಸಹೋದರ ಸಿದ್ಧಾರ್ಥ್ ಚೋಪ್ರಾ ಬರ್ಥ್‌ಡೇಯಂದು ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಹಂಚಿಕೊಂಡ ಪ್ರಿಯಾಂಕಾ, 'ನೀವು ನನ್ನ ಪುಟ್ಟ ಸಹೋದರನಂತೆ ಕಾಣುವ ಸಮಯವನ್ನು ಮರಳಿ ತರಲು ನಾನು ಬಯಸುತ್ತೇನೆ. ನನ್ನ ಜನ್ಮದಿನದ ನಂತರ ನಾನು ನನ್ನ ಜನ್ಮದಿನವನ್ನು ಕೌಂಟ್‌ ಮಾಡುತ್ತಿದ್ದೆ' ಎಂದಿದ್ದಾರೆ, ಪ್ರಿಯಾಂಕಾಳ ಬರ್ಥ್‌ಡೇ ಸಹೋದರನ ಜನ್ಮದಿನದ 6 ದಿನಗಳ ನಂತರ ಅಂದರೆ ಜುಲೈ 18ರಂದು. ಪ್ರಿಯಾಂಕಾ ಅವರು ತಮ್ಮ ಮೈ ಬಣ್ಣದಿಂದಾಗಿ ಅನೇಕ ಬಾರಿ ಅವಮಾನಗಳನ್ನು ಎದುರಿಸಬೇಕಾಗಿತ್ತು, ಎಂಬ ವಿಷಯವನ್ನು ಹಿಂದೊಮ್ಮೆ ಹಂಚಿಕೊಂಡಿದ್ದರು. ಪಿಗ್ಗಿಯ ಬಾಲ್ಯದ ಪೋಟೋಗಳು ಇಲ್ಲಿವೆ.

PREV
111
ಬಾಲ್ಯದಲ್ಲಿ ಹೀಗಿದ್ದರು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ

ಬಾಲ್ಯದಲ್ಲಿ ಪ್ರಿಯಾಂಕಾಂಗೆ ಎಲ್ಲರೂ 'ಕಾಲಿ-ಕಲುಟಿ' ಎಂದು ಕರೆದು ಅವಮಾನ ಮಾಡುತ್ತಿದ್ದರಂತೆ. ವಾಸ್ತವವಾಗಿ, ಕಂದು ಮೈ ಬಣ್ಣ ಹಾಗೂ ಮೂಗಿನ ವಿನ್ಯಾಸಕ್ಕಾಗಿ ಆಗಾಗ ಜನರ ಅವಹೇಳನಕ್ಕೆ ಗುರಿಯಾಗಬೇಕಾಗಿತ್ತು.
 
211

ಜುಲೈ 18, 1982ರಂದು ಜಮ್ಷೆಡ್ಪುರದಲ್ಲಿ ಜನಿಸಿದ ಪ್ರಿಯಾಂಕಾ ಅವರ ತಂದೆ ಅಶೋಕ್ ಚೋಪ್ರಾ ಮತ್ತು ತಾಯಿ ಮಧು ಚೋಪ್ರಾ ಸೈನ್ಯದಲ್ಲಿ ವೈದ್ಯರಾಗಿದ್ದರು. ಪೋಷಕರ ಕೆಲಸದ ಕಾರಣದಿಂದಾಗಿ ಜಮ್ಷೆಡ್ಪುರದ ಹೊರತಾಗಿ ದೆಹಲಿ, ಪುಣೆ, ಲಕ್ನೋ, ಬರೇಲಿ, ಲಡಾಖ್, ಚಂಡೀಗಢ ಮತ್ತು ಅಂಬಾಲಾದಲ್ಲಿ ನಟಿ ಬಾಲ್ಯವನ್ನು ಕಳೆದರು.

311

ಅವರು ಲಖ್ನೋ (ಲಾ ಮಾರ್ಟಿನಿಯರ್ ಗರ್ಲ್ಸ್ ಸ್ಕೂಲ್) ಮತ್ತು ಬರೇಲಿ (ಸೇಂಟ್ ಮಾರಿಯಾ ಗೊರೆಟ್ಟಿ ಕಾಲೇಜು) ದಲ್ಲಿ ಓದಿದ ಪ್ರಿಯಾಂಕ 13ನೇ ವಯಸ್ಸಿನಲ್ಲಿ, ಶಿಕ್ಷಣಕ್ಕಾಗಿ ಬೋಸ್ಟನ್‌ಗೆ ತೆರಳಿದರು. ಮೂರು ವರ್ಷಗಳ ನಂತ ಬರೇಲಿಯ ಆರ್ಮಿ ಶಾಲೆಯಿಂದ ಪ್ರೌಢ ಶಾಲೆ ಮುಗಿಸಿದರು.
 
411

ಪ್ರಿಯಾಂಕಾ ವಿದೇಶದಿಂದ ಹಿಂದಿರುಗಿದಾಗ, ಅವಳ ಆಂಟಿ 'ಕಾಲಿ-ಕಲುಟಿ' ಎಂದು ಕರೆದು ಕೀಟಲೆ ಮಾಡುತ್ತಿದ್ದರಂತೆ.ಇದರಿಂದ ಎಲ್ಲ ಮಕ್ಕಳಂತೆ ಪ್ರಿಯಾಂಕಾರ ಆತ್ಮವಿಶ್ವಾಸವೂ ಕಡಿಮೆಯಾಗತೊಡಗಿತು. ಮತ್ತೊಂದೆಡೆ, ತಂದೆ ಉನ್ನತ ಶಿಕ್ಷಣಕ್ಕಾಗಿ ಮಗಳನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಲು ತಯಾರಿ ಪ್ರಾರಂಭಿಸಿದರು.

511

ಆ ಸಮಯದಲ್ಲಿ ಪ್ರಿಯಾಂಕಾಳ ತಾಯಿ ತೆಗೆದುಕೊಂಡ ಒಂದು ನಿರ್ಧಾರದಿಂದ ನಟಿಯ ಜೀವನವೇ ಬದಲಾಯಿಸಿತು. 

611

ವಾಸ್ತವವಾಗಿ, ಕಾಲೇಜಿಗಾಗಿ ತೆಗಿಸಿದ ಪ್ರಿಯಾಂಕಾಳ ಪಾಸ್ಪೋರ್ಟ್ ಸೈಜ್‌ನ ಫೊಟೋವನ್ನು ತಾಯಿ ಮಿಸ್ ಇಂಡಿಯಾ ಸ್ಪರ್ಧೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಅವರು ಯಾರಿಗೂ ಹೇಳಿರಲಿಲ್ಲವೂ ಇಲ್ಲ.

711

ಪ್ರಿಯಾಂಕಾಳ ಫೋಟೋಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ಆ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರಿಯಾಂಕಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಒಂದು ದಿನ ಕಾಲ್‌ ಬಂದಾಗಲೇ ಈ ವಿಷಯ ಎಲ್ಲರಿಗೂ ತಿಳಿಯಿತು.ಪ್ರಿಯಾಂಕಾ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಗಳಿಸಿದ ಅದೇ ವರ್ಷ ವಿಶ್ವ ಸುಂದರಿ ಪ್ರಶಸ್ತಿಯನ್ನೂ ಗೆದ್ದರು.

811

ಇದರ ನಂತರ ಪ್ರಿಯಾಂಕಾ ಚೋಪ್ರಾ ಸಿನಿಮಾಗಳತ್ತ ಮುಖ ಮಾಡಿದರು. ಉದ್ಯಮಕ್ಕೆ ಬಂದ ಕೆಲವು ವರ್ಷಗಳ ನಂತರ ರಾಷ್ಟ್ರೀಯ ಪ್ರಶಸ್ತಿ ಗೆಲ್ಲುವ ಮೂಲಕ ವಿಮರ್ಶಕರ ಬಾಯಿ ಮುಚ್ಚಿದರು. 'ಬಾಜಿರಾವ್ ಮಸ್ತಾನಿ', 'ಮೇರಿ ಕೋಮ್', 'ಬರ್ಫಿ', 'ಫ್ಯಾಶನ್', ಡಾನ್ ಸಿಕ್ವೆಲ್‌, 'ಕಾಮಿನಿ', 'ಎತ್ರಾಜ್' ಮುಂತಾದ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ ಬಾಲಿವುಡ್‌ ನಟಿ ಪಿಗ್ಗಿ.

911

ಹಾಲಿವುಡ್ ಸರಣಿಗಳಾದ ಕ್ವಾಂಟಿಕೋ ಜೊತೆಗೆ ಬೇವಾಚ್, ಎ ಕಿಡ್ ಲೈಕ್ ಜ್ಯಾಕ್, ಐನ್ಟ್ ಇಟ್ ರೊಮ್ಯಾಂಟಿಕ್ ಮತ್ತು ವಿ ಕ್ಯಾನ್ ಬಿ ಹೀರೋಸ್ ಚಿತ್ರಗಳಲ್ಲೂ ಪ್ರಿಯಾಂಕಾ ಚೋಪ್ರಾ ಕೆಲಸ ಮಾಡಿದ್ದಾರೆ. ಶೀಘ್ರದಲ್ಲೇ ದಿ ಮ್ಯಾಟ್ರಿಕ್ಸ್ ಮತ್ತು ದಿ ವೈಟ್ ಟೈಗರ್‌ನಲ್ಲಿಯೂ ಕಾಣಿಸಿಕೊಳ್ಳಲ್ಲಿದ್ದಾರೆ.

1011

 'ದಿ ಹೀರೋ' (2003), 'ಅಂದಾಜ್' (2003), 'ಪ್ಲಾನ್' (2004), 'ಎಟ್ರಾಜ್' (2004), 'ಕ್ರಿಶ್' (2006), 'ಫ್ಯಾಶನ್' (2008), 'ಕಾಮಿನಿ' (2009) ), 'ಡಾನ್ 2' (2011), 'ಅಗ್ನಿಪತ್' (2012), 'ಬರ್ಫಿ' (2 ಜಂಜೀರ್ '(2013),' ಮೇರಿ ಕೋಮ್ '(2014),' ದಿಲ್ ಧಡಕ್ನೆ ದೋ '(2015),' ಬಾಜಿರಾವ್ ಮಸ್ತಾನಿ '( 2015) ಹೀಗೆ ಪ್ರಿಯಾಂಕಳ ನಟಿಸಿದ ಬಾಲಿವುಡ್‌ ಸಿನಿಮಾದ ಪಟ್ಟಿ ತುಂಬಾ ಉದ್ದ ಇದೆ.
 
1111

ಜೋಧಪುರದ ಉಮ್ಮದ್ ಭವನ ಅರಮನೆಯಲ್ಲಿ ಹಿಂದೂ ಮತ್ತು ನಂತರ ಕ್ರಿಶ್ಚಿಯನ್ ಪದ್ಧತಿಗಳಂತೆ 2018ರ ಡಿಸೆಂಬರ್‌ನಲ್ಲಿ ಅಮೆರಿಕದ ಗಾಯಕ ನಿಕ್ ಜೊನಾಸ್‌ರನ್ನು ವಿವಾಹವಾದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories